ಮುಂದಿನ ವರ್ಷ ಪುತ್ತೂರು ಉಪವಿಭಾಗದಲ್ಲೇ ಮೌಲ್ಯಮಾಪನಾ ಕೇಂದ್ರ | ಎಸ್‌ಎಸ್‌ಎಲ್‌ಸಿ ಮೌಲ್ಯ ಮಾಪನ ಶಿಕ್ಷಕರನ್ನು ಬೀಳ್ಕೊಟ್ಟ ಶಾಸಕರಿಂದ ಭರವಸೆ

Puttur_Advt_NewsUnder_1
Puttur_Advt_NewsUnder_1
  • ಶಿಕ್ಷಕರಿಗೆ ರೋಟರಿ ಕ್ಲಬ್‌ನಿಂದ ಉಚಿತ ಸ್ಯಾನಿಟೈಸರ್
  • ಉಭಯ ತಾಲೂಕಿನಿಂದ 8 ಬಸ್‌ಗಳಲ್ಲಿ 300 ಮಂದಿ ಶಿಕ್ಷಕರು

ಪುತ್ತೂರು: ಮುಂದಿನ ವರ್ಷದಿಂದ ಪುತ್ತೂರು ಉಪವಿಭಾಗದಲ್ಲೇ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಾ ಕೇಂದ್ರ ಆರಂಭಿಸುವ ಕುರಿತು ಶಾಸಕ ಸಂಜೀವ ಮಠಂದೂರು ಶಿಕ್ಷಕರಿಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಮೌಲ್ಯ ಮಾಪನಕ್ಕೆ ತಾಲೂಕಿನಿಂದ ಮಂಗಳೂರಿನ ೬ ಕೇಂದ್ರಗಳಿಗೆ ಹೊರಟ ೩೦೦ ಮಂದಿ ಶಿಕ್ಷಕರನ್ನು ಅವರು ಜು. ೧೩ರಂದು ಪುತ್ತೂರು ಸಂತ ವಿಕ್ಟರ್ ಬಾಲಿಕ ಪ್ರೌಢಶಾಲೆಯ ವಠಾರದಲ್ಲಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಳಿಕ ಹಸಿರು ನಿಶಾನೆ ತೋರಿಸುವ ಮೂಲಕ ಶಿಕ್ಷಕರು ತೆರಳುವ ಬಸ್‌ಗಳಿಗೆ ಚಾಲನೆ ನೀಡಿದರು. ಕೊರೋನಾದ ಮದ್ಯೆ ಪರೀಕ್ಷೆಯನ್ನು ಎದುರಿಸಿ, ರಾಜ್ಯಕ್ಕೆ ಜಿಲ್ಲೆಗೆ, ತಾಲೂಕಿಗೆ ಸಂದೇಶ ಕೊಡುವ ಸಂಗತಿ ಆಗಿದೆ. ಇವತ್ತು ಇನ್ನೊಂದು ಸಂದೇಶ ನಮ್ಮ ಮೌಲ್ಯ ಮಾಪನಾ ಮಾಡುವ ಅಧ್ಯಾಪಕರು ನೀಡಲಿದ್ದಾರೆ.

