ಪುತ್ತೂರು: ಕಬಕ ಮಸೀದಿ ಬಳಿ ವ್ಯಕ್ತಿಯೊಬ್ಬರಿಗೆ ೫ ಮಂದಿ ಹಲ್ಲೆ ನಡೆಸಿದ ಘಟನೆ ಜು.10ರಂದು ಮಧ್ಯಾಹ್ನ ಪ್ರಾರ್ಥನೆ ಬಳಿಕ ನಡೆದಿದೆ ಎಂದು ವರದಿಯಾಗಿದೆ.
ಕಬಕ ಗ್ರಾಮದ ನೀರಪಳಿಕೆ ನಿವಾಸಿ ಮಹಮ್ಮದ್ ಖಲಂದರ್(36ವ)ರವರು ಹಲ್ಲೆಗೊಳಗಾದವರು.ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ‘ನಾನು ಕಬಕ ಗ್ರಾಮದ ಕಬಕ ಮೊಯ್ದಿನ್ ಜುಮ್ಮಾ ಮಸೀದಿಗೆ ಹೋಗಿ ಮಧ್ಯಾಹ್ನ ಪ್ರಾರ್ಥನೆ ಮುಗಿಸಿ ಕೊಂಡು ಹೊರಗೆ ಬರುತ್ತಿದ್ದ ವೇಳೆ ಬಶೀರ್ ಮದಾನಿ, ಮಹಮ್ಮದ್ ಅಜೀಜ್, ರಜಾಕ್, ನಾಸೀರ್ ಸೇರಿಕೊಂಡು ಮಸೀದಿಯ ಒಳಗಡೆ ಯಾಕೆ ಗುರುಗಳ ವಿಷಯ ಪ್ರಸ್ತಾಪಿಸಿದ್ದು ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.