ಒಂದು ಸಾವಿರ ಗಿಡದ ಪೋಷಣೆಗೆ ಮುಂದಾದ ಚಾರ್ವಾಕ ನಮ್ಮ ಜವನೆರ್ ತಂಡ

Puttur_Advt_NewsUnder_1
Puttur_Advt_NewsUnder_1
  • ಲಾಕ್‌ಡೌನ್ ದಿನದಂದೇ ಸಮಾಜ ಸೇವೆಯಲ್ಲಿ ಭಾಗಿಯಾದ ಯುವಕರು..

ಕಾಣಿಯೂರು: ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಭಾನುವಾರದಂದು ಸಂಪೂರ್ಣ ಲಾಕ್‌ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ಜು ೧೨ರ ಲಾಕ್‌ಡೌನ್ ಸಮಯವನ್ನು ಚಾರ್ವಾಕ ನಮ್ಮ ಜವನೆರ್ ತಂಡ ಸಮಾಜ ಸೇವೆಯಲ್ಲಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಪರಿಸರ, ಸ್ವಚ್ಛ ಪರಿಸರ ರೂಪಿಸುವತ್ತ ಪ್ರತಿಯೊಬ್ಬರು ಮನಸ್ಸು ಮಾಡಿದಾಗ ಮಾತ್ರ ಗುಣಮಟ್ಟದ ಜೀವನಶೈಲಿ ಪಡೆಯಲು ಸಾಧ್ಯ ಎಂಬ ಚಿಂತನೆಯಲ್ಲಿ ಚಾರ್ವಾಕ ನಮ್ಮ ಜವನೆರ್ ತಂಡದಿಂದ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಖಾಲಿ ಜಾಗದಲ್ಲಿ ಕಳೆದ ವರ್ಷ ಸುಮಾರು ೧೦೦೦ ಗಿಡವನ್ನು ನೆಟ್ಟು ಒಂದು ವರ್ಷ ಪೂರ್ತಿಗೊಂಡು, ಇದೀಗ ಗಿಡದ ಸುತ್ತಲಿನ ಹುಲ್ಲನ್ನು ತೆಗೆದು ರಾಸಾಯನಿಕ ಗೊಬ್ಬರವನ್ನು ಹಾಕುವುದರ ಮೂಲಕ ಅದರ ಪೋಷಣೆಗೆ ಮುಂದಾಗಿದ್ದಾರೆ. ಸಸ್ಯ ನಾಟಿ ಮಾಡಿ ಅದರ ಪೋಷಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಗಿಡಗಳಿಗೆ ಯಾವುದೇ ಹಾನಿಯಾಗದೇ ಬೆಳೆಯಬೇಕೆಂಬ ನಿಟ್ಟಿನಲ್ಲಿ ಪ್ರತೀ ಗಿಡಗಳಿಗೂ ಎತ್ತರದ ಬೇಲಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪರಿಕಲ್ಪನೆಯನ್ನು ಆಂದೋಲನದ ರೂಪವಾಗಿ ನಡೆಸಲು ಚಿಂತನೆ ನಡೆಸಿದ್ದಾರೆ. ದಿನೇ ದಿನೇ ಪ್ರಕೃತಿಯಲ್ಲಿನ ಮರಗಳ ಸಂಖ್ಯೆ ಇಳಿಕೆಯಾಗುತ್ತಿದೆ.ಇದರಿಂದ ಪ್ರಕೃತಿಯ ಸಮತೋಲನವನ್ನು ಕಳೆದುಕೊಂಡು ಅತಿವೃಷ್ಟಿ,ಅನಾವೃಷ್ಟಿ ನಡೆಯುತ್ತಿದೆ.ಹೀಗೆ ಮುಂದುವರಿದರೆ ಅಪಾಯ ತಪ್ಪಿದಲ್ಲ. ಆಧುನಿಕ ನಗರೀಕರಣದ ಭರಾಟೆಯಲ್ಲಿ ಪರಿಸರ ಮಾಲಿನ್ಯ ಅಪಾಯಮಟ್ಟಕ್ಕೆ ತಲುಪಿದೆ. ಪರಿಸರ ಮಾಲಿನ್ಯ ತಡೆಗಟ್ಟುವ ಪ್ರಕ್ರಿಯೆ ಪ್ರಾಥಮಿಕ ಹಂತದಿಂದಲೇ ಆರಂಭವಾಗಬೇಕು. ಜೊತೆಗೆ ಮಳೆ ನೀರನ್ನು ಹಳೆಯ ಬೋರ್‌ವೆಲ್‌ಗೆ ಹಾಕಿ ಜಲಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಳೆ ನೀರನ್ನು ಸಂಗ್ರಹಿಸುವ ಕಾರ್ಯ ನಮ್ಮ ಜವನೆರ್ ತಂಡದಿಂದ ನಡೆಯುತ್ತಿದೆ ಎನ್ನುತ್ತಾರೆ ನಮ್ಮ ಜವನೆರ್ ಸಂಘಟಕರು.

ಚಾರ್ವಾಕ ನಮ್ಮ ಜವನೆರ್ ತಂಡ ಹಾಗೂ ನಮ್ಮ ಜವನೆರ್ ತಂಡದ ಹಿತೈಷಿಗಳ ಸಹಕಾರದೊಂದಿಗೆ ನಡೆಯುತ್ತಿರುವ ಈ ಕಾರ್ಯದಲ್ಲಿ ರಾಸಾಯನಿಕ ಗೊಬ್ಬರವನ್ನು ನಮ್ಮ ಜವನೆರ್ ತಂಡದ ಗೌರಾಧ್ಯಕ್ಷರಾದ ಮೋಹನ ಗೌಡ ಇಡ್ಯಡ್ಕ ನೀಡಿ ಸಹಕರಿಸಿದ್ದಾರೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ಮಾರಪ್ಪ ಶೆಟ್ಟಿ, ಆಡಳಿತ ಪಂಗಡದ ಮಾಜಿ ಅಧ್ಯಕ್ಷ ಪುರುಷೋತ್ತಮ ಗೌಡ ಇಡ್ಯಡ್ಕ, ಕೇಶವ ನಾಯಕ್ ಆಯೋಧ್ಯೆನಗರ ಹಾಗೂ ತಂಡದ ಸದಸ್ಯರು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.