ಕುಕ್ಕೆ ಶ್ರೀ ಕ್ಷೇತ್ರದಲ್ಲಿ ಸಚಿವ ಸುರೇಶ್ ಕುಮಾರ್ ಹೇಳಿಕೆ ಆನ್‌ಲೈನ್ ಶಿಕ್ಷಣಕ್ಕೆ ಸರಕಾರ ತೀರ್ಮಾನಿಸಿಲ್ಲ

Puttur_Advt_NewsUnder_1
Puttur_Advt_NewsUnder_1

ಸುಬ್ರಹ್ಮಣ್ಯ: ಆನ್‌ಲೈನ್ ಶಿಕ್ಷಣವನ್ನು ಕೊಡುವ ಕುರಿತು ರಾಜ್ಯಸರಕಾರ ಇನ್ನೂ ತೀರ್ಮಾನ ಮಾಡಿಲ್ಲಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳು ಅಧಿಕವಾಗಿರುವುದರಿಂದ ಆನ್‌ಲೈನ್ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಇಲ್ಲ. ಹಳ್ಳಿಗಳಲ್ಲಿ ಆನ್‌ಲೈನ್ ಶಿಕ್ಷಣ ಕಷ್ಟಸಾಧ್ಯವಾದುದರಿಂದ ಆನ್‌ಲೈನ್ ತರಗತಿ ನಡೆಸಲು ಸರಕಾರ ನಿರ್ಧಾರ ಮಾಡುವುದಿಲ್ಲ. ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು. ನಾಗಾರಾಧನೆಯ ಪುಣ್ಯತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಜು.೧೧ರಂದು ಭೇಟಿ ನೀಡಿ ಶ್ರೀ ದೇವರ ದರುಶನದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಲ್ಯಾಪ್‌ಟಾಪ್ ಇತ್ಯಾದಿಗಳನ್ನು ಖರೀದಿಸುವಂತೆ ಒತ್ತಡ ಹೇರುವ ಬಗ್ಗೆ ದೂರುಗಳು ಬಂದಿದೆ. ಮಂಗಳವಾರ ಎಲ್ಲಾ ದೂರುಗಳನ್ನು ಪರಮಾರ್ಶೆ ಮಾಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಶಾಲೆಗಳು ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಆನ್‌ಲೈನ್ ಶಿಕ್ಷಣ ನೀಡುವ ವಿಷಯ ತಿಳಿಯಿತು.ಇದು ಶಿಕ್ಷಣ ಅಲ್ಲ ಶಿಕ್ಷೆಯಾಗಿದೆ ಎಂದರು. ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಕುರಿತು ಸರಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಶಾಲೆಗಳ ಆರಂಭದ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ತಜ್ಞರ ಸಮಿತಿಯ ಸಲಹೆಗಳನ್ನು ಕೇಳಿಕೊಂಡು ಪರಿಸ್ಥಿತಿಯನ್ನು ನೋಡಿಕೊಂಡು ತರಗತಿ ಆರಂಭದ ಬಗ್ಗೆ ಚಿಂತನೆ ಮಾಡಲಾಗುವುದು.ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳ ಆರಂಭ ಇಲ್ಲ. ಕೊರೋನಾದ ಆರ್ಭಟ ಕಡಿಮೆಯಾದಾಗ ಶಾಲೆ ಆರಂಭದ ಬಗ್ಗೆ ನಿರ್ಧಾರ ತಳೆಯಲಾಗುವುದು.ಮಕ್ಕಳ ಹಿತದೃಷ್ಠಿ ಮತ್ತು ಪೋಷಕರ ಸಲಹೆಗಳನ್ನು ತೆಗೆದುಕೊಂಡು ಶಾಲೆ ಆರಂಭದ ದಿನಾಂಕವನ್ನು ಘೋಷಿಸುತ್ತೇವೆ.ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಲೆ ಆರಂಭ ಅಸಾಧ್ಯವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಉಪಯೋಗಕ್ಕೆ ಮಹತ್ವ ನೀಡುವ ಬಗ್ಗೆ ಸರಕಾರವು ಹೆಚ್ಚು ಚಿಂತನೆ ಮಾಡಿದೆ.ಈ ನಿಟ್ಟಿನಲ್ಲಿ ಶೀಘ್ರವೇ ದೂರದರ್ಶನದ ಚಂದನ ವಾಹಿನಿಯಲ್ಲಿ ಸ್ನೇಹ ಬಂಧ ತರಗತಿ ಆರಂಭಿಸಲಾಗುವುದು. ಇದರಲ್ಲಿ ೮,೯ ಮತ್ತು ೧೦ನೇ ತರಗತಿಗೆ ಪಠ್ಯಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು.ಬೇರೆ ತರಗತಿಗೆ ಕೂಡಾ ಇದನ್ನು ಮುಂದೆ ವಿಸ್ತರಿಸಲಾಗುವುದು.ಇದಕ್ಕಾಗಿ ಎರಡು ಹೆಚ್ಚುವರಿ ಚಾನಲ್‌ಗಳನ್ನು ದೂರದರ್ಶನದ ಬಳಿ ಕೇಳಲಾಗಿದೆ. ದೂರದರ್ಶನದ ಮೂಲಕ ಪೂರ್ತಿ ತರಗತಿಗಳನ್ನು ಮಾಡಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಿದ್ದೇನೆ.ಮಕ್ಕಳ ಧೈರ್ಯದಿಂದ ಪೋಷಕರಿಗೆ ಎಲ್ಲಕ್ಕಿಂತ ಮಿಗಿಲಾಗಿ ಭಗವಂತನ ಆಶೀರ್ವಾದ, ಮಕ್ಕಳ ಧೈರ್ಯ ಮತ್ತು ಪೋಷಕರಿಗೆ ಸರಕಾರದ ಮೇಲೆ ಇದ್ದ ವಿಶ್ವಾಸದಿಂದ ಸುಲಲಿತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂಪನ್ನವಾಗಿದೆ.ಎಲ್ಲಾ ಮಕ್ಕಳ ಪರವಾಗಿ ಶ್ರೀ ದೇವರ ದರುಶನ ಮಾಡಿದ್ದೇನೆ.ಅಲ್ಲದೆ ಅವರ ಭವಿಷ್ಯಕ್ಕೆ ಭಗವಂತನ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಿದ್ದೇನೆ.ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ.ಸರ್ವರ ಸಮನ್ವಯತೆಯಿಂದ ಈ ಪರೀಕ್ಷೆ ಸುಸಂಪನ್ನವಾಗಿದೆ. ಎಂದು ಸುರೇಶ್ ಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರ ಪತ್ನಿ ಸಾವಿತ್ರಿ ಸುರೇಶ್, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ಶ್ರೀಕುಮಾರ್ ಬಿಲದ್ವಾರ ಉಪಸ್ಥಿತರಿದ್ದರು.

ಶ್ರೀ ದೇವರ ದರುಶನ: ಜು.೧೧ರಂದು ಮುಂಜಾನೆ ಸಚಿವ ಸುರೇಶ್ ಕುಮಾರ್ ಅವರು ಪತ್ನಿ ಸಾವಿತ್ರಿ ಸುರೇಶ್ ಅವರೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದರು. ಬಳಿಕ ಶ್ರೀ ದೇವರ ದರುಶನ ಮಾಡಿದ ಅವರು ಮಹಾಪೂಜೆ ವೀಕ್ಷಿಸಿದರು.ಈ ಮೊದಲು ಆದಿಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಸ್ಥಳೀಯರಾದ ಶ್ರೀಕುಮಾರ್ ಬಿಲದ್ವಾರ ಉಪಸ್ಥಿತರಿದ್ದರು. ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್ ಸಚಿವರನ್ನು ಸ್ವಾಗತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.