ಪುತ್ತೂರು: ಬನ್ನೂರು ಗ್ರಾಂ ಪಂಚಾಯತ್ ವ್ಯಾಪ್ತಿಯಲ್ಲಿ ಪಡ್ನೂರು ಗೀತಾ ಕೃಷ್ಣಪ್ಪ ರವರ ಮನೆಯಲ್ಲಿ ಕೊರೋನಾ ತಡೆ, ಸ್ವಚ್ಛ ಸೋಲಾರ್ ಮನೆ ಅಭಿಯಾನ ಅಂಗವಾಗಿ ಸ್ವಚ್ಛತೆ ಅರಿವು ಮಾಡಲಾಯಿತು. ಜನ ಶಿಕ್ಷಣ ಟ್ರಸ್ಟ್, ಗ್ರಾಮ ಪಂಚಾಯತ್, ಸೆಲ್ಕೊ ಫೌಂಡೇಷನ್ ಸಹ ಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಎಸ್ ಶೀನಪ್ಪ ಶೆಟ್ಟಿ ವೈಯಕ್ತಿಕ ಸ್ವಚ್ಛತೆ, ಜೀವನೋಪಾಯ ಮತ್ತು ಸುಸ್ಥಿರ ಅಭಿವೃದ್ಧಿಗೆ ವರದಾನವಾಗಿರುವ ನರೇಗಾ ಕೆಲಸ, ಅರ್ಹ ಕುಟುಂಬಗಳಲ್ಲಿ ಜಮೀನುಗಳಲ್ಲಿ ಪೌಷ್ಠಿಕ ತೋಟ, ತೋಟಗಾರಿಕೆ, ನೆಲ ಜಲ ಸಂರಕ್ಷಣೆ ಮತ್ತು ಜೀವನೋಪಾಯ ಸಂಪನ್ಮೂಲ ವೃದ್ಧಿಸಲು ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಮನೆ ಬೆಳಕಿಗೆ ಜೀವನಾಧಾರಿತ ಚಟುವಟಿಕೆ ನಡೆಸಲು ಅಸ್ಥಿರ ವಿದ್ಯುತ್ ಬಳಕೆ ಬಗ್ಗೆ ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ತಿಳಿಸಿದರು.
ಇದೇ ಸಂದರ್ಭದಲ್ಲಿ ಗೀತಾಕೃಷ್ಣ ನಾಯ್ಕ್ ರವರ ಮನೆಗೆ ಸೌರ ವಿದ್ಯುತ್ ದೀಪಕ್ಕೆ ಚಾಲನೆ ನೀಡಲಾಯಿತು. ನಿಕಟಪೂರ್ವ ಗ್ರಾ.ಪಂ ಸದಸ್ಯರಾದ ರತ್ನಾಕರ ಪ್ರಭು, ಪ್ರೇರಕರಾದ ಅರುಣಾ ಡಿ, ಮಮತಾ ಪಡ್ನೂರು, ಸ್ವಯಂ ಸೇವಕರಾದ ರೂಪ ಪೆರ್ವೋಡಿ, ಪುಷ್ಪಾ, ಸವಿತಾ, ಅಂಗನವಾಡಿ ಕಾರ್ಯಕರ್ತೆ ವೀಣಾ ಪಡ್ನೂರು ಉಪಸ್ಥಿತರಿದ್ದರು.