HomePage_Banner
HomePage_Banner
HomePage_Banner
HomePage_Banner

ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಪದಪ್ರದಾನ‌ | ಜೀವನ, ಕಾರ್ಯಶೈಲಿಯಿಂದ ಬದಲಾವಣೆಯ ಅವಕಾಶ ತೆರೆಯಿಸುತ್ತದೆ-ಪ್ರೊ|ಝೇವಿಯರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಹಾಮಾರಿ ಕೊರೋನಾ ವೈರಸ್ ಮನುಷ್ಯನ ಜೀವನಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ಅದರಂತೆ ನಮ್ಮ ಜೀವನದಲ್ಲಿನ ಜೀವನಶೈಲಿ, ಕಾರ್ಯಶೈಲಿಯಿಂದ ಬದಲಾವಣೆಯ ಅವಕಾಶಗಳ ಪರ್ವ ತೆರೆದುಕೊಳ್ಳುತ್ತದೆ ಎಂದು ಪುತ್ತೂರಿನ ಹಿರಿಯ ರೋಟರಿ ಸಂಸ್ಥೆ ಎನಿಸಿದ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರು ಹೇಳಿದರು.

ಅವರು ಜು.೯ ರಂದು ಸುದಾನ ಶಾಲೆಯ ಎಡ್ವರ್ಡ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಸಂಜೆ ಜರಗಿದ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ೨೦೨೦-೨೧ನೇ ಸಾಲಿನ ಪದಪ್ರದಾನ ಸರಳ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು. ಅವಕಾಶಗಳು ಅನಿರೀಕ್ಷಿತವಾಗಿ ಹುಡುಕಿ ಬಂದಾಗ ಅವುಗಳನ್ನು ಎರಡೂ ಕೈಗಳಿಂದ ಬಾಚಿದಾಗ ನಾವು ಜೀವನದಲ್ಲಿ ಯಶಸ್ವಿಯನ್ನು ಕಂಡುಕೊಳ್ಳುವೆವು. ಹಿಂದೆ ಎಲ್ಲರೂ ಮುಂದೆ ಬನ್ನಿ, ಹತ್ತಿರ ಬನ್ನಿ ಎನ್ನುತ್ತಿದ್ದೆವು. ಆದರೆ ಕೊರೋನಾ ವೈರಸ್‌ನಿಂದಾಗಿ ದೂರ ದೂರ ನಿಲ್ಲುವ, ಬಾಯಿ ಮುಚ್ಚಿಕೊಳ್ಳುವ ಸ್ಥಿತಿಗೆ ಬಂದುಬಿಟ್ಟಿದ್ದು, ಇದು ಮುಂದಿನ ದಿನಗಳಲ್ಲೂ ಹೀಗೆಯೇ ಮುಂದುವರೆದರೆ ಬಹಳ ಕಷ್ಟವಾಗಲಿದೆ. ಅಲ್ಲದೆ ಇದರಿಂದಾಗಿ ಸಾಮಾಜಿಕ ಮೌಲ್ಯಗಳು ಬದಲಾದರೆ ಅದು ಮತ್ತಷ್ಟು ವಿಷಮಸ್ಥಿತಿಗೆ ತಲುಪಬಲ್ಲುದು. ರೋಟರಿ ಸ್ವರ್ಣದಲ್ಲಿ ಮಹಿಳಾಮಣಿಗಳೇ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುವುದು ಇತರ ಕ್ಲಬ್‌ಗಳಿಗೂ ಪ್ರೇರೇಪಣೆ ಎನಿಸಬಲ್ಲುದಾಗಿದೆ ಎಂದರು.

ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದ ಡಿ.ರವರು ಮಾತನಾಡಿ, ಜಿಲ್ಲಾ ಗವರ್ನರ್‌ರವರ ಜಿಲ್ಲಾ ಪ್ರಾಜೆಕ್ಟ್ ಎನಿಸಿದ ವನಮಹೋತ್ಸವ ಕಾರ್ಯಕ್ರಮ, ಉಪ್ಪು, ಎಣ್ಣೆ, ಸಕ್ಕರೆ ಕಡಿಮೆ ಮಾಡಿ, ವ್ಯಾಯಾಮ ಮಾಡುವ ಮೂಲಕ ಆರೋಗ್ಯ ವೃದ್ಧಿಸುವುದು, ಶಾಲೆಗಳಲ್ಲಿನ ಶುಚಿತ್ವದ, ನೀರಿನ ಬಗ್ಗೆ ಗಮನ ನೀಡುವುದು, ಯಾವುದೇ ಅಹಿತಕರ ಘಟನೆ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಕುರಿತು ಅರಿವು ಮೂಡಿಸುವುದು ಇತ್ಯಾದಿ ಕಾರ್ಯಕ್ರಮಗಳಿಗೆ ಒತ್ತು ನೀಡುವಂತಾಗಬೇಕು. ರೋಟರಿಯಲ್ಲಿನ ಅಜಾತಶತ್ರು, ಕಾಯಕವೇ ಕೈಲಾಸ, ರೋಟರಿ ಎಂದರೆ ಜೀವ ಎಂಬಂತೆ ಕರ್ತವ್ಯ ನಿರ್ವಹಿಸುವ ಆಸ್ಕರ್ ಆನಂದ್‌ರವರ ಪತ್ನಿ ಸೆನೋರಿಟ ಆನಂದ್‌ರವರು ಈ ಬಾರಿ ಅಧ್ಯಕ್ಷೆಯಾಗಿರುವುದು ಅಭಿನಂದನೀಯ. ಮುಂದಿನ ದಿನಗಳಲ್ಲಿ ಕ್ಲಬ್ ಉತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಉತ್ತುಂಗಕ್ಕೇರಲಿ ಎಂದು ಹಾರೈಸಿದರು.

ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಮಾಜಿ ಅಧ್ಯಕ್ಷೆ ಪ್ರಮೀಳಾ ರಾವ್ ಮಾತನಾಡಿ, ರೋಟರಿ ಸ್ವರ್ಣದಲ್ಲಿ ಪ್ರಸ್ತುತ ವರ್ಷ ಅಧ್ಯಕ್ಷೆ, ಕಾರ್ಯದರ್ಶಿ ಹಾಗೂ ಸಾರ್ಜಂಟ್ ಎಟ್ ಆರ್ಮ್ಸ್ ಹುದ್ದೆಯನ್ನು ಮಹಿಳೆಯರೆ ಹೊಂದಿರುವುದು ಬಹಳ ಹೆಮ್ಮೆ ಎನಿಸುತ್ತದೆ. ವೈಯಕ್ತಿಕ ವಿಚಾರಗಳನ್ನು ಮಾತನಾಡಲು ಸಾಧ್ಯವಾಗದು ಎನ್ನುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯಲ್ಲಿ ಹಿಂದೆಯಿಂದಲೂ ಮಹಿಳೆಯರನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ೧೯೮೬ರ ಬಳಿಕ ರೋಟರಿ ಸಂಸ್ಥೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುವುದು ಮೊದಲ್ಗೊಂಡಿತ್ತು. ಮಾತು ಕಡಿಮೆ, ದುಡಿಮೆ ಜಾಸ್ತಿ ಎಂಬಂತೆ ನೂತನ ಅಧ್ಯಕ್ಷೆ ಸೆನೋರಿಟರವರು ಕ್ಲಬ್ ಏಳಿಗೆಯಲ್ಲಿ ಶ್ರಮಿಸಬಲ್ಲರು ಎಂಬ ಆಶಯ ನನ್ನದಾಗಿದೆ ಎಂದರು.

ವಲಯ ಸೇನಾನಿ ಮನೋಹರ್ ಕುಮಾರ್‌ರವರು ಕ್ಲಬ್ ಬುಲೆಟಿನ್ `ಸ್ವರ್ಣ ದೀಪ’ ಅನಾವರಣಗೊಳಿಸಿ ಮಾತನಾಡಿ, ರೋಟರಿ ಎಂಬ ಮೂರಕ್ಷರದ ಅಂತರ್ರಾಷ್ಟ್ರೀಯ ಸೇವಸಂಸ್ಥೆಯು ತನ್ನ ನಿಸ್ವಾರ್ಥ ಸೇವಾತತ್ಪರತೆಯಲ್ಲಿ ಪ್ರಸ್ತುತ ದಿನಗಳಲ್ಲಿ ಜಗದಗಲಕ್ಕೂ ತನ್ನ ಕಾರ್ಯವ್ಯಾಪ್ತಿಯಿಂದ ಛಾಪು ಮೂಡಿಸಿದೆ. ಪ್ರತಿ ವರ್ಷವೂ ಅತ್ಯಂತ ಶ್ರೇಷ್ಟ ಧ್ಯೇಯವಾಕ್ಯಗಳನ್ನೊಳಗೊಂಡು ಕಾರ್ಯಕ್ರಮಗಳನ್ನು ಆಯೋಜಿಸಿ ಮುಂಚೂಣಿಯಲ್ಲಿದ್ದು ಸಮಾಜದ ಏಳಿಗೆಗೆ, ಪ್ರಗತಿಗೆ ಮತ್ತು ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುತ್ತದೆ. ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಇಬ್ಬರು ಮಹಿಳಾಮಣಿಗಳನ್ನು ನಾಯಕತ್ವದ ಚುಕ್ಕಾಣಿಯನ್ನು ಹಿಡಿಯುವಂತೆ ಮಾಡಿ ವಿಭಿನ್ನತೆಯಲ್ಲೂ ಏಕತೆಯನ್ನು ಮೆರೆಯುವುದರೊಂದಿಗೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ ಎಂದರು.

