HomePage_Banner
HomePage_Banner
HomePage_Banner
HomePage_Banner

ದ್ವಿತೀಯ ಪಿಯು ಫಲಿತಾಂಶ ಪ್ರಕಟ – ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಪ್ರಥಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಪತ್ರಿಕಾಗೋಷ್ಟಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಕರ್ನಾಟಕ ಪಿಯು ಬೋರ್ಡ್‌ನ ಅಧಿಕೃತ ವೆಬ್‌ಸೈಟ್ ಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಳಿಸಲಾಗಿದೆ. 

ಒಟ್ಟಾರೆ ಫಲಿತಾಂಶದಲ್ಲಿಯೂ ಈ ಬಾರಿ ತುಸು ಹೆಚ್ಚಳ ಕಂಡುಬಂದಿದೆ. ಈ ಬಾರಿ ಶೇಕಡಾ 61.80 ಫಲಿತಾಂಶ ದಾಖಲಾದರೆ ಕಳೆದ (2019) ವರ್ಷ 61.73 ಫಲಿತಾಂಶ ಬಂದಿತ್ತು.

ಪರೀಕ್ಷೆಗೆ ಹಾಜರಾದ ಹೊಸ ವಿದ್ಯಾರ್ಥಿಗಳ ಪೈಕಿ ಈ ಬಾರಿ ಶೇ. 69.20 ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ. 68.68 ಫಲಿತಾಂಶ ಬಂದಿತ್ತು. ಎಂದಿನಂತೆ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ 675277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 384947 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಈ ಬಾರಿ ಪ್ರಥಮ ಸ್ಥಾನವನ್ನು ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡ  ಜಿಲ್ಲೆಗಳು ಸಮಾನವಾಗಿ ಹಂಚಿಕೊಂಡಿವೆ. ಉಡುಪಿ ಮತ್ತು ದಕ್ಷಿಣ ಕನ್ನಡ ತಲಾ 90.71% ಫಲಿತಾಂಶ ದಾಖಲಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.  ಕೊಡಗು ಜಿಲ್ಲೆ ಮೂರನೇ ಸ್ಥಾನ (81.53%) ಪಡೆದಿದೆ. ಚಿತ್ರದುರ್ಗ, ರಾಯಚೂರು ಮತ್ತು ವಿಜಯಪುರ ಕೊನೆಯ ಮೂರು ಸ್ಥಾನಗಳಲ್ಲಿದೆ.

ಕೋವಿಡ್19 ನಿಂದಾಗಿ ಲಾಕ್‌ಡೌನ್ ನಿಯಮ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿಯ ಆಂಗ್ಲ ಭಾಷಾ ಪತ್ರಿಕೆಯ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಜೂನ್ 18 ರಂದು ಸುರಕ್ಷತಾ ಕ್ರಮಗಳೊಂದಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಅತಂತ್ರ ಪರಿಸ್ಥಿತಿ, ಮುಂದೂಡಿಕೆ, ಕೊರೊನಾ ಭಯ ಇವೆಲ್ಲದರ ಮಧ್ಯೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೂ ಫಲಿತಾಂಶದಲ್ಲಿ ಹೆಚ್ಚಳ ಕಂಡುಬಂದಿರುವುದು ವಿಶೇಷವಾಗಿದೆ. 

ಕರ್ನಾಟಕದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು – 675277

2020 ರ ಒಟ್ಟು ಶೇಕಡಾ ಫಲಿತಾಂಶ – 61.80
ಕಳೆದ (2019) ವರ್ಷ ಶೇಕಡಾ ಫಲಿತಾಂಶ – 61.73

ಹಾಜರಾದ ಹೊಸ ವಿದ್ಯಾರ್ಥಿಗಳು – 556267
ತೇರ್ಗಡೆಯಾದವರು – 384947
2020ರ ಶೇಕಡಾ ಫಲಿತಾಂಶ -69.20
ಕಳೆದ (2019) ವರ್ಷ ಶೇಕಡಾ ಫಲಿತಾಂಶ -68.68

ಪುನರಾವರ್ತಿತ ವಿದ್ಯಾರ್ಥಿಗಳು 91025
ತೇರ್ಗಡೆ – 25602
2020ರ ಶೇಕಡಾ ಫಲಿತಾಂಶ – 46.56
ಕಳೆದ (2019) ವರ್ಷ ಶೇಕಡಾ ಫಲಿತಾಂಶ – 27.37

ಖಾಸಗಿ ಅಭ್ಯರ್ಥಿಗಳು
27985 – ಹಾಜರಾದ ವಿದ್ಯಾರ್ಥಿಗಳು
6748 ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು
2020ರ ಶೇಕಡಾ ಫಲಿತಾಂಶ – 24.11

ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾದವರ ಪ್ರಮಾಣ (2020) – 76.2%
ಕಳೆದ ವರ್ಷ (2019) – 66.58%

ವಾಣಿಜ್ಯ ವಿಭಾಗದಲ್ಲಿ (2020)- 65.52%
ಕಳೆದ ವರ್ಷ (2019) – 66.39%

ಕಲಾ ವಿಭಾಗದಲ್ಲಿ (2020)- 41.27%
ಕಳೆದ ವರ್ಷ (2019) – 50.53 %

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.