HomePage_Banner
HomePage_Banner
HomePage_Banner
HomePage_Banner

2ನೇ ಹಂತದ ಲಾಕ್‌ಡೌನ್ ಜಾರಿಯಾದರೆ ಕೃಷಿಕರಿಗೆ ವಿನಾಯಿತಿ ನೀಡುವಂತೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜ್ಯದಲ್ಲಿ ೨ನೇ ಹಂತದ ಲಾಕ್‌ಡೌನ್ ಮಾಡುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತಿದ್ದು, ಒಂದು ವೇಳೆ ಲಾಕ್‌ಡೌನ್ ಜಾರಿಯಾದರೆ ಜಿಲ್ಲೆಯ ಕೃಷಿಕರಿಗೆ ಅದರಲ್ಲೂ ಅಡಿಕೆ ಬೆಳೆಗಾರರಿಗೆ ಕೆಲವೊಂದು ವಿನಾಯಿತಿ ನೀಡಬೇಕೆಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ಮನವಿಯನ್ನು ಇ-ಮೇಲ್ ಮತ್ತು ಟ್ವೀಟರ್ ಮೂಲಕ ಕಳುಹಿಸಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೋನಾ ವೈರಸ್ ಹರಡುವ ಭೀತಿ ಹಾಗೂ ಈಗಾಗಲೇ ಹರಡಿರುವ ಬಗ್ಗೆ ಮಾಧ್ಯಮಗಳ ಮೂಲಕ ಹಾಗೂ ಸರಕಾರದ ವರದಿಗಳ ಮೂಲಕ ತಿಳಿದಿದ್ದೇವೆ. ಕೊರೋನಾ ವೈರಸ್ ಹರಡುವುದು ನಿಯಂತ್ರಿಸಲು, ಸಮುದಾಯದ ರಕ್ಷಣೆಗೆ ಆಡಳಿತವು ಸದಾ ಚಟುವಟಿಕೆ ಮಾಡುತ್ತಿದೆ. ಇದಕ್ಕೆ ನಮ್ಮ ಬೆಂಬಲವೂ ಇದೆ. ಇದೀಗ ಎರಡನೇ ಹಂತದ ಲಾಕ್ಡೌನ್ ಮಾಡುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇವೆ.

ಈ ಸಂದರ್ಭ ಜಿಲ್ಲೆಯ ಕೃಷಿಕರಿಗೆ ಅದರಲ್ಲಿ ಅಡಿಕೆ ಬೆಳೆಗಾರರಿಗೆ ಕೆಲವೊಂದು ವಿನಾಯಿತಿ ನೀಡಬೇಕು ಎಂದು ಮನವಿ ಮಾಡುತ್ತೇವೆ. ಎರಡನೇ ಹಂತದ ಲಾಕ್ಡೌನ್ ಎಷ್ಟು ದಿನ , ಹೇಗಿರುತ್ತದೆ ಎಂಬ ಮಾಹಿತಿ ಇಲ್ಲ. ಆದರೆ ಈ ನಿಯಮ ತಯಾರಿಕೆಗೆ ಮುನ್ನ ಕೃಷಿಕರ, ಅಡಿಕೆ ಬೆಳೆಗಾರರ ಭವಿಷ್ಯವನ್ನೂ ಗಮನಿಸಬೇಕಾಗಿದೆ. ಈಗ ಮಳೆಗಾಲದ ಸಂದರ್ಭವಾದ್ದರಿಂದ ಅಡಿಕೆ ಬೆಳೆಗಾರರಿಗೆ ಕೊಳೆರೋಗ ನಿಯಂತ್ರಣಕ್ಕೆ ಅಡಿಕೆ ಗೊನೆಗಳಿಗೆ ಬೋರ್ಡೋ ಸಿಂಪಡಣೆ ಅತೀ ಅಗತ್ಯವಾಗಿದೆ. ಇದಕ್ಕಾಗಿ ನುರಿತ ಕಾರ್ಮಿಕರು ಬೇರೆ ಬೇರೆ ಕಡೆಗೆ ತೆರಳಬೇಕಿದೆ. ಒಂದು ವೇಳೆ ಇಂತಹ ಕಾರ್ಮಿಕರಿಗೆ ತೆರಳಲು ಸಾಧ್ಯವಾಗದೇ ಇದ್ದರೆ ಅಡಿಕೆ ಬೆಳೆಗಾರರ ಭವಿಷ್ಯದ ಮೇಲೆ ಹೊಡೆತ ಬೀಳಲಿದೆ. ಎರಡು ವರ್ಷಗಳ ಹಿಂದೆ ಕೊಳೆರೋಗ ವ್ಯಾಪಕವಾಗಿ ಹರಡಿ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಈಗಾಗಲೇ ಮಳೆ ಹೆಚ್ಚಾಗುತ್ತಿದ್ದು ಕೊಳೆರೋಗವೂ ಕೆಲವು ಪ್ರದೇಶಗಳಲ್ಲಿ ಕಂಡುಬಂದಿದೆ. ಈ ಅವಧಿಯಲ್ಲಿ ಅನಗತ್ಯ ಓಡಾಟಕ್ಕೆ ಅವಕಾಶ ಬೇಕಾಗಿಲ್ಲ, ಆದರೆ ಕಾರ್ಮಿಕರು ಹಾಗೂ ಕೊಳೆರೋಗಕ್ಕೆ ಬೇಕಾದ ಬೋರ್ಡೋ ಸಿಂಪಡಣೆಗೆ ಅಗತ್ಯವಾದ ಔಷಧಿಗಳ ಲಭ್ಯತೆಗೆ ಅವಕಾಶ ನೀಡಬೇಕು. ಕಾರ್ಮಿಕರ ಓಡಾಟಕ್ಕೆ ಮಾಸ್ಕ್, ಪಾಸ್ ಇತ್ಯಾದಿಗಳ ನಿಯಮ ವಿಧಿಸಿ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.