ನಿರ್ಗಮನ ಅಧ್ಯಕ್ಷ ಜಯಂತ್ ಶೆಟ್ಟಿಯವರು ಮಾತನಾಡಿ, ಕೊರೋನಾ ವೈರಸ್ ಅಡಚಣೆಯಿಂದ ನನಗೆ ಕೇವಲ ಏಳು ತಿಂಗಳು ಮಾತ್ರ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿತ್ತು. ಬಡವರಿಗೆ, ನಿರ್ಗತಿಕರಿಗೆ ಸಹಾಯಹಸ್ತ ಚಾಚುವ ವಿಷಯವನ್ನು ನಮ್ಮ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರ ಒಮ್ಮತದಿಂದ ಫಲಾನುಭವಿಗಳನ್ನು ಗುರುತಿಸಿ ನೆರವು ನೀಡಿದ್ದೇವೆ ಎಂಬ ಆತ್ಮತೃಪ್ತಿ ನನಗಿದೆ. ಕ್ಲಬ್‌ನ ಹೆಸರೇ ಸ್ವರ್ಣ. ಹಾಗೆಯೇ ಸ್ವರ್ಣದ ಹೊಳಪು ನಾವು ಮಾಡುವ ಸಮಾಜಮುಖಿ ಕಾರ್ಯಗಳಿಂದ ಬಂದಿದೆ ಎನ್ನುವುದಕ್ಕೆ ಖುಶಿಯಾಗುತ್ತದೆ. ನನ್ನ ಅವಧಿಯಲ್ಲಿ ಸಹಕಾರ ನೀಡಿ ಪ್ರೋತ್ಸಾಹಿಸಿದ್ದಕ್ಕೆ ನಾನು ಕೃತಜ್ಞನಾಗಿದ್ದು, ಮುಂದಿನ ತಂಡಕ್ಕೆ ಶುಭಹಾರೈಸಲಿದ್ದೇನೆ ಎಂದರು.

ನೂತನ ಪದಾಧಿಕಾರಿಗಳ ಪದಪ್ರದಾನ:
೨೦೨೦-೨೧ನೇ ಸಾಲಿನ ನೂತನ ಅಧ್ಯಕ್ಷೆ ಸೆನೋರಿಟ ಆನಂದ್, ಕಾರ್ಯದರ್ಶಿ ಆಶಾ ರೆಬೆಲ್ಲೋ, ಕೋಶಾಧಿಕಾರಿ ಆನಂದ ಮೂವಪ್ಪು, ಕ್ಲಬ್ ಸರ್ವಿಸ್ ನಿರ್ದೇಶಕ ರೋಹನ್ ಡಾಯಸ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸುಂದರ ಗೌಡ, ವೊಕೇಶನಲ್ ಸರ್ವಿಸ್ ನಿರ್ದೇಶಕ ಉದಯ ಆಚಾರ್ಯ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಸುರೇಶ್ ಪಿ, ಯೂತ್ ಸರ್ವಿಸ್ ನಿರ್ದೇಶಕ ದೇವದಾಸ್ ಪಿ, ಪೋಲಿಯೋ ಚೇರ್‌ಮ್ಯಾನ್ ವಿಜಯ್ ಡಿ’ಸೋಜ, ಟಿಆರ್‌ಎಫ್ ಚೇರ್‌ಮ್ಯಾನ್ ದೀಪಕ್ ಮಿನೇಜಸ್, ಟೀಚ್ ಚೇರ್‌ಮ್ಯಾನ್ ಆಶೋಕ್ ಆಚಾರ್ಯ, ವಿನ್ಸ್ ಚೇರ್‌ಮ್ಯಾನ್ ಪ್ರವೀಣ್ ಕುಮಾರ್ ಎಸ್, ವೆಬ್ ಚೇರ್‌ಮ್ಯಾನ್ ಸನತ್ ಕುಮಾರ್ ರೈ, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಸುಂದರ ರೈ, ಸಾರ್ಜಂಟ್ ಎಟ್ ಆರ್ಮ್ಸ್ ಸಂಧ್ಯಾ ಬೈಲಾಡಿ, ನಿಯೋಜಿತ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ, ಬುಲೆಟಿನ್ ಎಡಿಟರ್ ಮನೋಹರ್ ಕುಮಾರ್, ಜೊತೆ ಕಾರ್ಯದರ್ಶಿ ಉದಯ ಕುಮಾರ್ ಕರ್ಮಲರವರಿಗೆ ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರು ಪದಪ್ರದಾನ ಕಾರ್ಯ ನೆರವೇರಿಸಿದರು.

ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್ ವತಿಯಿಂದ ರಾಷ್ಟ್ರಮಟ್ಟದ ಕ್ರೀಡಾಪಟು ಹಾಗೂ ಕ್ರೀಡಾದರ್ಶಿನಿ ಮಾಸ ಪತ್ರಿಕೆಯ ಸಂಪಾದಕರಾದ ಸುಬ್ರಹ್ಮಣ್ಯ ಕೆ.ಎಂ ಕಾಣಿಯೂರುರವರನ್ನು ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದರವರು ರೋಟರಿ ಪಿನ್ ತೊಡಿಸಿ, ಪ್ರಮಾಣಪತ್ರ ನೀಡಿ ಕ್ಲಬ್‌ಗೆ ಸೇರ್ಪಡೆಗೊಳಿಸಿದರು. ಕ್ಲಬ್ ಸರ್ವಿಸ್ ನಿರ್ದೇಶಕ ರೋಹನ್ ಡಾಯಸ್‌ರವರು ನೂತನ ಸದಸ್ಯರ ಪರಿಚಯವನ್ನು ಮಾಡಿದರು.

ನಿರ್ಗಮನ ಅಧ್ಯಕ್ಷ/ಕಾರ್ಯದರ್ಶಿಗೆ ಸನ್ಮಾನ:
೨೦೧೯-೨೦ನೇ ಸಾಲಿನಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ಅತ್ತ್ಯುತ್ತಮ ಕಾರ್ಯ ನಿರ್ವಹಿಸಿದ ನಿರ್ಗಮನ ಅಧ್ಯಕ್ಷ ಜಯಂತ್ ಶೆಟ್ಟಿ ಹಾಗೂ ನಿರ್ಗಮನ ಕಾರ್ಯದರ್ಶಿ ಸುರೇಂದ್ರ ಆಚಾರ್ಯರವರಿಗೆ ನೂತನ ತಂಡದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಳೆದ ವರ್ಷ ಕ್ಲಬ್‌ನ ಪ್ರತಿಯೊಂದು ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತು ಸಹಕರಿಸಿದ್ದು ಮತ್ತು ಕ್ಲಬ್‌ಗೆ ಮೂರು ಪ್ರಶಸ್ತಿಗಳನ್ನು ಗಳಿಸಲು ಕಾರಣಕರ್ತರಾದ ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಆಸ್ಕರ್ ಆನಂದ್‌ರವರನ್ನು ಈ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷ ಶಾಲು ಹೊದಿಸಿ ಅಭಿನಂದಿಸಿದರು.

ಜಿಲ್ಲಾ ಚೇರ್‌ಮ್ಯಾನ್‌ಗಳನ್ನು ಗುರುತಿಸುವಿಕೆ:
ಕ್ಲಬ್‌ನ ಸದಸ್ಯರಾಗಿದ್ದು ಜಿಲ್ಲಾ ಮಟ್ಟದಲ್ಲಿ ಚೇರ್‌ಮ್ಯಾನ್‌ಗಳಾಗಿ ಕರ್ತವ್ಯ ನಿರ್ವಹಿಸಲಿರುವ ವಲಯ ಸೇನಾನಿ ಮನೋಹರ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಜಯಂತ್ ಶೆಟ್ಟಿ, ಮಾಜಿ ಅಧ್ಯಕ್ಷ ಸುರೇಶ್ ಎಂ.ರವರನ್ನು ಗುರುತಿಸಿ, ಹೂಗಳನ್ನು ನೀಡಿ ಅಭಿನಂದಿಲಾಯಿತು.

