HomePage_Banner
HomePage_Banner
HomePage_Banner
HomePage_Banner

ನಿಂತಿಕಲ್ಲುವಿನಲ್ಲಿ `ಶ್ರೀದೇವಿ ಅಗ್ರಿಟೆಕ್’ ಶುಭಾರಂಭ | ಕೃಷಿಕರ ನೆಚ್ಚಿನ ಸಂಸ್ಥೆಯಾಗಿ ಶ್ರೀದೇವಿ ಅಗ್ರಿಟೆಕ್ ಹೆಸರು ಪಡೆಯಲಿ-ಶಶಿಕುಮಾರ್ ರೈ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳ ವಿತರಣಾ ಸಂಸ್ಥೆ `ಶ್ರೀದೇವಿ ಅಗ್ರಿಟೆಕ್’ ಜು.೧೪ರಂದು ಸುಳ್ಯ ತಾಲೂಕಿನ ನಿಂತಿಕಲ್ಲುವಿನಲ್ಲಿರುವ ಧರ್ಮಶ್ರೀ ಆರ್ಕೇಡ್‌ನಲ್ಲಿ ಶುಭಾರಂಭಗೊಂಡಿತು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ರಿಬ್ಬನ್ ಕತ್ತರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು. ಕಛೇರಿ ಉದ್ಘಾಟಿಸಿದ ಧರ್ಮಶ್ರೀ ಆರ್ಕೇಡ್ ಮಾಲಕ ಮಾಧವ ಗೌಡ ಕಾಮಧೇನು ಮಾತನಾಡಿ ಕೃಷಿಕರಿಗೆ ಉಪಯುಕ್ತವಾದ ರಸಗೊಬ್ಬರಗಳ ಮಾರಾಟ ಕೇಂದ್ರ ಆರಂಭಗೊಂಡದದು ಊರಿನ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಸಂಸ್ಥೆ ಉನ್ನತವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.

    
ಬಳಿಕ ಮಾತನಾಡಿದ ಅವರು ರೈತರಿಗೆ, ಕೃಷಿಕರಿಗೆ ರಸಗೊಬ್ಬರ ಅತ್ಯವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಶ್ರೀದೇವಿ ಅಗ್ರಿಟೆಕ್ ಸಂಸ್ಥೆಯು ಸಾವಯವ ಮತ್ತು ರಾಸಾಯನಿಕ ಗೊಬ್ಬರ ವಿತರಣೆ ಮೂಲಕ ಜಿಲ್ಲೆಯಲ್ಲಿ ಗುರುತಿಸುವಂತಾಗಲಿ ಎಂದು ಆಶಿಸಿದರು. ಇತ್ತೀಚಿನ ದಿನಗಳಲ್ಲಿ ಯುವಕರು ಕೂಡಾ ಕೃಷಿ ಚಟುವಟಿಕೆಗಳತ್ತ ಗಮನಹರಿಸುತ್ತಿದ್ದು ಆಶಾದಾಯಕ ಬೆಳವಣಿಗೆಯಾಗಿದೆ, ಕೃಷಿಕರು ಗುಣಮಟ್ಟದ ರಸಗೊಬ್ಬರಗಳನ್ನು ಬಯಸುತ್ತಿದ್ದು ಅದನ್ನು ಪೂರೈಸುವಲ್ಲಿ ಶ್ರೀದೇವಿ ಅಗ್ರಿಟೆಕ್ ಸಂಸ್ಥೆ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸ ನನಗಿದೆ, ನಮ್ಮ ಸಹಕಾರಿ ಸಂಘ ಕೂಡಾ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದರು. ಇಲ್ಲಿ ಆರಂಭಗೊಂಡಿರುವ ಸಂಸ್ಥೆಯು ಮುಂದಿನ ದಿನಗಳಲ್ಲಿ ಜಿಲ್ಲೆಯಲೇ ಹೆಸರು ಪಡೆದ ಸಂಸ್ಥೆಯಾಗಿ ಬೆಳೆಯಲಿ ಎಂದು ಅವರು ಆಶಿಸಿದರು.


