- ಒಳ್ಳೆಯ ಜಗತ್ತು ಸೃಷ್ಠಿಸುವ ನಿಟ್ಟಿನಲ್ಲಿ ಜವಾಬ್ದಾರಿ ಅರಿತು ಕೆಲಸ ಮಾಡಬೇಕು -ಪ್ರತಾಪಸಿಂಹ ನಾಯಕ್
- ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗುವುದೇ ನಿಜವಾದ ಸಮಾಜ ಸೇವೆ – ಜೆರೋಮಿಯಸ್ ಪಾಯಸ್
- ಭಾವನೆಗಳು ಸೇವೆಯ ಮುಖ್ಯ ಪಾತ್ರವನ್ನು ವಹಿಸುತ್ತದೆ -ಝೇವಿಯರ್ ಡಿ’ಸೋಜಾ
- ಕೊರೋನಾ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಒತ್ತು -ರವೀಂದ್ರ ದರ್ಬೆ
ಉಪ್ಪಿನಂಗಡಿ: ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 10ರಂದು ಉಪ್ಪಿನಂಗಡಿ ರೋಟರಿ ಸಮುದಾಯ ಭವನದಲ್ಲಿ ಜರಗಿತು.
ರೋಟರಿ ವಲಯ-೪ರ ಸಹಾಯಕ ಗವರ್ನರ್ ಆಗಿರುವ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಪದಪ್ರದಾನ ಮಾಡಿದರು.ಬಳಿಕ ಮಾತನಾಡಿದ ಅವರು ಕೋವಿಡ್-19 ರೋಗ ಬಾಧೆಯಿಂದಾಗಿ ಜಗತ್ತಿನ ಜನತೆ ಸಂಕಷ್ಟದಲ್ಲಿದ್ದಾರೆ,ಅಂತಹ ದಿನಗಳನ್ನು ಎದುರುಗೊಳ್ಳುತ್ತಿರುವ ನಾವುಗಳು ಒಳ್ಳೆಯ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ, ಮನುಷ್ಯನ ಬದುಕಿನಲ್ಲಿ ಬೆಳಕು ಚೆಲ್ಲುವ ಕೆಲಸದೊಂದಿಗೆ ಸಮಾಜದಲ್ಲಿನ ಜವಾಬ್ದಾರಿಯನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದರು.
ರೋಟರಿ ಕ್ಲಬ್ ಸದಸ್ಯನಾದ ವ್ಯಕ್ತಿಗೆ ವಿಶೇಷವಾದ ಗೌರವ ಇದೆ, ಆದರೆ ಕೆಲವರಲ್ಲಿ ರೋಟರಿ ಸಂಸ್ಥೆಗೆ ವಿದೇಶಗಳಿಂದ ಬಹಳಷ್ಟು ಹಣ ಬರುತ್ತದೆ ಎಂಬ ತಪ್ಪು ಕಲ್ಪನೆ ಇದೆ,ಆದರೆ ರೋಟರಿ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಯೋರ್ವರು ತನ್ನ ದುಡಿಮೆಯ ಪಾಲಿನಿಂದ ಸಮಾಜಕ್ಕೆ ಕೊಡುವ ಉzಶ ಇಟ್ಟುಕೊಂಡು ಬಂದವರಾಗಿದ್ದು, ಇಲ್ಲಿ ಜಾತಿ, ಧರ್ಮ, ಪಕ್ಷ ಭೇದ ಇಲ್ಲದೆ ಎಲ್ಲರೂ ಒಂದೇ ಕುಟುಂಬದ ಸದಸ್ಯರ ಹಾಗೇ ಇದ್ದು, ಇದನ್ನು ಅರಿತುಕೊಂಡು ಹೊಸ ಪದಾಧಿಕಾರಿಗಳು ಇದನ್ನು ಮುನ್ನಡೆಸಬೇಕು ಎಂದರು.