ಕ್ಲಬ್‌ನ ಜಿಎಸ್‌ಆರ್ ಚಿದಾನಂದ ಬೈಲಾಡಿ, ನೂತನ ಅಧ್ಯಕ್ಷೆ ಸೆನೋರಿಟ ಆನಂದ್‌ರವರ ಪತಿ ಆಸ್ಕರ್ ಆನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಸದಸ್ಯ ಅಶೋಕ್ ಆಚಾರ್ಯ ಪ್ರಾರ್ಥಿಸಿದರು. ನಿರ್ಗಮನ ಅಧ್ಯಕ್ಷ ಜಯಂತ್ ಶೆಟ್ಟಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಆಶಾ ರೆಬೆಲ್ಲೋ ವಂದಿಸಿದರು. ನಿಯೋಜಿತ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ, ಸಾರ್ಜಂಟ್ ಎಟ್ ಆರ್ಮ್ಸ್ ಸಂಧ್ಯಾ ಬೈಲಾಡಿ, ದೀಪಕ್ ಬೊಳ್ವಾರು, ದಿನೇಶ್ ಆಚಾರ್‌ರವರು ಪದಪ್ರದಾನ ಅಧಿಕಾರಿ ಹಾಗೂ ಅತಿಥಿಗಳ ಪರಿಚಯ ಮಾಡಿದರು. ನಿರ್ಗಮಿತ ಕಾರ್ಯದರ್ಶಿ ಸುರೇಂದ್ರ ಆಚಾರ್ಯ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಉದಯ ಕುಮಾರ್ ಕರ್ಮಲ ಹಾಗೂ ಮಾಜಿ ಅಧ್ಯಕ್ಷ ಚಂದ್ರಶೇಖರ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ಲಕ್ಕಿ ರೊಟೇರಿಯನ್ ಕೂಪನ್ ಅನ್ನು ಏರ್ಪಡಿಸಿದ್ದು, ಇದರಲ್ಲಿ ಜಿಎಸ್‌ಆರ್ ಚಿದಾನಂದ ಬೈಲಾಡಿಯವರು ಲಕ್ಕಿ ರೊಟೇರಿಯನ್ ಆಗಿ ಮೂಡಿಬಂದರು. ಕಾರ್ಯಕ್ರಮಕ್ಕೆ ಮುನ್ನ ಕ್ಲಬ್ ವತಿಯಿಂದ ಸ್ಯಾನಿಟೈಸರ್, ಉಚಿತ ಮಾಸ್ಕ್, ದೇಹದ ಉಷ್ಣತೆ ಪರೀಕ್ಷಿಸುವ ಥರ್ಮಾಮೀಟರ್‌ನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು. ಸಭಾಂಗಣದಲ್ಲಿ ಕೇವಲ ೫೦ ಮಂದಿಗೆ ಕುಳಿತುಕೊಳ್ಳುವ ಆಸನಗಳನ್ನು ಸಾಮಾಜಿಕ ಅಂತರದೊಂದಿಗೆ ಜೋಡಿಸಿಡಲಾಗಿತ್ತು.

ಅಂತರ್ರಾಷ್ಟ್ರೀಯ ಸೇವಾಸಂಸ್ಥೆ ಎನಿಸಿದ ರೋಟರಿ ಸಂಸ್ಥೆಯ ಸ್ವರ್ಣ ಕ್ಲಬ್‌ನ ಅಧ್ಯಕ್ಷೆಯಾಗಿ ನನಗೆ ಅವಕಾಶ ಸಿಕ್ಕಿದ್ದು ಭಾಗ್ಯವೆನಿಸಿದೆ ಅಲ್ಲದೆ ಅಂತರ್ರಾಷ್ಟ್ರೀಯ ಅಧ್ಯಕ್ಷರ ಧ್ಯೇಯವಾಕ್ಯವಾಗಿರುವ ರೋಟರಿ ಅವಕಾಶಗಳನ್ನು ತೆರೆಯಿಸುತ್ತದೆ ಎಂಬ ಮಾತಿನಂತೆ ನನಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವಕಾಶದ ಬಾಗಿಲು ತೆರೆದುಕೊಳ್ಳುವಂತೆ ಮಾಡಿದೆ. ಮುಂದಿನ ಹತ್ತು ವರ್ಷಗಳ ಯೋಜನೆ, ಯೋಚನೆಗಳು ನನ್ನ ಮುಂದಿದೆ. ಮುಂದಿನ ದಿನಗಳಲ್ಲಿ ಕ್ಲಬ್ ನಿರ್ವಹಿಸುವ ಪ್ರತಿಯೊಂದು ಕಾರ್ಯ ಚಟುವಟಿಕೆಗಳಿಗೆ ಸದಸ್ಯರ ಸಂಪೂರ್ಣ ಸಹಕಾರ ಹಾಗೂ ಪ್ರೋತ್ಸಾಹವನ್ನು ಆಶಿಸುತ್ತಿದ್ದೇನೆ. ಈ ಮೂಲಕ ನಮ್ಮ ಕ್ಲಬ್ ಆಗಿರುವ ಸ್ವರ್ಣದ ಹೆಸರನ್ನು ಸ್ವರ್ಣದಂತೆ ಪ್ರಜ್ವಲಿಸೋಣಸೆನೋರಿಟ ಆನಂದ್, ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಸ್ವರ್ಣ

