ಪುತ್ತೂರು-ಕಾವು ಲಯನ್ಸ್ ಕ್ಲಬ್ ವಾರ್ಷಿಕ ಮಹಾಸಭೆ | ಅಧ್ಯಕ್ಷರಾಗಿ ರಮೇಶ್ ರೈ ಸಾಂತ್ಯ -ಕಾರ್ಯದರ್ಶಿ: ಪವನರಾಮ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಪುತ್ತೂರು- ಕಾವು ಲಯನ್ಸ್ ಕ್ಲಬ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕ್ಲಬ್‌ನ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕ್ಲಬ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಕ್ಲಬ್‌ನ ನೂತನ ಅಧ್ಯಕ್ಷರಾಗಿ ರಮೇಶ್ ರೈ ಸಾಂತ್ಯ, ಕಾರ್ಯದರ್ಶಿಯಾಗಿ ಪವನರಾಮ ಮತ್ತು ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಸಿ ಎಚ್ ಆಯ್ಕೆಯಾದರು.
ಪ್ರಥಮ ಉಪಾಧ್ಯಕ್ಷರಾಗಿ ಅಬ್ದುಲ್‌ಖಾದರ್ ಹಾಜಿ ಹಿರಾ, ದ್ವಿತೀಯ ಉಪಾಧ್ಯಕ್ಷರಾಗಿ ಮಹೇಶ್ ರೈ ಅಂಕೊತ್ತಿಮಾರ್ ಹಾಗೂ ತೃತೀಯ ಉಪಾಧ್ಯಕ್ಷರಾಗಿ ದಿನೇಶ್ ಗೌಡ, ಕ್ಲಬ್ ಸದಸ್ಯತನದ ಚೆಯರ್‌ಮೆನ್ ಆಗಿ ದಿವ್ಯನಾಥ ಶೆಟ್ಟಿ ಕಾವು, ಲಯನ್ ಟೇನರ್ ಆಗಿ ಕೃಷ್ಣಪ್ಪ ಗೌಡ, ಲಯನ್‌ಟೈಲ್ ಟ್ವಿಸ್ಟರ್ ಆಗಿ ಜಗನ್ನಾಥ ರೈ ಗುತ್ತು, ಎಲ್‌ಸಿಎಫ್ ಕೋ ಆರ್ಡಿನೇಟರ್ ಆಗಿ ಮೋನಪ್ಪ ಪೂಜಾರಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾಗಿ ಭಾಸ್ಕರ ಬಲ್ಯಾಯ, ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ ವಿಭಾಗಕ್ಕೆ ಉದನೇಶ್ವರ ಭಟ್, ನಿರ್ಧೇಶಕರುಗಳಾಗಿ ಜಯಪ್ರಕಾಶ್ ರೈ ನೂಜಿಬೈಲು, ಸುಬ್ರಾಯ ಬಲ್ಯಾಯ, ಕೆ ಕೆ ಇಬ್ರಾಹಿಂ ಹಾಜಿ, ರಾಮದಾಸ ರೈ, ಅಮ್ಮು ರೈ, ಅಬ್ದುಲ್ ಅಝೀಝ್ ಬುಶ್ರಾ, ಮೋಹನ್‌ದಾಸ್ ಶೆಟ್ಟಿ ನೂಜಿ ಬೈಲು ಆಯ್ಕೆಯಾದರು.

ಸದಸ್ಯರುಗಳಾಗಿ ಉದಯಶಂಕರ ಶೆಟ್ಟಿ, ಶರತ್‌ಕುಮಾರ್ ರೈ, ಗೋಪಾಲಕೃಷ್ಣ ಪಾಟಾಳಿ, ಜಯರಾಮ ರೈ ಅಂಕೊತ್ತಿಮಾರ್, ವಿಟಲ್ ಆಳ್ವ, ಖಾದರ್ ಹಿರಾ, ಅಬ್ದುಲ್ ನಿಸಾರ್ ಹಾಜಿ, ರಮೇಶ್ ಆಳ್ವ, ಶ್ರೀಶಕುಮಾರ್ ರೈ, ರವಿಕಿರಣ್ ಶೆಟ್ಟಿ ಬೆದ್ರಾಡಿ, ಜಗನ್ನಾಥ ರೈ ಕಾವು, ದೇವಣ್ಣ ರೈ ಮುದ್ರಪಳ್ಳ, ರಾಮಣ್ಣ ರೈ ಕರ್ನೂರು, ಅನಿತಾ ಹೇಮನಾಥ ಶೆಟ್ಟಿ, ರಾಮದಾಸ್ ರೈ ಮದ್ಲ, ಇಸ್ಮಾಯಿಲ್, ಸುಧೀರ್ ಅಮ್ಚಿನಡ್ಕ ರವರು ಆಯ್ಕೆಯಾದರು.

ಪದಗ್ರಹಣ ಸಮಾರಂಭ
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕಾವಿನಲ್ಲಿ ನಡೆಯಿತು. ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ವಸಂತಕುಮಾರ್ ಶೆಟ್ಟಿ ಪದಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟರು.ಅಂತರ ರಾಷ್ಟ್ರೀಯ ಸಂಸ್ಥೆಯಾದ ಲಯನ್ಸ್ ಕ್ಲಬ್ ಸದಸ್ಯರಾಗುವ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವಕಾಶ ಇದ್ದು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್‌ಕುಮಾರ್ ರೈ ಶುಭ ಹಾರೈಸಿದರು.

ರಮೇಶ್‌ ರೈ ಸಾಂತ್ಯ
ಪವನರಾಮ

ವಲಯಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಶುಭ ಹಾರೈಸಿದರು. ನಿಕಟಪೂರ್ವ ಕಾರ್ಯದರ್ಶಿ ರಮೇಶ್ ರೈ ಸಾಂತ್ಯ ವರದಿ ಮಂಡಿಸಿದರು. ಅನಿತಾ ಹೇಮನಾಥ ಶೆಟ್ಟಿ ವಂದಿಸಿದರು.
 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.