ಪುತ್ತೂರು: ಪರ್ಲಡ್ಕ ಸಮೀಪದ ಗೋಳಿಕಟ್ಟೆಯಲ್ಲಿ ಆವರಣಗೋಡೆ ಕುಸಿತಗೊಂಡು ಮಹಿಳೆಯೊಬ್ಬರು ಮೃತಪಟ್ಟ ಬೆನ್ನಲ್ಲೇ ಪರಿಸರದ ಗೋಳಿಕಟ್ಟೆಯಲ್ಲಿ ಧರೆ ಕುಸಿದು ಮನೆಯೊಂದು ಅಪಾಯದಲ್ಲಿರುವ ಕುರಿತು ನಗರಸಭಾ ಸ್ಥಳೀಯ ಸದಸ್ಯೆ ದೀಕ್ಷಾ ಪೈ ಅವರ ಮಾಹಿತಿಯಂತೆ ತಹಶೀಲ್ದಾರ್ ರಮೇಶ್ ಬಾಬು ಅವರು ಸ್ಥಳ ಪರೀಶೀಲನೆ ಮಾಡಿದರು.
ಧರೆಯ ಕೆಳಗಡೆ ಖಾಸಗಿ ವ್ಯಕ್ತಿಯೊಬ್ಬರು ಜಾಗದ ಬೌಂಡರಿಯಲ್ಲಿ ಮಣ್ಣು ಅಗೆತ ಮಾಡಿದ ಹಿನ್ನೆಲೆಯಲ್ಲಿ ಮೇಲಿನಿಂದ ಮಣ್ಣು ಸಡಿಲಗೊಂಡಿದ್ದು, ಧರೆಯ ಮೇಲ್ಬಾಗದ ಮನೆ ಅಪಾಯದ ಸ್ಥಿತಿಯಲ್ಲಿದೆ. ಈ ಕುರಿತು ಸ್ಥಳ ಪರೀಶೀಲನೆ ಮಾಡಲಾಗಿದೆ.