ಪುತ್ತೂರಿನ ಡಾ. ವಿವೇಕ್ ಕಜೆಯವರ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ಮಂಗಳೂರಿನಲ್ಲಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯೆನೇಪೋಯ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರಿನಲ್ಲಿ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಆಧುನಿಕ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸಾ ತಜ್ಞರಾಗಿರುವ ಪುತ್ತೂರಿನ ಧನ್ವಂತರಿ ಆಸ್ಪತ್ರೆಯ ಡಾ. ವಿವೇಕ್ ಕಜೆಯವರು ಮಂಗಳೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ಆರಂಭಿಸಿದ್ದು, ಇದೀಗ ಪುತ್ತೂರು ಮತ್ತು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಸಲಹೆಗಳಿಗೆ ಲಭ್ಯವಿರುತ್ತಾರೆ.

 

ಮಂಗಳೂರಿನ ಕಲೆಕ್ಟರ್ಸ್ ಗೇಟ್ (ಬಲ್ಮಠ)ದಲ್ಲಿರುವ ಪರೀನ್ ಪಾಲಿಕ್ಲಿನಿಕ್‌ನಲ್ಲಿ ತಮ್ಮ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ನ್ನು ಜು.9ರಂದು ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ.ಸದಾಶಿವ ರಾವ್ ಪಳ್ಳಾದೆ ಮತ್ತು ಡಾ.ರಘುವೀರ್ ಕೆ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರಿನ ತಜ್ಞ ವೈದ್ಯರಾದ ಡಾ. ಪ್ರಶಾಂತ್, ಡಾ. ಈಶ್ವರಕೀರ್ತಿ, ಡಾ. ದಾಮೋದರ್ ಶೆಣೈ, ಡಾ. ದೀಪಿಕಾ ಮತ್ತು ಯೆನೇಪೋಯ ಶಸ್ತ್ರಚಿಕಿತ್ಸಾ ವಿಭಾಗದ ಹಿರಿಯರಾದ ಡಾ. ಅನಂತಪ್ರಭು, ಡಾ.ಹರಿಶ್ಚಂದ್ರ ಭಟ್, ಪುತ್ತೂರು ಧನ್ವಂತರಿ ಆಸ್ಪತ್ರೆಯ ಡಾ. ರವೀಂದ್ರ, ಡಾ. ರವಿಪ್ರಕಾಶ್, ಡಾ.ಕೀರ್ತನ್ ಕಜೆ ಮತ್ತಿತರರು ಉಪಸ್ಥಿತರಿದ್ದರು.

ಡಾ. ವಿವೇಕ್ ಕಜೆ ಅವರು ಕಳೆದ 10 ವರ್ಷಗಳ ಕಾಲ ನವದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆ, ಚಂಡೀಗಢದ ಪಿಜಿಐ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದು, ಪುತ್ತೂರು ಧನ್ವಂತರಿ ಆಸ್ಪತ್ರೆಯಲ್ಲಿ ಮತ್ತು ಇದೀಗ ಮಂಗಳೂರಿನಲ್ಲಿ ನೂತನವಾಗಿ ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ಆರಂಭಿಸಿದ್ದು, ಕ್ಲೀನಿಕ್‌ನಲ್ಲಿ ಅನ್ನನಾಳದ, ಹೊಟ್ಟೆ ಮತ್ತು ಕರುಳಿನ ಶಸ್ತ್ರಚಿಕಿತ್ಸೆ, ಸಂಕೀರ್ಣವಾದ ಯಕೃತ್ತು, ಪಿತ್ತಕೋಶ, ಪಿತ್ತರಸನಾಳ ಮತ್ತು ಮೇದೋಜಿರಕ ಗ್ರಂಥಿಯ ಶಸ್ತ್ರಚಿಕಿತ್ಸೆ, ಆಧುನಿಕ ಲ್ಯಾಪರೋಸ್ಕೋಪಿಕ್ ಶಸ್ತ್ರಚಕಿತ್ಸೆ, ಬೊಜ್ಜು ಇಳಿಸುವಿಕೆ ಶಸ್ತ್ರಚಿಕಿತ್ಸೆ, ಜೀರ್ಣವ್ಯೂಹದ ಕ್ಯಾನ್ಸರ್ ಹಾಗೂ ಕ್ಯಾನ್ಸರೇತರ ಕಾಯಿಲೆಗಳಿಗೆ ಚಿಕಿತ್ಸಾ ಸಲಹೆ ಲಭ್ಯವಿದೆ ಎಂದು ಡಾ. ವಿವೇಕ್ ಕಜೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.