ಕಡಬ: ಬಿಹಾರದಿಂದ ಬಂದಿದ್ದ 22ವರ್ಷ ಪ್ರಾಯದ ನೆಟ್ಟಣ ರೈಲ್ವೆ ಸಿಬ್ಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು , ಈ ಹಿನ್ನಲೆಯಲ್ಲಿ ರೈಲ್ವೇ ಕ್ವಾಟ್ರಸ್ ಹಾಗೂ ಅವರು ಭೇಟಿ ನೀಡಿದ ನೆಟ್ಟಣದ ಅಲಂಕಾರ್ ಜನರಲ್ ಸ್ಟೋರ್ ನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.
15 ದಿನಗಳ ಹಿಂದೆ ಬಿಹಾರದಿಂದ ಬಂದ ರೈಲ್ವೇ ಸಿಬ್ಬಂದಿ ಇಲ್ಲಿ ಕ್ವಾರಂಟೈನ್ ಒಳಗಾಗಿದ್ದರು, ಈ ವೇಳೆ ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆ ಗೊಳಪಡಿಸಿದ್ದು ಅದರ ವರದಿ ಇಂದು ಪಾಸಿಟಿವ್ ಬಂದಿದೆ.ಈ ಹಿನ್ನೆಲೆಯಲ್ಲಿ ಕಡಬ ಎ.ಎಸ್.ಐ.ಸುರೇಶ್, ಆರೋಗ್ಯ ಸಹಾಯಕಿ ಮಾಲತಿ, ಗ್ರಾಮಕರಣಿಕ ಶ್ರೀರಾಜ್ ಸಹಾಯಕ ಶ್ರೀನಿವಾಸ, ಪಂಚಾಯತ್ ಸಿಬ್ಬಂದಿ ಶೇಷಪ್ಪ ಸ್ಥಳಕ್ಕೆ ತೆರಳು ಸೀಲ್ ಡೌನ್ ಮಾಡಿ ಕೊರೋನಾ ಸೋಂಕಿತ ಯುವಕನನ್ನು ಆಸ್ಪತ್ರೆ ಗೆ ಕಳುಹಿಸಿಕೊಟ್ಟಿದ್ದಾರೆ.