ಪುತ್ತೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ ಇಲ್ಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಒಟ್ಟು ಶೇ. 70 ಫಲಿತಾಂಶ ಲಭಿಸಿದೆ. ವಿಜ್ಷಾನ ವಿಭಾಗದಲ್ಲಿ ಶೇ. 100ಪಲಿತಾಂಶ ಪಡೆದುಕೊಂಡಿದ್ದು, ವಾಣಿಜ್ಯ ವಿಭಾಗದಲ್ಲಿ 90 ಶೇ. ಪಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಕಳಪೆ ಫಲಿತಾಂಶ ಪ್ರಕಟವಾಗಿದ್ದು ಶೇ. 40 ಮಾತ್ರ ಪಡೆದುಕೊಂಡಿದೆ.ವಿಜ್ಞಾನ ವಿಭಾಗದ ಜಝೀರಾ 538 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದು ಆಯಿಷತ್ ರಝೀನಾ (514) ಅಂಕಪಡೆದುಕೊಂಡಿದ್ದು , ವಾಣಿಜ್ಯ ವಿಭಾಗದ ಫಾತಿಮತ್ ಅಸ್ಲಮಿಯ್ಯ ೫೧೪ ಅಂಕಗಳೊಂದಿಗೆ ದ್ವಿತೀಯ ಸ್ಥಾನಿಗಳಾಗಿದ್ದಾರೆ ಎಂದು ಪಬ್ಲಿಕ್ ಸ್ಕೂಲ್ ಪ್ರಾಚಾರ್ಯರಾದ ದುಗ್ಗಪ್ಪ ಎನ್ ತಿಳಿಸಿದ್ದಾರೆ.