ಪುತ್ತೂರು: ಒಳಮೊಗ್ರು ಬಿ.ಜೆ.ಪಿ ಶಕ್ತಿ ಕೇಂದ್ರ ಪ್ರಮುಖರಾಗಿ ಸಾಮಾಜಿಕ,ಧಾರ್ಮಿಕ ಮುಂದಾಳು ರಾಜೇಶ್ ರೈ ಪರ್ಪುಂಜ ರವರನ್ನು ಆಯ್ಕೆ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಸಾಮಾಜಿಕ ,ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಇವರು ಕುಂಬ್ರ ಸಾರ್ವಜನಿಕ ಶನಿಪೂಜಾ ಸಮಿತಿ ,ಸ್ನೇಹ ಯುವಕ ಮಂಡಲ ಪರ್ಫಂಜ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಭಿವೃದ್ಧಿ ಯೋಜನೆಯ ಕುಂಬ್ರ ಒಕ್ಕೂಟದ ಅಧ್ಯಕ್ಷರಾಗಿ,ವರ್ತಕರ ಸಂಘ ಕುಂಬ್ರ ಇದರ ಉಪಾಧ್ಯಕ್ಷರಾಗಿ
ಗುರುತಿಸಿ ಗೊಂಡಿದ್ದಾರೆ.ಕುಂಬ್ರ ಶಾಲಾಭಿವೃದ್ಧಿ ಸಮಿತಿ ಸದಸ್ಯರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಿ.ಜೆ.ಪಿ ಯಲ್ಲಿ ಬೂತ್ ಸಮಿತಿ ಅಧ್ಯಕ್ಷರಾಗಿ, ಯುವಮೋರ್ಚಾ ಗ್ರಾಮ ಸಮಿತಿ ಅಧ್ಯಕ್ಷರಾಗಿ,ಯುಮೋರ್ಚಾ ತಾಲೂಕು ಸಮಿತಿ ಸದಸ್ಯರಾಗಿ,ಗ್ರಾಮ ಸಮಿತಿ ಅಧ್ಯಕ್ಷರಾಗಿ ಕಳೆದ ಹಲವಾರು ವರ್ಷಗಳಿಂದ ಪಕ್ಷವನ್ನು ಸಂಘಟಿಸುತ್ತಿದ್ದಾರೆ.