Breaking News

ಚಿಕ್ ಓ ಚಿಕನ್ಸ್ ನ ಐದು ಮತ್ತು ಆರನೇ ಶಾಖೆ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಚಿಕ್ ಓ ಚಿಕನ್ಸ್ ಐದನೇ ಹಾಗು ಆರನೇ ಶಾಖೆ ಆಲಂಕಾರು ಹಾಗು ಗೋಳಿತ್ತಡಿಯಲ್ಲಿ ಜೂ.13 ರಂದು ಶಿಖರ್ ಎಸ್.ಶೆಟ್ಟಿ ಮತ್ತು ಶ್ರೀಯಾ ಎಸ್ ಶೆಟ್ಟಿ ದೀಪ ಬೆಳಗಿಸಿ ಶಾಖೆಯನ್ನು ಉದ್ಘಾಟಿಸಿದರು.

ಆಲಂಕಾರಿನಲ್ಲಿ ಮುಖ್ಯ ಅತಿಥಿಗಳಾಗಿ ಆಲಂಕಾರು ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅದ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು ,ಆಲಂಕಾರು ಸಿ.ಎ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾದಿಕಾರಿ ಪ್ರಶಾಂತ ರೈ ಮನವಳಿಕೆ ಯವರು ಮಾತನಾಡಿ ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಚಿಕ್ ಓ ಚಿಕನ್ ಸಂಸ್ಥೆ ಗ್ರಾಹಕರಿಗೆ ಉತ್ತಮ ಗುಣ ಮಟ್ಟದ ಸೇವೆಯನ್ನು ನೀಡಿ, ಜನರ ಪ್ರೀತಿ, ವಿಶ್ವಾಸವನ್ನು ಗಳಿಸುವುದರ ಮೂಲಕ ಸಂಸ್ಥೆಯು ಅಭಿವೃದ್ದಿ ಪಥದಲ್ಲಿ ಸಾಗಲೆಂದು ಶುಭ ಹಾರೈಸಿದರು.

ಈ ಸಂಧರ್ಭ ದಲ್ಲಿ ಕಟ್ಟಡದ ಮಾಲಿಕರಾದ ರಾಧಾಕೃಷ್ಣ ರೈ ಪರಾರಿಗುತ್ತು, ಸಮಾಜ ಸೇವಕ ಮೋಹನದಾಸ ರೈ ಪರಾರಿಗುತ್ತು , ಉದ್ಯಮಿ ವಿನೋದ್ ಕೂಮರ್ ರೈ ಎಂ ಹಾಗು ಇನ್ನಿತರರು ಉಪಸ್ಥಿತರಿದ್ದರು . ಗೋಳಿತ್ತಡಿಯಲ್ಲಿ ಶಾಖೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಶಿರಾಡಿ ದೈವಸ್ಥಾನ ಎಣಿತ್ತಡ್ಕದ ಅಡಳಿತ ಮೊಕ್ತೇಸರರಾದ ಸಂತೋಷ ರೈ ಆರುವಾರ ಮಾತನಾಡಿ ಸಂಸ್ಥೆ ಬೆಳಗ ಬೇಕಾದರೆ ಜನರ ಸಹಕಾರ ಅತೀ ಅಗತ್ಯ ಪ್ರಸಕ್ತ ಸನ್ನಿವೇಶದಲ್ಲಿ ಸಂಸ್ಥೆಯನ್ನು ಹುಟ್ಟುಹಾಕುವುದು ,ಬೆಳೆಸುವಂತಾದ್ದು ಕಷ್ಟವಾಗಿರುವುದರಿಂದ ಗ್ರಾಹಕರ ಪ್ರೀತಿ ,ವಿಶ್ವಾಸದಿಂದ ಮಾತ್ರ ಸಂಸ್ಥೆ ಅಬಿವೃದ್ದಿ ಪಥದಲ್ಲಿ ಸಾಗಲು ಸಾಧ್ಯ ವಾಗುತ್ತದೆ.ಅದ್ದರಿಂದ ಗ್ರಾಹಕರೆಲ್ಲರೂ ಚಿಕ್ ಓ ಚಿಕನ್ ಸಂಸ್ಥೆಯನ್ನು ಬೆಳೆಸುವಲ್ಲಿ ಸಹಕರಿಸುವಂತೆ ವಿನಂತಿಸಿದರು. ಈ ಸಂಧರ್ಭದಲ್ಲಿ ಕಟ್ಟಡದ ಮಾಲಿಕರಾದ ಬಾಪುಕುಂಞ, ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅದ್ಯಕ್ಷ ಕಮಲಾಕ್ಷ ರೈ ಪರಾರಿಗುತ್ತು, ರಾಮಕುಂಜ ಗ್ರಾ.ಪಂ ಮಾಜಿ ಸದಸ್ಯ ಯತೀಶ್ ಬಾನಡ್ಕ, ಉದ್ಯಮಿ ಅಯ್ಯುಬ್ ಹಾಜಿ, ಮಹಮ್ಮದ್ ಅಮೈ ಹಾಗು ಇನ್ನಿತರರು ಉಪಸ್ಥಿತರಿದ್ದರು. ಪ್ರಾಸ್ತವಿಕ ವಾಗಿ ಸಂಸ್ಥೆಯ ಮಾಲಕರಾದ ಸುನಿತ್ ರಾಜ್ ಶೆಟ್ಟಿ ಮಾತನಾಡಿ ಚಿಕ್ ಓ ಚಿಕನ್ ಸಂಸ್ಥೆಯು ಗ್ರಾಹಕ ರ ಪ್ರೀತಿ ವಿಶ್ವಾಸ ದೊಂದಿಗೆ 2015 ರಲ್ಲಿ ಆತೂರಿನಲ್ಲಿ ಪ್ರಾರಂಭ ಗೊಂಡು ನಂತರ ಆಲಂಕಾರು,ಕಡಬ,ಸವಣೂರು ಇದೀಗ ಆಲಂಕಾರಿನಲ್ಲಿ ಎರಡನೇ ಬ್ರಾಂಚ್ ಆಗಿ ಐದನೇ ಶಾಖೆ ಮತ್ತು ಆರನೇ ಶಾಖೆ ಗೋಳಿತ್ತಡಿ ಯಲ್ಲಿ ಶುಭರಂಭ ಗೊಂಡಿರುವುದು ಬಹಳ ಸಂತಸ ತಂದಿದೆ ಇದಕ್ಕೆಲ್ಲಾ ಗ್ರಾಹಕ ಪ್ರೀತಿ,ವಿಶ್ವಾಸ ಹಾಗು ಅಶ್ರೀರ್ವಾದ ಕಾರಣ ವಾಗಿದೆ ಎಂದು ತಿಳಿಸಿ ಕೊರೋನಾ ಮಹಮಾರಿ ವಿರುವ ಕಾರಣ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಶುಭರಂಭ ಗೊಳಿಸಿರುವುದಾಗಿ ತಿಳಿಸಿದರು.ಸುಮನಾ ಎಸ್ ಶೆಟ್ಟಿ ,ಸೌಜನ್ಯ ರೈ ಅತಿಥಿಗಳನ್ನು ಸ್ವಾಗತಿಸಿ, ಬಾಲ್ಯೋಟ್ಟುಗುತ್ತು ಜಗನ್ನಾಥ ರೈ ಧನ್ಯವಾದ ಸಮರ್ಪಿಸಿದರು.ಸಂಸ್ಥೆಯ ಮ್ಯಾನೇಜರ್ ರಫೀಕ್ ಅಮೈ ಹಾಗು ಸಹೋದ್ಯೋಗಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.