ಕೊರೋನಾದಿಂದ ಮುಕ್ತವಾಗಿ ಮೌಲ್ಯ ಮಾಪನಾ ಮಾಡುವಾಗ ಏನೆನು ಮುಂಜಾಗ್ರತು ಕ್ರಮ ಕಯಗೊ ನಮ್ಮ ಆರೋಗ್ಯ ಕಾಪಾಡುವ ಅದೇ ರೀತಿ ಇನ್ನೊಬ್ಬರಬ್ಬರ ಆರೋಗ್ಯ ಕಾಪಾಡುವ ಕೆಲಸವೂ ಆಗಬೇಕು ಎಂದ ಅವರು ಮೌಲ್ಯ ಮಾಪಾನ ಕುರಿತು ಸಚಿವರಲ್ಲಿ ನೀವು ಇಟ್ಟ ಬೇಡಿಕೆ ತಡವಾಗಿದೆ. ಈ ವರ್ಷ ಕಷ್ಟ ಸಾಧ್ಯ ಎಂದು ತಿಳಿಸಿದ್ದರು. ಹಾಗಾಗಿ ಮುಂದಿನ ವರ್ಷ ಕೇವಲ ಪುತ್ತೂರು ಮಾತ್ರವಲ್ಲ, ಸುಳ್ಯ, ಬೆಳ್ತಂಗಡಿ ಉಪವಿಭಾಗವನ್ನು ಸೇರಿಸಿಕೊಂಡು ಮೌಲ್ಯ ಮಾಪಾನ ಕೇಂದ್ರ ಮಾಡುವ ಕುರಿತು ಭರವಸೆ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಮಕ್ಕಳು ಭಯ ಮುಕ್ತರಾಗಿ ಪರೀಕ್ಷೆ ಎದುರಿಸಿದಂತೆ ಶಿಕ್ಷಕರು ಭಯ ಮುಕ್ತರಾಗಿ ಮೌಲ್ಯ ಮಾಪನ ಮಾಡುವಂತಾಗಲಿ ಎಂದು ಹಾರೈಸಿದರು.

ಶಿಕ್ಷಕರಿಗೆ ಸಮಸ್ಯೆ ಬಂದರೆ ಎಲ್ಲರ ಸಹಕಾರ ಅಗತ್ಯ:
ಪ್ರೌಢ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್ ಅವರು ಸ್ವಾಗತಿಸಿ, ಮುಂದಿನ ಪರೀಕ್ಷಾ ಕೇಂದ್ರ ಪುತ್ತೂರಿನಲ್ಲಿ ಆಗಬೇಕು ಮತ್ತು ಶಿಕ್ಷಕರಿಗೆ ಸಮಸ್ಯೆ ಬಂದಾ ತಾಲೂಕು ಆಡಳಿತ ಸೇರಿದಂತೆ ಸರಕಾರ ನಮ್ಮ ಜೊತೆ ಇರಬೇಕು ಎಂಬ ಬೇಡಿಕೆಯನ್ನು ಶಾಸಕರ ಮುಂದಿಟ್ಟರು.

