Breaking News

ಎಸ್.ಐ, ಹೆಚ್.ಸಿ.ಗೆ ಕೊರೋನಾ ಸೋಂಕು | ಮಹಿಳಾ ಪೊಲೀಸ್ ಠಾಣೆ 48 ಗಂಟೆ ಬಂದ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಮೂರು ದಿನಗಳ ಹಿಂದೆ ಪುತ್ತೂರು ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಒಬ್ಬರಿಗೆ ಕೊರೋನಾ ದೃಢಗೊಂಡ ಬಳಿಕ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದ ಮಹಿಳಾ ಪೊಲೀಸ್ ಠಾಣೆಯ ಎಸ್.ಐ ಮತ್ತವರ 23 ವರ್ಷ ಪ್ರಾಯದ ಪುತ್ರಿ ಹಾಗೂ ಮಹಿಳಾ ಪೊಲೀಸ್ ಠಾಣೆಯ 45 ವರ್ಷದ ಹೆಡ್‌ಕಾನ್‌ಸ್ಟೇಬಲ್ ಒಬ್ಬರ ಸಹಿತ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಜು.13ರಂದು 5 ಮಂದಿಗೆ ಕೊರೋನಾ ದೃಢಗೊಂಡಿದ್ದು ಉಭಯ ತಾಲೂಕುಗಳ ಜನತೆಯಲ್ಲಿ ಆತಂಕ ಹೆಚ್ಚಾಗಿದೆ.

 


ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಒಬ್ಬರಿಗೆ ಕೊರೋನಾ ದೃಢಗೊಂಡ ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣಕ್ಕಾಗಿ ಮಹಿಳಾ ಠಾಣೆಯ ಎಸ್.ಐ, ಓರ್ವ ಕಾನ್‌ಸ್ಟೇಬಲ್ ಮತ್ತು ನಗರ ಪೊಲೀಸ್ ಠಾಣೆಯ ಎಸ್.ಐ ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳು ಸೇರಿದಂತೆ ಐದು ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದರು.ಸರಕಾರದ ಆದೇಶದಂತೆ ನಡೆದ ಪ್ರಥಮ ಆದಿತ್ಯವಾರದ ಲಾಕ್‌ಡೌನ್ ಸಂದರ್ಭ ಲಾಕ್‌ಡೌನ್ ಉಲ್ಲಂಘನೆ ಪ್ರಕರಣವೊಂದರ ಆರೋಪಿಯನ್ನು ಮಹಿಳಾ ಠಾಣೆಯ ಎಸ್.ಐ ಮತ್ತು ಸಿಬಂದಿಗಳು ಬಂಧಿಸಿದ್ದರು.ಈ ಸಂದರ್ಭ ಅವರು ಸಂಪರ್ಕ ಹೊಂದಿದ್ದ ಪುತ್ತೂರು ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎಸ್.ಐ.ಗಳ ಸಹಿತ ಐದು ಮಂದಿ ಪೊಲೀಸರು ಹೋಮ್‌ಕ್ವಾರಂಟೈನ್ ಆಗಿದ್ದರು.ಇವರ ಪೈಕಿ ಮಹಿಳಾ ಠಾಣೆಯ ಎಸ್.ಐ

ಮತ್ತು ಕಾನ್‌ಸ್ಟೇಬಲ್ ಒಬ್ಬರಿಗೆ ಕೊರೋನಾ ದೃಢಪಟ್ಟಿದೆ.ಮಹಿಳಾ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಒಬ್ಬರಿಗೆ ಕೆಲವು ದಿನಗಳ ಹಿಂದೆಯಷ್ಟೆ ಕೊರೋನಾ ದೃಢಪಟ್ಟಿತ್ತು.ಇದೀಗ ಅವರು ಚೇತರಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.ಅಲ್ಲದೆ, ಕರ್ನಾಟಕ ಮದ್ಯಪಾನೀಯ ನಿಗಮ ಕಚೇರಿಯಲ್ಲಿ ಲೋಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕೆಮ್ಮಿಂಜೆ ಗ್ರಾಮದ ಕ್ಯಾಂಪ್ರೋ ಫ್ಯಾಕ್ಟರಿ ಬಳಿಯ ನಿವಾಸಿ ೫೫ ವರ್ಷ ಪ್ರಾಯದ ವ್ಯಕ್ತಿ ಹಾಗೂ ಕಡಬ ತಾಲೂಕಿನ ಕೋಡಿಂಬಾಳ ನಿವಾಸಿಯಾಗಿರುವ ೩೪ ವರ್ಷ ಪ್ರಾಯದ ಛಾಯಾಗ್ರಾಹಕರೊಬ್ಬರಲ್ಲಿ ಕೊರೋನಾ ದೃಢಪಟ್ಟಿದ್ದು ಈ ದಿನ ಎರಡು ತಾಲೂಕುಗಳಲ್ಲಿ ಒಟ್ಟು ಐದು ಮಂದಿಗೆ ಸೋಂಕು ಪತ್ತೆಯಾಗಿದೆ. ಪಾನೀಯ ನಿಗಮದ ಲೋಡರ್‌ನ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಮಹಿಳಾ ಠಾಣೆ 48 ಗಂಟೆ ಬಂದ್: ಠಾಣಾ ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್ ಓರ್ವರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆಯನ್ನು ಸ್ಯಾನಿಟೈಝ್ ಮಾಡಲಾಗಿದೆ.ಈ ಪೈಕಿ ಮಹಿಳಾ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಆದ ಬಳಿಕ ಮುಂದಿನ ೪೮ ಗಂಟೆಗಳ ಕಾಲ ಬಂದ್ ಮಾಡಲು ಆದೇಶಿಸಲಾಗಿದೆ. ಎಸ್.ಐ.ಯವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.