HomePage_Banner
HomePage_Banner
HomePage_Banner
HomePage_Banner

ಪತ್ರಕರ್ತ ಸಿಶೇ ಕಜೆಮಾರ್‌ರವರ ಗೃಹಪ್ರವೇಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುದ್ದಿ ಬಿಡುಗಡೆ ದಿನಪತ್ರಿಕೆಯ ವರದಿಗಾರ ಸಿಶೇ ಕಜೆಮಾರ್‌ರವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ಜು.13ರಂದು ಬೆಳಿಗ್ಗೆ ನಡೆಯಿತು. ಜ್ಯೋತಿಷಿ ಶ್ರೀಪತಿ ಭಟ್ ಕೆಯ್ಯೂರುರವರು ಗಣಹೋಮದೊಂದಿಗೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಕೋವಿಡ್ 19 ಮುನ್ನೆಚ್ಚರಿಕೆಯ ಪ್ರಯುಕ್ತ ಸರಕಾರದ ನಿಯಮಾನುಸಾರ ಸರಳ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ ಶಿವಾನಂದ, ಕೆದಂಬಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ, ಹೊಟೇಲ್ ಅಲ್‌ರಾಯ ಮಾಲಕ ರಫೀಕ್ ಅಲ್‌ರಾಯ ಸಹಿತ ಹಲವು ಮಂದಿ ಗಣ್ಯರು ಭೇಟಿ ನೀಡಿ ಶುಭ ಹಾರೈಸಿದರು. ಸಿಶೇ ಕಜೆಮಾರ್ ಮತ್ತು ಮಮತಾ ಕಜೆಮಾರ್‌ರವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

ಶ್ರೀಪತಿ ಭಟ್‌ರವರಿಂದ ಧಾರ್ಮಿಕ ಕಾರ್ಯಕ್ರಮ ಜರಗಿತು
ಮಣ್ಣಿನ ಇಟ್ಟಿಗೆ ನಿರ್ಮಿಸಲಾದ ಮನೆ

ಮಣ್ಣಿನ ಇಟ್ಟಿಗೆಯಿಂದ ನಿರ್ಮಿತ ಮನೆ
ಮನೆಯು ಹಲವು ವಿಶೇಷತೆಗಳನ್ನು ಕೂಡಿದ್ದು ಪರಿಸರ ಸ್ನೇಹಿ ಮಡ್‌ಬ್ಲಾಕ್‌ನಿಂದ ನಿರ್ಮಿತವಾಗಿದೆ. ಮಣ್ಣಿನಿಂದ ನಿರ್ಮಿತವಾದ ಇಟ್ಟಿಗೆಗಳನ್ನು ಬಳಸಿಕೊಳ್ಳಲಾಗಿದೆ. ಬೇಸಿಗೆಕಾಲದಲ್ಲೂ ತಂಪಾಗಿ ಇರುವ ಸಾಮರ್ಥ್ಯ ಇಟ್ಟಿಗೆಗಳಿದ್ದು ಮನೆಗೆ ಸಂಪೂರ್ಣ ಇದೇ ರೀತಿಯ ಇಟ್ಟಿಗೆಗಳನ್ನು ಬಳಸಿಕೊಳ್ಳಲಾಗಿದೆ. ಇದಲ್ಲದೆ ಮನೆಗೆ ಮರದ ಬಳಕೆ ಎಲ್ಲೂ ಮಾಡಿಲ್ಲ ಬದಲಾಗಿ ಸಿಮೆಂಟ್, ಅಲ್ಯೂಮಿನಿಯಂ ಮತ್ತು ಸ್ಟೀಲ್‌ಗಳನ್ನು ಬಳಸಿಕೊಳ್ಳಲಾಗಿದೆ. ಮನೆಯ ಬಾಗಿಲಿಗೆ ಅತ್ಯಾಧುನಿಕ ರೀತಿಯ ಸ್ಟೀಲ್‌ಡೋರ್ ಬಳಕೆ ಮಾಡಲಾಗಿದೆ.ಕಿಟಕಿಗಳಿಗೆ ಅಲ್ಯೂಮಿನಿಯಂ ಡೋರ್ ಮತ್ತು ಸಿಮೆಂಟ್‌ನ ಕಿಟಕಿ ದಾರಂದಗಳನ್ನು ಇಡಲಾಗಿದೆ.ಹಳೇಯ ಕಾಲದ ವಿದ್ಯುತ್ ವಯರಿಂಗ್ ಸಿಸ್ಟಮ್ ಅನ್ನು ಮತ್ತೆ ಬಳಕೆ ಮಾಡಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.