ಉಭಯ ತಾಲೂಕಿನಿಂದ ೮ ಬಸ್:
ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಅವರು ಮಾತನಾಡಿ ಪುತ್ತೂರು ಕಡಬ ಸೇರಿ ಒಟ್ಟು ೮ ಬಸ್‌ಗಳಲ್ಲಿ ೩೦೦ ಶಿಕ್ಷಕರು ಮೌಲ್ಯ ಮಾಪನಕ್ಕೆ ತೆರಳಲಿದ್ದು, ಅವರಿಗೆ ತೆರಳಲು ಶಾಲಾ ಬಸ್‌ಗಳ ವ್ಯವಸ್ಥೆಯನ್ನು ಮಾಯಿದೆ ದೇವುಸ್, ಸುದಾನ, ಗಜಾನನ ಶಾಲೆ ಹನುಮಗಿರಿ, ಸಾಂದಿಪನಿ, ವಿವೇಕಾನಂದ, ಪ್ರಗತಿ ಕಾಣಿಯೂರು, ಜ್ಞಾನೋದಯ ಬೆಥನಿ ನೆಲ್ಯಾಡಿ, ಸಾಂತೋಮ್ ಕಡಬ ವಿದ್ಯಾಸಂಸ್ಥೆಗಳು ಸಹಕಾರ ನೀಡಿದೆ. ಅದೇ ರೀತಿ ಎಲ್ಲಾ ಬಸ್‌ಗಳನ್ನು ಸ್ಯಾನಿಟೈಸನ್ ಮಾಡಲಾಗಿದೆ ಎಂದು ಹೇಳಿ ಕಾರ್ಯಕ್ರಮ ನಿರೂಪಿಸಿದರು. ಪರೀಕ್ಷಾ ನೋಡೆಲ್ ಅಧಿಕಾರಿ ಜಯರಾಮ ಶೆಟ್ಟಿ ವಂದಿಸಿದರು. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಯಿದೆ ದೇವುಸ್ ಚರ್ಚ್‌ನ ಧರ್ಮಗುರು ವಂ ಆಲ್ಪ್ರೇಟ್ ಜೆ ಪಿಂಟೋ, ಸಹಾಯಕ ಧರ್ಮಗುರು ವಂ ಲ್ವಾರೀ ಪಿಂಟೋ, ರೋಟರಿ ಕ್ಲಬ್ ಅಧ್ಯಕ್ಷ ಪ್ರೋ ಜೇವಿಯರ್ ಡಿಸೋಜ, ಉಪಾಧ್ಯಕ್ಷ ಮಧು ನರಿಯೂರು, ರೋಟರಿ ಕ್ಲಬ್‌ನ ಕ್ಲಬ್ ಸರ್ವಿಸ್ ನಿರ್ದೇಶಕ ಪ್ರೇಮಾನಂದ, ಪ್ರೊ. ವಿ.ಜೆ ಪೆರ್ನಾಂಡಿಸ್, ಪ್ರೊ.ದತ್ತಾತ್ರೆಯ ರಾವ್, ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಮೋನಪ್ಪ ಪೂಜಾರಿ, ತನುಜಾ, ಶಾಸಕರ ಕಚೇರಿಯಿಂದ ವಿಶ್ವನಾಥ್, ಜೀವನ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಸರಕಾರದಿಂದ ಉಚಿತ ಕೋವಿಡ್ ಚಿಕಿತ್ಸೆ
ಆಯುಷ್ಮಾನ್ ಭಾರತ್ ಯೋಜನೆಯಡಿ ಕೋವಿಡ್ ಚಿಕಿತ್ಸೆ ನೀಡಲಾಗುತ್ತದೆ. ಆದರೂ ಮೌಲ್ಯ ಮಾಪಕರಲ್ಲಿ ಭಗವಂತ ಕೃಪೆಯಿಂದ ಯಾವುದೇ ವೈರಾಣು ತಗಲಬಾರದು. ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೂ ಅವರಿಗೆ ಸರಕಾರದಿಂದ ಉಚಿತ ಚಿಕಿತ್ಸೆ ಕೊಡಿಸುವ ಭರವಸೆಯನ್ನು ಶಾಸಕ ಸಂಜೀವ ಮಠಂದೂರು ನೀಡಿದರು.

ರೋಟರಿ ಕ್ಲಬ್‌ನಿಂದ ಉಚಿತ ಸ್ಯಾನಿಟೈಸರ್
ಪುತ್ತೂರು ಕಡಬ ಉಭಯ ತಾಲೂಕಿನಿಂದ ಮೌಲ್ಯಮಾಪನಕ್ಕೆ ತೆರಳಿದ ೩೦೦ ಮಂದಿ ಶಿಕ್ಷಕರಿಗೆ ಪುತ್ತೂರು ರೋಟರಿ ಕ್ಲಬ್ ವತಿಯಿಂದ ೩೦೦ ಉಚಿತ ಸ್ಯಾನಿಟೈಸರ್ ವಿತರಣೆಯು ರೋಟರಿ ಕ್ಲಬ್ ವತಿಯಿಂದ ನಡೆಯಿತು. ಸಂಸ್ಥೆಯ ಕಮ್ಯುನಿಟಿ ಸರ್ವಿಸ್ ನಿರ್ದೇಶಕ ಡಾ.ಶ್ರೀಪ್ರಕಾಶ್ ಅದರ ನೇತೃತ್ವ ವಹಿಸಿದ್ದರು – ಶಾಸಕ ಸಂಜೀವ ಮಠಂದೂರು ಸ್ಯಾನಿಟೈಸರ್‌ನ್ನು ಶಿಕ್ಷಕರಿಗೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.