ನಗರಸಭೆ ಪೌರಾಯುಕ್ತರ ಶೀಘ್ರ ಸ್ಪಂದನೆ | ತೆಂಕಿಲ – ಕಟ್ಟತ್ತಾರು ರಸ್ತೆಗೆ ಕಾಯಕಲ್ಪ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಸ್ತೆಗಳ ಬದಿಯಲ್ಲಿ ಗಿಡಗಂಟಿಗಳು ತುಂಬಿ ಅಪಾಯ ಎದುರಿಸುತ್ತಿದ್ದ ನಗರಸಭೆ ವ್ಯಾಪ್ತಿಯ ತೆಂಕಿಲ – ಕಟ್ಟತ್ತಾರು ರಸ್ತೆಗೆ ಕಾಯಕಲ್ಪ ಸಿಕ್ಕಿದೆ. ನಗರಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ತ್ವರಿತ ಸ್ಪಂಧನೆ ನೀಡಿ ಅವರ ಸೂಚನೆಯಂತೆ ಪೌರ ಕಾರ್ಮಿಕರು ಪೊದೆಗಳ ತೆರವು ಕಾರ್ಯ ಮಾಡಿದ್ದಾರೆ.

ಈ ಹಿಂದೆ ಪೊದೆ ತುಂಬಿದ ರಸ್ತೆ

 

ಪೊದೆ ತೆರವು ಮಾಡಿದ ಬಳಿಕ

ಪೊದೆಗಳಿಂದ ಆವೃತ್ತ ಗೊಂಡ ರಸ್ತೆಗಳು ಕಿರಿದಾಗಿ ಅಪಾಯದ ಮುನ್ಸೂಚನೆ ನೀಡುತ್ತಿರುವ ಕುರಿತು ಜು.೧೨ರಂದು ಪತ್ರಿಕೆಯ ಮೂಲಕ ವರದಿ ಮಾಡಲಾಗಿತ್ತು. ಈ ಕುರಿತು ಪೌರಾಯುಕ್ತರೂ ಕೂಡಾ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನೂ ನೀಡಿದ್ದಲ್ಲದೇ ಪೌರ ಕಾರ್ಮಿಕರಿಗೆ ಪೊದೆಗಳ ತೆರವು ಸ್ವಚ್ಛತೆಗೆ ಸೂಚನೆ ನೀಡಿದ್ದರು. ಜು.೧೩ರಂದು ತೆಂಕಿಲ – ಕಟ್ಟತ್ತಾರು ರಸ್ತೆ ಪೊದೆಗಳಿಂದ ಮುಕ್ತವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.