ರೋಟರಿ ವಲಯ ಸೇನಾನಿ ಜೆರೋಮಿಯಸ್ ಪಾಯಸ್ ಮಾತನಾಡಿ ಅಂತರ್ರಾಷ್ಟ್ರೀಯ ಸಂಸ್ಥೆಯ ಮೂಲಕ ಪ್ರೀತಿ ಮತ್ತು ಸೇವೆ ಮಾಡುವ ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗುವುದೇ ನಿಜವಾದ ಸಮಾಜ ಸೇವೆಯಾಗಿದ್ದು, ಹೊಸ ಸದಸ್ಯರುಗಳು ಇದನ್ನು ಉತ್ತಮವಾಗಿ ಬಳಸಿಕೊಂಡು ಸಮಾಜಮುಖಿಯಾಗಿ ಗುರುತಿಸಬೇಕು ಎಂದರು.
ಮಾತೃ ಘಟಕವಾದ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರೊ|ಝೇವಿಯರ್ ಡಿೞಸೋಜಾ ಮಾತನಾಡಿ ನಮ್ಮ ಮನಸ್ಸಿನಲ್ಲಿ ಭಾವನೆಗಳು ಮೂಡಿದಾಗ ಅದು ನಮ್ಮಲ್ಲಿ ಸೇವೆಯ ಮುಖ್ಯ ಪಾತ್ರವನ್ನು ವಹಿಸುತ್ತದೆ, ಅದನ್ನು ಜೀವಂತವಾಗಿ ಇರಿಸಿಕೊಂಡು ಕೆಲಸ ಮಾಡಿದಾಗ ಅದು ಸಾರ್ಥಕವಾಗುತ್ತದೆ, ಆ ಮೂಲಕ ರೋಟರಿ ಸದಸ್ಯರು ಬೆಳೆಯಬೇಕು ಮತ್ತು ಸಂಸ್ಥೆಯ ಬೆಳವಣಿಗೆಗೂ ಕಾರಣೀಭೂತರಾಗಬೇಕು ಎಂದರು.
ಪದಗ್ರಹಣ ಮಾಡಿದ ನೂತನ ಅಧ್ಯಕ್ಷ ರವೀಂದ್ರ ದರ್ಬೆ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊರೋನಾ ಸಂಕಷ್ಟ ಕಾಲದಲ್ಲಿ ಸಂಸ್ಥೆಯನ್ನು ಮುನ್ನಡೆಸಬೇಕಾಗಿದೆ, ಈ ನಿಟ್ಟಿನಲ್ಲಿ ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಮೂಲಕ ಜನರಿಗೆ ಸೇವೆ ಒದಗಿಸಬೇಕಾಗಿದ್ದು, ಈ ರೀತಿಯಾಗಿ ಸಂಸ್ಥೆಯನ್ನು ಮುನ್ನಡೆಸುವ ವಿಶ್ವಾಸ ಇದ್ದು, ಸಂಸ್ಥೆಯ ಎಲ್ಲಾ ಸದಸ್ಯರುಗಳ ಸಹಕಾರವನ್ನು ಯಾಚಿಸಿದರು. ನಿರ್ಗಮಿತ ಅಧ್ಯಕ್ಷ ಡಿ.ಚಂದಪ್ಪ ಮೂಲ್ಯ, ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ರಾಜಾರಾಮ್, ಪೂರ್ವಾಧ್ಯಕ್ಷ ದಿವಾಕರ ಆಚಾರ್ಯ ಸಂದರ್ಭೋಚಿತವಾಗಿ ಮಾತನಾಡಿದರು.
