ಮತ್ತೊಮ್ಮೆ ಮಹಿಳಾ ಪೊಲೀಸ್ ಠಾಣೆ ಮೆಟ್ಟಲೀರಿದ ಕೊರೋನಾ | ಎಸ್.ಐ, ಹೆಡ್‌ಕಾನ್‌ಸ್ಟೇಬಲ್ ಸಹಿತ ಉಭಯ ತಾಲೂಕಿನಲ್ಲಿ ಐವರಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೂರು ದಿನಗಳ ಹಿಂದೆ ಪುತ್ತೂರು ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಒಬ್ಬರಿಗೆ ಕೊರೋನಾ ದೃಢಗೊಂಡವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದ ಮಹಿಳಾ ಪೊಲೀಸ್ ಠಾಣೆಯ ಎಸ್.ಐ ಮತ್ತು 45 ವರ್ಷದ ಹೆಡ್‌ಕಾನ್‌ಸ್ಟೇಬಲ್ ಒಬ್ಬರಿಗೆ ಹಾಗೂ ಎಸ್.ಐ ಅವರ 22 ವರ್ಷದ ಪುತ್ರಿ ಸೇರಿದಂತೆ ಪುತ್ತೂರು ಮತ್ತು ಕಡಬ ಉಭಯ ತಾಲೂಕಿನಲ್ಲಿ 5 ಮಂದಿಗೆ ಕೊರೋನಾ ದೃಢಗೊಂಡಿದೆ.

ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಒಬ್ಬರಿಗೆ ಕೊರೋನಾ ದೃಢಗೊಂಡ ಹಿನ್ನೆಲೆಯಲ್ಲಿ ಮಹಿಳಾ ಠಾಣೆಯ ಎಸ್.ಐ ಸಹಿತ ಇಬ್ಬರು ಮತ್ತು ನಗರ ಪೊಲೀಸ್ ಠಾಣೆಯ ಎಸ್.ಐ ಸಹಿತ ಮೂವರು ಹೋಮ್ ಕ್ವಾರಂಟೈನ್‌ನಲ್ಲಿದ್ದರು. ಪ್ರಥಮ ಆದಿತ್ಯವಾರದ ಲಾಕ್‌ಡೌನ್ ಸಂದರ್ಭ ಮಹಿಳಾ ಠಾಣೆಯ ಎಸ್.ಐ ಮತ್ತು ಸಿಬಂದಿಗಳು ಲಾಕ್‌ಡೌನ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬರ ವಿಚಾರದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಒಬ್ಬರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಬೆಳವಣಿಗೆಯಲ್ಲಿ ಕಾನ್‌ಸ್ಟೇಬಲ್‌ಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಉಳಿದ ಪೊಲೀಸರು ಹೋಮ್‌ಕ್ವಾರಂಟೈನ್ ಆಗಿದ್ದರು. ಇದೀಗ ಹೋಮ್ ಕ್ವಾರಂಟೈನ್ ಆಗಿದ್ದವರ ಪೈಕಿ ಎಸ್.ಐಗೆ ಮತ್ತು ಕಾನ್‌ಸ್ಟೇಬಲ್‌ಗೆ ಕೊರೋನಾ ದೃಢಪಟ್ಟಿದೆ. ಈ ಹಿಂದೆ ಮಹಿಳಾ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಒಬ್ಬರಿಗೂ ಕೊರೋನಾ ದೃಢಪಟ್ಟಿತ್ತು. ಇದೀಗ ಅವರು ಚೇತರಿಕೆಗೊಂಡಿದ್ದಾರೆಂದು ತಿಳಿದು ಬಂದಿದೆ.

ನಗರಸಭೆ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ 55 ವರ್ಷ ಪ್ರಾಯದ ವ್ಯಕ್ತಿ ಹಾಗೂ ಕಡಬ ತಾಲೂಕಿನ ಕೋಡಿಂಬಾಳ ನಿವಾಸಿ 34 ವರ್ಷ ಪ್ರಾಯದ ಫೋಟೋಗ್ರಾಫರ್ ಓರ್ವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.