HomePage_Banner
HomePage_Banner
HomePage_Banner
HomePage_Banner

ಅಪಾಯಕಾರಿ ಸ್ಥಿತಿಯಲ್ಲಿ ತೆಂಕಿಲ – ಕಟ್ಟತ್ತಾರು ರಸ್ತೆ | ಆತಂಕದಲ್ಲಿ ಜನತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಸಭೆ ವ್ಯಾಪ್ತಿಯ ತೆಂಕಿಲ – ಕಟ್ಟತ್ತಾರು ರಸ್ತೆ ಬಲ ಮತ್ತು ಎಡ ಪಾರ್ಶ್ವಗಳು ತುಂಬಾ ಗಿಡಗಂಟಿಗಳು ತುಂಬಿ ಬೃಹತ್ ಪೊದೆಗಳ ನಿರ್ಮಾಣ ಆಗಿದ್ದು ಅಪಾಯ ಎದುರಿಸುತ್ತಿದೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.

ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಲಘು ವಾಹನಗಳು ಸಂಚರಿಸುತ್ತಿದ್ದು, ಎರಡೆರೆಡು ವಾಹನಗಳು ಎದುರಿನಿಂದ ಮುಖಾಮುಖಿಯಾದರೆ ವಾಹನ ಮುಂದೆ ಚಲಿಸಲು ಹರಸಾಹಸ ಪಡಬೇಕಾಗುತ್ತದೆ. ಒಂದೆಡೆ ಕಿರಿದಾದ ರಸ್ತೆ, ಇನ್ನೊಂದೆಡೆ ಪೊದೆಗಳಿಂದ ಆವೃತ್ತವಾದ ನೀರು ಹರಿಯುವ ಚರಂಡಿಯಿದ್ದು, ಚಾಲಕರು ಸ್ವಲ್ಪಮಟ್ಟಿನ ಅಜಾಗರೂಕತೆ ತೋರಿಸಿದರೂ ಅಪಘಾತ ನಿಶ್ಚಿತ. ತೆಂಕಿಲ ಕಟ್ಟತ್ತಾರು ತನಕ ಕೆಲವೆಡೆ ತಿರುವಿನಿಂದ ಕೂಡಿದ ರಸ್ತೆಯ ಇಕ್ಕೆಡೆಗಳಲ್ಲಿ ಅಲ್ಲಲ್ಲಿ ಬೃಹದಾಕಾರದ ಪೊದೆಗಳು ಬೆಳೆದು ನಿಂತು ಎದುರಿನಿಂದ ಬರುವ ವಾಹನ ಕಾಣಿಸದೇ ಅದೆಷ್ಟೋ ಬಾರಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ ಎಂದು ಇಲ್ಲಿನ ಜನರಾಡಿಕೊಳ್ಳುತ್ತಿದ್ದಾರೆ. ರಸ್ತೆಗಳ ಎಡ ಮತ್ತು ಬಲ ಪಾರ್ಶ್ವಗಳ ಚರಂಡಿಯ ಮೇಲೆ ಗಿಡಗಂಟಿಗಳು ಬೆಳೆದು ಚರಂಡಿಯಲ್ಲಿನೀರು ಹರಿಯದೆ ರಸ್ತೆಯ ಮೇಲೆ ಹರಿದು ಹೋಗುವುದರಿಂದ ರಸ್ತೆ ಮತ್ತು ಚರಂಡಿ ಯಾವುದೆಂದು ತಿಳಿಯದಾಗುತ್ತದೆ. ಮಳೆಯ ನಡುವೆ ರಸ್ತೆಯೆಂದು ತಪ್ಪಿ ರಸ್ತೆಯ ಬದಿಗೆ ಹೋದರೆ ವಾಹನಗಳು ಚರಂಡಿ ಬಿಳುವ ಸಾಧ್ಯತೆ ಮತ್ತು ಎದುರಿನಿಂದ ಬರುವ ವಾಹನಗಳು ಪೊದೆಯಿಂದಾಗಿ ಗೊತ್ತಾಗದೆ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು, ಮುಂದೆ ಇಂತಹ ಘಟನೆಗಳು ಆಗುವ ಮುಂಚೆ ನಗರಸಭೆ ಎಚ್ಚೆತ್ತು ಕೊಂಡು ಪೊದೆಗಳ ತೆರವು ಕಾರ್ಯ ಮಾಡಬೇಕೆಂದು ಸ್ಥಳೀಯ ನಾಗರಿಕರ ಒತ್ತಾಯಿಸಿದ್ದಾರೆ. ಪೊದೆಗಳನ್ನು ತೆರವು ಮಾಡುವಂತೆ ಈ ಹಿಂದೆ ಅನೇಕ ಭಾರಿ ನಗರಸಭೆಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಪರಿಹಾರೋಪಾಯ
ಮಳೆಗಾಲ ಬಂತೆಂದರೆ ಸದಾ ಅಪಾಯವನ್ನೇ ಎದುರಿಸುತ್ತಿರುವ ಈ ಭಾಗದ ರಸ್ತೆಯ ಸುಗಮ ಸಂಚಾರಕ್ಕೆ ಇಕ್ಕೆಡೆಗಳಲ್ಲಿರುವ ಪೊದೆಗಳನ್ನು ಕಡಿದು ಸ್ವಚ್ಛಗೊಳಿಸಬೇಕು. ತಿರುವುಗಳಲ್ಲಿ ವಾಹನ ಚಾಲಕರು ಧ್ವನಿ ಮಾಡುತ್ತ, ನಿಧಾನಗತಿಯಿಂದ ಅತ್ಯಂತ ಜಾಗರೂಕತೆಯಿಂದ ಸಂಚರಿಸಬೇಕು. ಚರಂಡಿ ಬದಿಗೆ ತಡೆ ಗೋಡೆ ರಚಿಸುವುದರಿಂದ ಮುಂದಾಗಬಹುದಾದ ಅನಾಹುತ ತಪ್ಪಿಸಬಹುದು.

ಸಮಸ್ಯೆಗೆ ಸೂಕ್ತ ಕ್ರಮ
ನಗರಸಭೆಯಿಂದ ಪ್ರತಿ ವಾರ್ಡ್‌ಗೆ ಸಂಬಂಧಿಸಿ ಒಂದೊಂದೆ ವಾರ್ಡ್‌ನಲ್ಲಿ ಚರಂಡಿ, ಪೊದೆ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಾ ಇದೆ. ಇದೀಗ ಆದಷ್ಟು ಶೀಘ್ರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಹೊಸದಾಗಿ ರೂ. 5ಲಕ್ಷದ ಮ್ಯಾನವಲ್ ಟೆಂಡರ್ ಕೆರೆಯಲು ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲೂ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು – ರೂಪಾ ಶೆಟ್ಟಿ, ಪೌರಾಯುಕ್ತರು ನಗರಸಭೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.