ವೊಕೇಶನಲ್ ಸರ್ವಿಸ್‌ನಡಿಯಲ್ಲಿ ಕೋವಿಡ್ ಪ್ರಯುಕ್ತ ಪುತ್ತೂರು ಸರಕಾರಿ ಆಸ್ಪತ್ರೆಗೆ ಆಟೋ ಸೆನ್ಸಾರ್ ಸ್ಯಾನಿಟೈಸರ್‌ನ್ನು ಆಸ್ಪತ್ರೆಯ ದಂತ ವೈದ್ಯ ಜೈದೀಪ್‌ರವರಿಗೆ ಹಸ್ತಾಂತರಿಸಲಾಯಿತು. ಸಂಪ್ಯ ಮೂಲದ ಅಬ್ದುಲ್ ಅಝೀಝ್‌ರವರ ಮನೆ ದುರಸ್ತಿಗೆ ಧನಸಹಾಯ ನೀಡಲಾಯಿತು. ಲಿಟ್ಲ್ ಫ್ಲವರ್ ಶಾಲೆಗೆ ಮತ್ತು ಪ್ರಿಯದರ್ಶಿನಿ ಪ್ರೌಢಶಾಲೆಗೆ ಥರ್ಮಲ್ ಟೆಸ್ಟ್ ಸ್ಕ್ಯಾನರ್ ಅನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ರೂ.೩ ಕೋಟಿಯ ಸರಕಾರಿ ಸಮುದಾಯ ಭವನದ ರೂವಾರಿ ಮೌರಿಸ್ ಮಸ್ಕರೇನ್ಹಸ್‌ರವರಿಗೆ ಸನ್ಮಾನ…
ಸುಮಾರು ರೂ.೩ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಮುದಾಯ ಭವನದ ರೂವಾರಿ, ಸರಕಾರಿ ವಾಹನ ಚಾಲಕರ ಸಂಘದಿಂದ ನಿರ್ಮಿಸಲ್ಪಟ್ಟ ಸಾರಥಿ ಭವನದ ಸಾರಥಿ, ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಪ್ರಸ್ತುತ ಉಪಾಧ್ಯಕ್ಷ ಹಾಗೂ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಸಮಿತಿಯ ಸದಸ್ಯರೂ, ಇಂಡಿಯನ್ ಕ್ರಿಶ್ಚಿಯನ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರೂ, ಪುತ್ತೂರು ಕ್ರಿಶ್ಚಿಯನ್ ಯೂನಿಯನ್‌ನ ಸ್ಥಾಪಕ ಅಧ್ಯಕ್ಷರೂ ಆಗಿರುವ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರನ್ನು ಈ ಸಂದರ್ಭದಲ್ಲಿ ಗುರುತಿಸಿ ಕಮ್ಯೂನಿಟಿ ಸರ್ವಿಸ್ ವತಿಯಿಂದ ಸನ್ಮಾನಿಸಲಾಯಿತು. ಮೌರಿಸ್ ಮಸ್ಕರೇನ್ಹಸ್‌ರವರ ಪತ್ನಿ ಶಿಕ್ಷಕಿ ಜ್ಯೂಲಿಯಾನಾ ಮೋರಸ್, ಮಗಳು ಮನೀಷಾ ಉಪಸ್ಥಿತರಿದ್ದರು. ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾದ ಸುರೇಶ್ ಪಿ.ರವರು ಸನ್ಮಾನಿತರನ್ನು ಪರಿಚಯಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.