HomePage_Banner
HomePage_Banner
HomePage_Banner
HomePage_Banner

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಿಂದ ಸರಕಾರಿ ಆಸ್ಪತ್ರೆಗೆ ವಿವೇಕ ಜೀವವರ್ಧಕ ವೆಂಟಿಲೇಟರ್ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನೂರಕ್ಕೆ ನೂರು ಪುತ್ತೂರು ಆಸ್ಪತ್ರೆ ಆಧುನಿಕತೆಯತ್ತ ಪರಿವರ್ತನೆ – ಸಂಜೀವ ಮಠಂದೂರು

ಪುತ್ತೂರು: ಇತ್ತೀಚೆಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕವೃಂದದವರು ಅವಿಷ್ಕಾರಿಸಿ ಯಶಸ್ವಿಯಾದ ‘ವಿವೇಕ ಜೀವವರ್ಧಕ’ ಕೃತಕ ಉಸಿರಾಟದ ಸಾಧನವನ್ನು ತಾಲೂಕಿನ ಎಲ್ಲಾ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಚಿತವಾಗಿ ಕೊಡುವ ಗುರಿಯೊಂದಿಗೆ ಜು.೧೪ರಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ಶಾಸಕ ಸಂಜೀವ ಮಠಂದೂರು ಅವರ ಮೂಲಕ ಹಸ್ತಾಂತರಿಸಲಾಯಿತು.

ಅನಿವಾಸಿ ಹಿರಿಯ ವಿದ್ಯಾರ್ಥಿಗಳ ಸಹಕಾರ:
ಸುಮಾರು ರೂ. ೧೬ಸಾವಿರ ವೆಚ್ಚ ತಗಲುವ ‘ವಿವೇಕ ಜೀವವರ್ಧಕ’ ಕೃತಕ ಉಸಿರಾಟದ ಸಾಧನವನ್ನು ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಮುಂದೆ ಬಂದಿದ್ದು, ಇದಕ್ಕೆ ತಗಲುವ ವೆಚ್ಚವನ್ನು ವಿದ್ಯಾ ಸಂಸ್ಥೆಯ ಅನಿವಾಸಿ ಹಿರಿಯ ವಿದ್ಯಾರ್ಥಿಗಳು ನೀಡಲು ಮುಂದೆ ಬಂದಿದ್ದಾರೆ. ಈಗಗಲೇ ಅಮೇರಿಕದಲ್ಲಿ ನೆಲೆಸಿರುವ ಭಕ್ತಿ ಹೆಗಡೆ, ಅನನ್ಯ ಭಟ್ ಮತ್ತು ಪ್ರಣವ ಜೋಷಿ ಅವರು ಆನ್‌ಲೈನ್ ಮೂಲಕ ಲಘು ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನಡೆಸಿ ಧನ ಸಂಗ್ರಹಣೆ ಮಾಡುತ್ತಿದ್ದು, ಸಂಗ್ರಹವಾದ ಹಣದಿಂದ ಈಗಾಗಲೇ ಐದರಿಂದ ಆರು ವೆಂಟಿಲೇಟರ್‌ನ್ನು ಉಚಿತವಾಗಿ ಆಸ್ಪತ್ರೆಗಳಿಗೆ ನೀಡುವ ಕಾರ್ಯ ನಡೆಯುತ್ತಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೂ ಉಚಿತವಾಗಿ ವೆಂಟಿಲೇಟರ್ ನೀಡಿದ್ದು, ಅದರ ಮುಂದಿನ ನಿರ್ವಹಣೆಯನ್ನೂ ಕೂಡಾ ಕಾಲೇಜಿನ ಮೂಲಕ ನಡೆಯುತ್ತದೆ ಎಂದು ಸಂಸ್ಥೆ ಭರವಸೆ ನೀಡಿದೆ.

ನೂರಕ್ಕೆ ನೂರು ಪುತ್ತೂರು ಆಸ್ಪತ್ರೆ ಆಧುನಿಕತೆಯತ್ತ ಪರಿವರ್ತನೆ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕೋವಿಡ್ -೧೯ ಸಂದರ್ಭದಲ್ಲಿ ಆಧುನಿಕತೆಯನ್ನು ಒಳಗೊಂಡ ವೆಂಟಿಲೇಟರ್ ಅವಶ್ಯಕತೆಯನ್ನು ಮನಗಂಡು ವೈದ್ಯಕೀಯ ಸೇವೆ ಮಾಡುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ರೋಗಿಗಳ ಆರೈಕೆಯಲ್ಲಿ ಅನುಕೂಲ ಮಾಡುವ ಕೆಲಸವನ್ನು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಸಂಸ್ಥೆಯಿಂದ ಆಗಿದೆ. ಮುಂದೆಯೂ ನೂರಕ್ಕೆ ನೂರು ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಆಧುನಿಕತೆ ಮತ್ತು ಮೂಲಭೂತ ಸೌಲಭ್ಯ ಸಿಗುವತ್ತ ಪರಿವರ್ತನೆ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ದಾನಿಗಳ ಕೊಡುಗೆ ಮಹತ್ತರವಾಗಿದೆ ಎಂದು ಹೇಳಿದರು. ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಜ್ಯೋತಿ ಪುತ್ತೂರಾಯ, ಡಾ. ಜಯದೀಪ್ ಅವರು ವೆಂಟಿಲೇಟರ್‌ನ್ನು ಪಡೆದು ಕೊಂಡರು. ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕ ರವಿಕೃಷ್ಣ ಭಟ್ ಕಲ್ಲಾಜೆ, ಉಪನ್ಯಾಸಕರಾದ ಪ್ರೊ. ಎಮ್.ಎಲ್.ಸುದರ್ಶನ್, ಪ್ರೊ. ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದಲ್ಲಿ ಯಶಸ್ವಿ
ಕಾಲೇಜಿನ ಸಂಚಾಲಕ ರಾಧಾಕೃಷ್ಣ ಭಕ್ತರ ಅಶಯದಂತೆ ನಮ್ಮ ಎಲ್ಲಾ ಅಧ್ಯಾಪಕವೃಂದದವರು ಮಾಡಿದ ವಿವೇಕ ಜೀವವರ್ಧಕ ಕೃತಕ ಉಸಿರಾಟದ ಸಾಧನವನ್ನು ಈಗಾಗಲೇ ವೆನ್‌ಲಾಕ್, ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಡೆಮೋ ಮಾಡಿ ತೋರಿಸಿ, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಮ್ಮ ಕಾಲೇಜಿನ ಪ್ರೊಫೆಸರ್‌ಗಳಾದ ಎಮ್.ಎಲ್. ಸುದರ್ಶನ್, ಶ್ರೀಕಾಂತ್ ರವ್, ಪ್ರೊ. ವೆಂಕಟೇಶ್ ಅವರು ಜಿಲ್ಲಾ ಸರ್ಜನ್‌ಗೆ ಈಗಾಗಲೇ ಹಸ್ತಾಂತರಿಸಿದ್ದಾರೆ. ಮುಂದೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಉಚಿತವಾಗಿ ಕೊಡುವ ದೃಷ್ಟಿ ಇಟ್ಟು ಕೊಂಡಿದ್ದೇವೆ – ರವಿಕೃಷ್ಣ ಭಟ್ ಕಲ್ಲಾಜೆ, ಆಡಳಿತ ಮಂಡಳಿ ನಿರ್ದೇಶಕ ವಿವೆಕಾನಂದ ಇಂಜಿನಿಯರಿಂಗ್ ಕಾಲೇಜು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.