ಕಾಣಿಯೂರಿನಲ್ಲಿ ಜು.16ರಿಂದ ಜು.31ರವರೆಗೆ ಮಧ್ಯಾಹ್ನ 2ರ ಬಳಿಕ ಸಂಪೂರ್ಣ ಲಾಕ್‌ಡೌನ್ – ವರ್ತಕರ ಒಮ್ಮತದ ನಿರ್ಧಾರ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

  • ದ.ಕ ಜಿಲ್ಲೆಯಲ್ಲಿ ಜು.16ರಿಂದ ಒಂದು ವಾರ ಸಂಪೂರ್ಣ ಲಾಕ್‌ಡೌನ್ ಜಾರಿಗೆ- ಕಡ್ಡಾಯ ಪಾಲಸಲು ಸೂಚನೆ

ಕಾಣಿಯೂರು: ಜು.16ರಿಂದ ಜು.31ರವರೆಗೆ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯವಹಾರ ನಡೆಸಿ, ಮಧ್ಯಾಹ್ನದ ಬಳಿಕ ಪ್ರತಿದಿನ ಸ್ವಯಂಪ್ರೇರಿತ ಸಂಪೂರ್ಣ ಲಾಕ್‌ಡೌನ್ ನಡೆಸಲು ಕಾಣಿಯೂರಿನಲ್ಲಿ ವರ್ತಕರು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ. ಸಭೆಯು ವರ್ತಕರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಅವರ ಅಧ್ಯಕ್ಷತೆಯಲ್ಲಿ ಜು.13ರಂದು ಕಾಣಿಯೂರು ಗ್ರಾ.ಪಂ, ಸಭಾಂಗಣದಲ್ಲಿ ನಡೆಯಿತು. ದಿನ ಹೋದಂತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮದ್ಯಾಹ್ನದ ಬಳಿಕ ಸಂಪೂರ್ಣ ಲಾಕ್‌ಡೌನ್ ನಡೆಸಲು ಕಾಣಿಯೂರಿನಲ್ಲಿಯೂ ವರ್ತಕರು ಒಮ್ಮತ್ತದ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೇ ದ.ಕ ಜಿಲ್ಲೆಯಲ್ಲಿ ಜು .16ರಿಂದ ಒಂದು ವಾರ ಸಂಪೂರ್ಣ ಲಾಕ್‌ಡೌನ್ ಜಾರಿಗೆ ತರಲಾಗಿದ್ದು, ಅದನ್ನು ಕಡ್ಡಾಯ ಪಾಲಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕಾಣಿಯೂರು ಗ್ರಾ.ಪಂ, ಪಿಡಿಓ ಜಯಪ್ರಕಾಶ್ ಮಾತನಾಡಿ, ಕೋರೊನಾ ಸೋಂಕಿತರ ಸಂಖ್ಯೆ ದಿನೆ ದಿನೇ ಹೆಚ್ಚಾಗುವುದರಿಂದ ಕಾಣಿಯೂರಿನಲ್ಲಿಯೂ ಲಾಕ್‌ಡೌನ್ ಮಾಡುವುದು ಒಳ್ಳೆಯದು. ಈ ಬಗ್ಗೆ ವರ್ತಕರ ಅಭಿಪ್ರಾಯವನ್ನು ಸಂಗ್ರಹಿಸಿ, ತೀರ್ಮಾನಿಸಲಾಗುವುದು, ಇದಕ್ಕೆ ಎಲ್ಲಾ ವರ್ತಕರ ಸಹಕಾರವೂ ಅಗತ್ಯ. ಅಲ್ಲದೇ ದ.ಕ ಜಿಲ್ಲೆಯಲ್ಲಿ ಜು ೧೬ರಿಂದ ಒಂದು ವಾರ ಹಾಗೂ ಪ್ರತಿ ಭಾನುವಾರದ ಸಂಪೂರ್ಣ ಲಾಕ್‌ಡೌನ್ ಕಡ್ಡಾಯ ಪಾಲಿಸಬೇಕು ಎಂದರು.

ವರ್ತಕರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ಕೊರೋನಾ ಸೋಂಕು ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು 16ರಿಂದ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್ ಜಾರಿಗೆ ತರಲಾಗಿದ್ದು, ಸರಕಾರದ ಆದೇಶವನ್ನು ನಾವು ಪಾಲಿಸುವುದರ ಜೊತೆಗೆ ಜು ೩೧ರವರೆಗೆ ಮಧ್ಯಾಹ್ನದವರೆಗೆ ವ್ಯವಹಾರ ನಡೆಸಿ, ಮಧ್ಯಾಹ್ನದ ಬಳಿಕ ಸಂಪೂರ್ಣ ಲಾಕ್‌ಡೌನ್ ಮಾಡುವ ಬಗ್ಗೆ ಎಲ್ಲರ ಸಹಕಾರ ಅಗತ್ಯ ಎಂದವರು ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೊರೋನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮದ್ಯಾಹ್ನ ತನಕ ವ್ಯವಹಾರ ನಡೆಸಲು ವರ್ತಕರ ಅಭಿಪ್ರಾಯದ ಮೂಲಕ ನಿರ್ಧಾರ ತಗೆದುಕೊಳ್ಳಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ವರ್ತಕರು ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಿದರು. ಪಿಡಿಓ ಜಯಪ್ರಾಶ್ ಸ್ವಾಗತಿಸಿ, ಸಿಬ್ಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ ವಂದಿಸಿದರು.

ಜು 16ರಿಂದ ಜು 3ವರೆಗೆ ಕಾಣಿಯೂರಿನಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯವಹಾರ ನಡೆಸಲು ವರ್ತಕರ ಒಮ್ಮತದ ನಿರ್ಧಾರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.