ಪೆರುವಾಯಿ ನಿವಾಸಿಗೆ ಕೊರೋನ ಪಾಸಿಟಿವ್ ಪ್ರಕರಣ | ಅವರ ಸಂಪರ್ಕದಲ್ಲಿದ್ದವರ ವರದಿ ನೆಗೆಟಿವ್

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಪುತ್ತೂರು ನಗರಸಭೆ ಸಿಬ್ಬಂದಿ, ಪೆರುವಾಯಿ ಓಣಿಬಾಗಿಲು ನಿವಾಸಿಯಲ್ಲಿ ಇತ್ತೀಚೆಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಸಂಪರ್ಕ ಹೊಂದಿದ್ದ ಸುತ್ತಮುತ್ತಲಿನ ಕೆಲವರ ಗಂಟಲ ದ್ರವವನ್ನು ಕೋವಿಡ್ -19 ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ಇದೀಗ ಅವರ ವರದಿ ನೆಗೆಟಿವ್ ಬಂದಿರುವುದಾಗಿ ತಿಳಿದುಬಂದಿದೆ.

ಕೆಲವು ದಿನಗಳ ಹಿಂದೆ ಪೆರುವಾಯಿ ಓಣಿ ಬಾಗಿಲು ನಿವಾಸಿ, ಪುತ್ತೂರು ನಗರಸಭೆ ಸಿಬ್ಬಂದಿಗೆ ಕೊರೋನ ಸೋಂಕು ತಗುಲಿರುವುದು  ಪತ್ತೆಯಾಗಿತ್ತು. ಸೋಂಕಿತ ಈ ವ್ಯಕ್ತಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಓಣಿಬಾಗಿಲು ಮತ್ತು ಕುದ್ದುಪದವು ನಿವಾಸಿಗಳನ್ನು ಹೋಂ  ಕ್ವಾರಂಟೈನ್ ನಲ್ಲಿಟ್ಟು, ಅವರ ಗಂಟಲ ದ್ರವವನ್ನು  ಕೋವಿಡ್ – 19 ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಇದೀಗ ಎಲ್ಲರ ವರದಿ ನೆಗೆಟಿವ್ ಬಂದಿದ್ದು, ಗ್ರಾಮಸ್ಥರಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.