HomePage_Banner
HomePage_Banner
HomePage_Banner
HomePage_Banner

ಕೊರೋನಾ ಎಫೆಕ್ಟ್: ಕಡಬ ಸರಸ್ವತೀ ಶಾಲಾ ಆಡಳಿತ ಮಂಡಳಿಯಿಂದ ವಿನೂತನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
  • ಶಿಕ್ಷಕರ ಮನೆ ಮನೆಗೆ ತೆರಳಿದ ಆಡಳಿತ ಮಂಡಳಿಯಿಂದ ಗುರುಕಾಣಿಕೆ ಸಮರ್ಪಣೆ

ಕಡಬ: ಕೊರೋನಾ ಲಾಕ್ಡೌನ್ನಿಂದ ಎಲ್ಲಾ ವರ್ಗದ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದರಲ್ಲಿ ಖಾಸಗಿ ಶಾಲಾ ಶಿಕ್ಷಕರೂ ಹೊರತಾಗಿಲ್ಲ, ಇತರ ಉದ್ಯೋಗ ವಲಯಕ್ಕೆ ಸರಕಾರ ಕಿಂಚಿತ್ತು ಸಹಾಯಹಸ್ತವನ್ನು ನೀಡಿದೆ, ಆದರೆ ಖಾಸಗಿ ಶಾಲಾ ಶಿಕ್ಷಕರು ಇತ್ತ ಬೇರೆ ಉದ್ಯೋಗವನ್ನು ಮಾಡಲಾಗದೆ ಹೆಚ್ಚಿನ ಶಿಕ್ಷಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ, ಇದನ್ನು ಮನಗಂಡ ಕಡಬ ಸರಸ್ವತೀ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ “ಗುರುಕಾಣಿಕೆ” ಎಂಬ ವಿನೂತನ ಕಾರ್ಯಕ್ರಮದ ಮೂಲಕ ತಮ್ಮ ವಿದ್ಯಾಸಂಸ್ಥೆಯ ಶಿಕ್ಷಕರಲ್ಲಿ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಿದೆ.

ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಡಬ ಸರಸ್ವತೀ ವಿದ್ಯಾಲಯ ಕಡಬ ಪರಿಸರದಲ್ಲಿ ತನ್ನದೆ ಸಂಸ್ಕೃತಿಯಾಧರಲ್ಲಿ ವಿಶೇಷ ಛಾಪನ್ನು ಮೂಡಿಸಿದೆ, ಈಗಾಗಲೇ ಕೊರೋನಾ ಲಾಕ್ಡೌನ್ ನಿಂದ ಶಾಲೆಗಳು ಬಂದ್ ಆಗಿದ್ದು ಶಿಕ್ಷಕರು ಸಂಬಳ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಇದನ್ನು ಮನಗಂಡ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರವಿರಾಜ ಶೆಟ್ಟಿ, ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆಯವರು ಒಂದು ವಿನೂತನ ಕಾರ್ಯಕ್ಕೆ ಕೈ ಹಾಕಿದ್ದಾರೆ, ಸುಮಾರು 13 ಗ್ರಾಮಗಳಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವ ವಿದ್ಯಾಸಂಸ್ಥೆ, ಆ ಪೋಷಕರು ಹಾಗೂ ಇತರ ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ ಶಿಕ್ಷಕರ ಮನೆ ತೆರಳಿ ಅಲ್ಲಿ ಅವರನ್ನು ಗುರುತಿಸಿ ಸತ್ಕರಿಸಿ ಅವರಿಗೆ ಗೌರವಧನವನ್ನು ಕೊಡುವ ಕೆಲಸ ಮಾಡಿದ್ದಾರೆ, ಜು.12ರಂದು ಶಿಕ್ಷಕರ ಮನೆಗೆ ತೆರಳಿ ಅವರಿಗೆ ಗುರುಕಾಣಿಕೆ ನೀಡಿ ಅವರಿಗೆ ದೈರ್ಯ ತುಂಬಿದ್ದಾರೆ.

ಜು.12ರಂದು ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ರವಿರಾಜ ಶೆಟ್ಟಿ, ಸಂಚಾಲಕ ವೆಂಕಟ್ರಮಣ ರಾವ್, ಪ್ರಮುಖರಾದ ಪ್ರಕಾಶ್ ಎನ್.ಕೆ, ರಾಧಾಕೃಷ್ಣ ಕೋಲ್ಪೆ, ಪ್ರಮೋದ್ ರೈ ನಂದುಗುರಿ, ಮುತ್ತುಕುಮಾರ್, ರಾಮಚಂದ್ರ ಟೈಲರ್, ಸೋಮಪ್ಪ ನಾಕ್ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.