ಪುತ್ತೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಸುಮಾರು 7 ವರ್ಷದಿಂದ ಅಂಗರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಳ್ಯಪದವು ಕನ್ನಡ್ಕ ನಿವಾಸಿ ಹರೀಶ್ ಅವರು ಹೆಡ್ಕಾನ್ಸ್ಟೇಬಲ್ ಪದೋನ್ನತಿ ಹೊಂದಿದ್ದಾರೆ.
2008ರಲ್ಲಿ ಪೊಲೀಸ್ ಇಲಾಖೆಗೆ ಕರ್ತವ್ಯಕ್ಕೆ ಸೇರ್ಪಡೆಗೊಂಡ ಹರೀಶ್ ಅವರು ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಂಗರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಅವರು ಹೆಡ್ಕಾನ್ಸ್ಟೇಬಲ್ ಆಗಿ ಪದ್ದೋನ್ನತಿ ಹೊಂದಿದ್ದಾರೆ. ಇವರು ಸುಳ್ಯಪದವು ಕನ್ನಡ್ಕ ದಿ.ದೇವಣ್ಣ ನಾಯ್ಕ ಮತ್ತು ಸುಶೀಲಾ ದಂಪತಿ ಪುತ್ರನಾಗಿದ್ದು, ಪತ್ನಿ ದಿವ್ಯಾ, ಪುತ್ರಿ ಆತ್ಮಿಕಾ ಅವರೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.