ಸಾಧಕರಿಗೆ ಸನ್ಮಾನ:
ರೋಟರಿ ಸಹಾಯಕ ಗವರ್ನರ್ ಆಗಿದ್ದು, ಇದೀಗ ವಿಧಾನ ಪರಿಷತ್ ಸದಸ್ಯರಾಗಿರುವ ಪ್ರತಾಪಸಿಂಹ ನಾಯಕ್ರವರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಶಾಂತಾರಾಮ್, ರೋಟರಿ ನಿಕಟಪೂರ್ವ ಸಹಾಯಕ ಗವರ್ನರ್ ರಿತೇಶ್ ಬಾಳಿಗ, ನಿರ್ಗಮಿತ ಅಧ್ಯಕ್ಷ ಚಂದಪ್ಪ ಮೂಲ್ಯರನ್ನು ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಕ್ಲಬ್ನ ಗೌರವ ಸದಸ್ಯೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಶಯನಾ ಜಯಾನಂದ, ನೂತನ ಅಧ್ಯಕ್ಷ ರವೀಂದ್ರ ದರ್ಬೆಯವರ ಪತ್ನಿ ಶ್ರೀಮತಿ ಹರಿಣಿ ಮತ್ತು ಕಾರ್ಯದರ್ಶಿ ಜಗದೀಶ್ ನಾಯಕ್ರವರ ಪತ್ನಿ ಶ್ರೀಮತಿ ಆಶಾಲತಾ ಉಪಸ್ಥಿತರಿದ್ದರು.
ಹೊಸ ಸದಸ್ಯರುಗಳ ಸೇರ್ಪಡೆ:
ಸಮಾರಂಭದಲ್ಲಿ ದಿನೇಶ್ ನಾಯಕ್, ಶ್ರೀನಿವಾಸ ಪಡಿಯಾರ್, ಶ್ರೀಕಾಂತ್ ಪಟೇಲ್, ನವೀನ್ ವೇಗಸ್, ನೀರಜ್ ಕುಮಾರ್ ಇವರುಗಳಿಗೆ ಸದಸ್ಯತ್ವ ನೀಡಲಾಗಿ ಸಂಸ್ಥೆಗೆ ಸೇರ್ಪಡೆಗೊಳಿಸಲಾಯಿತು.ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ನ ಪತ್ರಿಕೆ ೞಸೇವಾ ಸಂಗಮೞವನ್ನು ಬಿಡುಗಡೆಗೊಳಿಸಲಾಯಿತು ಹಾಗೂ ಸದಸ್ಯರುಗಳಿಗೆ ಸಸಿ ವಿತರಿಸಲಾಯಿತು.
ಪದಾಧಿಕಾರಿಗಳಾದ ವಿಜಯ ಕುಮಾರ್ ಕಲ್ಲಳಿಕೆ, ಅಜೀಜ್ ಬಸ್ತಿಕ್ಕಾರ್, ಡಾ.ನಿರಂಜನ ರೈ, ಇಸ್ಮಾಯಿಲ್ ಇಕ್ಬಾಲ್, ಜಾರ್ಜ್ ನೊರೋನ್ಹಾ, ಶಿವಶಂಕರ್ ನಾಯಕ್, ಅಬೂಬಕ್ಕರ್ ಪುತ್ತ, ಅರುಣ್ ಕುಮಾರ್ ಬಿ.ಕೆ., ಹರೀಶ್ ನಾಯಕ್ ನಟ್ಟಿಬೈಲ್, ಅಬ್ದುಲ್ ಖಾದರ್ ಬಶೀರ್, ಆರ್.ಕೆ. ಸಿರಾಜ್, ಸ್ವರ್ಣೇಶ್ ಗಾಣಿಗ, ಮಹಮ್ಮದ್ ಸಮೀರ್, ಗುಣಕರ ಅಗ್ನಾಡಿ, ಜಯಾನಂದ ಕಲ್ಲಾಪು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ಜಗದೀಶ್ ನಾಯಕ್ ವಂದಿಸಿದರು. ಅಬ್ದುಲ್ ರಹಿಮಾನ್ ಯುನಿಕ್ ಕಾರ್ಯಕ್ರಮ ನಿರೂಪಿಸಿದರು.