HomePage_Banner
HomePage_Banner
HomePage_Banner
HomePage_Banner

ಕೊರೋನಾದ ಆಭ೯ಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಅತ್ತಲಿತ್ತಲು ಹೋಗದಂತೆ, ಮನೆಯೇ ಮಂತ್ರಾಲಯವಾದಂತೆ
ಎಲ್ಲೆಲ್ಲೂ ಒಂದೇ ಮಾತು, ಲೋಕವೆಲ್ಲಾ `ಕೊರೋನಾ’ವಂತೆ
ಒ೦ದು ಅಣುವಿನ ಪ್ರಶ್ನೆಗೆ, ಯೋಚಿಸಬೇಕಿದೆ ನಾಳೆಗೆ
ನಮ್ಮ ಮುಂದಿನ ಬದುಕಿಗೆ, ಕಟ್ಟಬೇಕಿದೆ ಜೋಳಿಗೆ 
ಮನೆಯಲ್ಲೇ ಕುಳಿತು ಭೂರಿಭೋಜನ ಸವಿದವರು ಹಲವಾರು ಮ೦ದಿ
ಒ೦ದು ಹೊತ್ತಿನ ಊಟಕ್ಕೆ ಪರದಾಡಿದವರು ಅದೆಷ್ಟೋ ಮಂದಿ
ಅತ್ತಲಿತ್ತಲು ಹೋಗದಂತೆ ಕಣ್ಗಾವಲಾದ ಖಾಕಿ ವೀರರು
ಅವರ ಈ ಸೇವೆಗೆ ನಾವೆಂದು ಋಣದಾತರು
ಪರವೂರಿನ ವೃತ್ತಿಯಲ್ಲಿರುವ ನಮ್ಮವರ ಪರದಾಟ
ಮನೆಯಲ್ಲೇ ಕುಳಿತಿರು ಎ೦ದು ಕೊರೋನಾದ ಆಭ೯ಟ
ಮನೆಯವರೆಲ್ಲರನ್ನು ಒಟ್ಟಾಗಿ ಸೇರಿಸಿದ ಕೊರೋನ
ಒಟ್ಟಾಗಿಲ್ಲದಿದ್ದರೆ ನಿನ್ನನ್ನು ನಾನು ಸೇರುವೆನೆಂಬ ಆಹ್ವಾನ
ಮರುಕಳಿಸಿದೆ ಎಲ್ಲೆಲ್ಲೂ ಪ್ರಾಚೀನ ಸನ್ನಿವೇಶ
ಯಾವಾಗ ಸರಿಹೋಗುವುದೆಂದು ಎಲ್ಲರಲ್ಲೂ ಆವೇಶ
ನಮ್ಮೆಲ್ಲರ ಏಳಿಗೆಗೆ ಹಲವಾರು ಗಣ್ಯರ ಸಾಹಸ
ಅರ್ಪಿಸೋಣ ಅವರಿಗೊಂದು ಗೌರವದ ವಿಶ್ವಾಸ
ಸಮಯಕ್ಕೆ ತಕ್ಕ ಪಾತ್ರಧಾರಿಗಳು ನಾವು
ಯಾವ ತಪ್ಪಿಗೆ ದೇವರೇ? ಈ ಸಾವು-ನೋವು
ಪ್ರಕೃತಿಯ ಮುಂದೆ ನೀನೇ ಶೂನ್ಯ ಮಾನವ
ಸಾಬೀತುಪಡಿಸಿಬಿಟ್ಟೆಯಲ್ಲವೇ ಕೊರೋನಾ
ಜಾತಿ, ಧರ್ಮವೇ ಬದಿಗುಳಿದ ಈ ಸಮಯ
ಕಾಯುತ್ತಿರುವೆವು ಎಲ್ಲ ಸರಿಹೋಗುವ ಶುಭಗಳಿಗೆಯ
– ಚೈತ್ರಾ.ಎಸ್
ತೃತೀಯ ವರ್ಷದ ಬಿ.ಕಾಂ ವಿದ್ಯಾರ್ಥಿನಿ 
ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.