ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 3.214 ಕೆ.ಜಿ ತೂಕದ ಬೆಳ್ಳಿಯ ಕಾಲುದೀಪವನ್ನು ಬೆದ್ರಾಳ ಸಮೀಪದ ಪಳನೀರು ಯಸ್.ಯಸ್ ಜಿ. ಸತ್ಯನಾರಾಯಣ ಭಟ್ ಅವರು ಸಮರ್ಪಣೆ ಮಾಡಿದ್ದಾರೆ.
ರೂ. 2,08,910 ಲಕ್ಷ ಮೌಲ್ಯದ ಬೆಳ್ಳಿಯ ಕಾಲುದೀಪವನ್ನು ದೇವಳದ ಪ್ರಧಾನ ಅರ್ಚಕ ವೆಂಕಟೇಶ ಸುಬ್ರಹ್ಮಣ್ಯ ಭಟ್ ಅವರು ಪ್ರಾರ್ಥನೆ ಸಲ್ಲಿಸಿ ದಾನಿಗಳಾದ ಯಸ್.ಯಸ್. ಜಿ ಸತ್ಯನಾರಾಯಣ ಭಟ್ ಅವರ ಮೂಲಕ ದೀಪ ಬೆಳಗಿಸಿ ದೇವರಿಗೆ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ದೇವಳದ ಕಚೇರಿ ಸಿಬ್ಬಂದಿ ಕೆ.ರವೀಂದ್ರ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯೆ ರೋಹಿಣಿ ಆಚಾರ್ಯ ಉಪಸ್ಥಿತರಿದ್ದರು.