ದೀಪ ಬೆಳಗಿಸಿ ಬಳಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಕೃಷಿಕ ದಯಾನಂದ ಕೋಟೆ ಮಾತನಾಡಿ ರೈತಾಪಿ ಜನರ ಅನುಕೂಲತೆಗೆ ತಕ್ಕಂತೆ ಇಂದು ನಿಂತಿಕಲ್ಲಿನಲ್ಲಿ ಶುಭಾರಂಭಗೊಂಡಿರುವ ಶ್ರೀದೇವಿ ಅಗ್ರಿಟೆಕ್ ಯಶಸ್ವಿಯಾಗಿ ಮುನ್ನೆಯಲಿದೆ, ಈ ಸಂಸ್ಥೆಯಿಂದ ಕೃಷಿಕರಿಗೆ ಅನುಕೂಲಕ ರೀತಿಯ ಸೇವೆ ಲಭ್ಯವಾಗಲಿ ಎಂದು ಹೇಳಿದರು. ಇಂತಹ ಸಂಸ್ಥೆಗಳು ಆರಂಭಗೊಳ್ಳುವುದರಿಂದ ಊರು ಅಭಿವೃದ್ಧಿ ಹೊಂದುವುದಲ್ಲದೇ ಕೃಷಿಕರಿಗೂ ಉಪಯುಕ್ತವಾಗುತ್ತದೆ ಎಂದು ಅವರು ಹೇಳಿದರು.
ಕೃಷಿಕ ಪದ್ಮನಾಭ ರೈ ಎಂಜಿರ ಮಾತನಾಡಿ ಕೆಲವು ವರ್ಷಗಳಿಂದ ಶ್ರೀದೇವಿ ಅಗ್ರಿಟೆಕ್‌ನಿಂದ ರಸಗೊಬ್ಬರಗಳನ್ನು ಖರೀದಿಸುತ್ತಿದ್ದು ಉತ್ತಮ ಗುಣಮಟ್ಟದ ಗೊಬ್ಬರ ಲಭಿಸುತ್ತಿದೆ, ಸಂಸ್ಥೆಯಿಂದ ಉತ್ತಮ ಸೇವೆಯೂ ಸಿಗುತ್ತಿದೆ, ಮುಂದಕ್ಕೆ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಸಾಧಿಸಲಿ ಎಂದು ಅವರು ಹಾರೈಸಿದರು.


ಮೋಹನ್ ಕೂಟಾಜೆ ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಮಧ್ಯಭಾಗದಲ್ಲಿರುವ ನಿಂತಿಕಲ್ಲುವಿನಲ್ಲಿ ಆರಂಭಗೊಂಡಿರುವ ಈ ಸಂಸ್ಥೆ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.
ಸಂಸ್ಥೆಯ ಪಾಲುದಾರರಾದ ಬಿ.ಜಿ ತಿಮ್ಮಪ್ಪ ರೈ ಮತ್ತು ವಿಜೇಶ್ ಬಂಗೇರ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಪಾಲುದಾರ ಬಿ.ಜಿ ತಿಮ್ಮಪ್ಪ ರೈ ಸ್ವಾಗತಿಸಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿದರು.

ನಮ್ಮ ಸಂಸ್ಥೆ 2013ನೇ ಇಸವಿಯಲ್ಲಿ ಪ್ರಾರಂಭಗೊಂಡು ಆಲಂಕಾರು ಹಾಗೂ ಪುತ್ತೂರಿನಲ್ಲಿ ವ್ಯವಹಾರ ನಡೆಸಿದೆ. ಕಾರ್ಕಳದಲ್ಲಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಇದೀಗ ನಿಂತಿಕಲ್ಲುವಿನಲ್ಲಿ ನೂತನ ಶ್ರೀದೇವಿ ಅಗ್ರಿಟೆಕ್ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ನಮ್ಮಲ್ಲಿ ಸಿರಿವೃದ್ಧಿ, ಕೃಷಿಪೂರ್ಣ, ಅರ್ಕಶಕ್ತಿ ಮೊದಲಾದ ಉತ್ಪನ್ನಗಳು ಸಂಸ್ಥೆಯಲ್ಲಿ ಲಭ್ಯವಿದೆ. ಅಲ್ಲದೇ ಸುಪಲಾ, ಯೂರಿಯಾ. ಫ್ಯಾಕ್ಟಾಪಸ್, ಹಿಪ್ಕೋ, ಮೈಲ್‌ತುತ್ತು, ಸುಣ್ಣ ಇನ್ನಿತರ ಕೃಷಿ ಉಪಯೋಗಿ ಉತ್ಪನ್ನಗಳು ನಮ್ಮಲ್ಲಿ ಲಭ್ಯವಿದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿ. – ಬಿ.ಜಿ ತಿಮ್ಮಪ್ಪ ರೈ, ವಿಜೇಶ್ ಬಂಗೇರ, ಪಾಲುದಾರರು

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.