ಬಂಟ್ವಾಳ: ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಖಾಸಗಿ ಕಟ್ಟಡವೊಂದರ ಗೋಡೌನ್ ಗೆ ಹಾನಿಯಾದ ಘಟನೆ ಕಲ್ಲಡ್ಕದಲ್ಲಿ ಜು.13ರಂದು ಸಂಜೆ ನಡೆದಿದೆ. ಇಲ್ಲಿನ ಮೇಲಿನ ಪೇಟೆಯಲ್ಲಿರುವ ಕೆ.ಎಸ್. ಬಿಲ್ಡಿಂಗ್ ನಲ್ಲಿ ಈ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕೆ.ಎಸ್. ಬೀಡಿ ಸಂಸ್ಥೆಗೆ ಸೇರಿದ ಗೋಡೌನ್ ಇದಾಗಿದ್ದು, ಇಲ್ಲಿ ದಾಸ್ತಾನಿರಿಸಲಾಗಿದ್ದ ಹಲವು ವಿದ್ಯುತ್ ಉಪಕರಣಗಳೂ ಹಾನಿಗೆ ಒಳಗಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದೆ.