HomePage_Banner
HomePage_Banner
HomePage_Banner
HomePage_Banner

ನಗುಮೊಗದ ಸೇವೆ ಹೃದಯಾಂತರಾಳದಿಂದಿರಬೇಕು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿಗಳ ಕಾರ್ಯಾಗಾರದಲ್ಲಿ ಹೆಚ್.ಡಿ.ಶಿವರಾಮ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗುಮೊಗದ ಸೇವೆ ಮೇಲ್ನೊಟದಲ್ಲಿ ಇದ್ದರೆ ಸಾಲದು ಅದು ಹೃದಯಾಂತರಳಾದಿಂದ ಬರಬೇಕು. ಅಂತಹ ಸೇವೆ ಸಂಘದ ಅಭಿವೃದ್ದಿ ಮತ್ತು ಗ್ರಾಹಕರ ಮೆಚ್ಚುಗೆ ಪಡೆಯುತ್ತದೆ ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್.ಡಿ.ಶಿವರಾಮ್ ಹೇಳಿದರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಪುತ್ತೂರು ಪ್ರಧಾನ ಕಚೇರಿ ಸಹಿತ ೬ ಶಾಖೆಗಳ ಸಿಬ್ಬಂದಿಗಳಿಗೆ ತೆಂಕಿಲ ಒಕ್ಕಲಿಗ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಜು.11ರಂದು ನಡೆದ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕೊರೋನಾ ಸೋಂಕು ಹಡುವ ಭೀತಿಯ ಸಂದರ್ಭದಲ್ಲೂ ಸಾಮಾಜಿಕ ಅಂತರ ಕಾಯ್ದು ಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಅತೀ ಅಗತ್ಯ. ಇಂತಹ ಸಂದರ್ಭದಲ್ಲಿ ಅವರ ವಿಶ್ವಾಸ ಪಡೆಯಲು ಹೃದಯಾಂತರಾಳದಿಂದ ಸೇವೆ ನೀಡಬೇಕು ಎಂದು ಹೇಳಿದರು.

ಎಲ್ಲಾ ಶಾಖೆಗಳಿಗೆ ಗುರಿ:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಸಂಘದ ಚಟುವಟಿಕೆಯ ದೃಷ್ಟಿಕೋನ ಇಟ್ಟುಕೊಂಡು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಯ ಹಿತದೃಷ್ಟಿಯಿಂದ ಯಾವ ರೀತಿ ಕೆಲಸ ಕಾರ್ಯ ಮಾಡಬೇಕು ಮತ್ತು ಪ್ರತಿ ಶಾಖೆಗಳಿಗೂ ನಿಗದಿತ ಗುರಿಯನ್ನು ನೀಡಲಾಗುವುದು ಎಂದು ಹೇಳಿದರು.

ಗೌರವಾರ್ಪಣೆ:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದಲ್ಲಿ ವಿವಿಧ ಸಲಹೆ ಮಾರ್ಗದರ್ಶಕರಾಗಿರುವ ಸಂಘದ ಗೌರವ ಸಲಹೆಗಾರ ಈಶ್ವರ ಗೌಡ ಪಜಡ್ಕ ಅವರಿಗೆ ಸಂಘದ ವತಿಯಿಂದ ಗೌರವಾರ್ಪಣೆ ಮಾಡುವ ಮೂಲಕ ನೂತನವಾಗಿ ಆಲಂಗಾರಿನಲ್ಲಿ ಕಾರ್ಯಾರಾರಂಭಗೊಂಡ ಶಾಖೆಗೆ ತಮ್ಮ ಸಲಹೆ ಮಾರ್ಗದರ್ಶನ ನೀಡುವಂತೆ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ವಿನಂತಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಶಿವರಾಮ ಗೌಡ ಇಡ್ಯಪೆ, ಜಿನ್ನಪ್ಪ ಗೌಡ ಮಳವೇಲು ಉಪಸ್ಥಿತರಿದ್ದರು. ಸಿಬ್ಬಂದಿ ಅಶ್ವಿನಿ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ರಾಮಕೃಷ್ಣ ಗೌಡ ಕರ್ಮಲ ಸ್ವಾಗತಿಸಿ, ಕಡಬ ಶಾಖೆಯ ಮೆನೇಜರ್ ಧರ್ಮಪಾಲ ವಂದಿಸಿದರು. ಪುತ್ತೂರು ಪ್ರಧಾನ ಕಚೇರಿಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು. ಇತ್ತೀಚೆಗೆ ನಿಧನರಾದ ಸಂಘದ ಮಾಜಿ ನಿರ್ದೇಶಕ ಸುಬ್ಬಯ್ಯ ಗೌಡ ಕುದ್ಕುಳಿ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಕಾರ್ಯಕ್ರಮದ ನಡುವೆ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.