HomePage_Banner
HomePage_Banner
HomePage_Banner
HomePage_Banner

ಪಿಯುಸಿ ಪರೀಕ್ಷೆ: ಫಿಲೋಮಿನಾಗೆ ಶೇ.94 ಫಲಿತಾಂಶ | ರಾಜ್ಯದಲ್ಲಿ ಫಿಲೋಮಿನಾಗೆ ನಾಲ್ಕು ರ್‍ಯಾಂಕ್‌ಗಳು

Puttur_Advt_NewsUnder_1
Puttur_Advt_NewsUnder_1
  • ವಿಜ್ಞಾನ ವಿಭಾಗದಲ್ಲಿ 2, ವಾಣಿಜ್ಯ ವಿಭಾಗದಲ್ಲಿ 2 ರ್‍ಯಾಂಕ್

ಪುತ್ತೂರು: 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿಗೆ ಶೇ.94 ಫಲಿತಾಂಶ ಲಭಿಸಿದೆ ಮಾತ್ರವಲ್ಲ ವಿಜ್ಞಾನ ವಿಭಾಗದಲ್ಲಿ 2 ಮತ್ತು ವಾಣಿಜ್ಯ ವಿಭಾಗದಲ್ಲಿ 2 ರ್‍ಯಾಂಕ್‌ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ ಮಾತ್ರವಲ್ಲದೆ ತಾಲೂಕಿನಲ್ಲಿಯೂ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದೆ. ಕಳೆದ ಬಾರಿಯೂ ಕಾಲೇಜು ಮೂರು ರ್‍ಯಾಂಕ್‌ಗಳನ್ನು ತನ್ನದಾಗಿಸಿಕೊಂಡಿತ್ತು.

 

ಶೃತಿ ಯು ಎಸ್‌

ಶೇ.95ಕ್ಕಿಂತ ಹೆಚ್ಚಿನ ಅಂಕಗಳನ್ನು ಈ ಬಾರಿ ಕಾಲೇಜಿನ 27 ಮಂದಿ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸುಧನ್ವ ಶ್ಯಾಂರವರು ಒಟ್ಟು 591 ಅಂಕಗಳನ್ನು ಪಡೆದು ರಾಜ್ಯದಲ್ಲಿ ಆರನೇ ರ್‍ಯಾಂಕ್‌ನ್ನು, ಶೃತಿ ಯು ಎಸ್‌ ಒಟ್ಟು 589 ಅಂಕಗಳನ್ನು ಪಡೆದು ರಾಜ್ಯದಲ್ಲಿ ಎಂಟನೇ ರ್ಯಾಂಕ್  ಮತ್ತು ವಾಣಿಜ್ಯ ವಿಭಾಗದಲ್ಲಿ ರಿತೇಶ್ ರೈ ಎಂ ಹಾಗೂ ಅನೂಪ್ ಬಿ.ವಿರವರು ತಲಾ 590 ಅಂಕಗಳನ್ನು ಪಡೆದು ರಾಜ್ಯದಲ್ಲಿ ಎಂಟನೇ ರ್‍ಯಾಂಕ್‌ಗಳನ್ನು ಗಳಿಸಿಕೊಂಡಿದ್ದಾರೆ. ವಿಜ್ಞಾನ ವಿಭಾಗದ ಸುಧನ್ವ ಶ್ಯಾಂರವರು ಇಂಗ್ಲೀಷ್‌ನಲ್ಲಿ 95, ಸಂಸ್ಕೃತದಲ್ಲಿ 98, ಫಿಸಿಕ್ಸ್‌ನಲ್ಲಿ 98, ಕೆಮೆಸ್ಟ್ರಿಯಲ್ಲಿ 99, ಮ್ಯಾಥ್ಸ್‌ನಲ್ಲಿ 100, ಶೃತಿ ಯು ಎಸ್‌ ರವರು ಇಂಗ್ಲೀಷ್‌ 92, ಹಿಂದಿ 98, ಫಿಸಿಕ್ಸ್‌ 100, ಕೆಮಡೆಸ್ಟ್ರಿ 100, ಗಣಿತ 99, ಜೀವಶಾಸ್ತ್ರ 100, ವಾಣಿಜ್ಯ ವಿಭಾಗದ ರಿತೇಶ್ ರೈಯವರು ಸಂಸ್ಕೃತ, ವ್ಯವಹಾರ ಅಧ್ಯಯನ, ಅಂಕಗಣಿತ, ಕಂಪ್ಯೂಟರ್ ಸೈನ್ಸ್‌ನಲ್ಲಿ ತಲಾ 100, ಇಂಗ್ಲೀಷ್‌ನಲ್ಲಿ 90 ಮತ್ತು ಅನೂಪ್‌ರವರು ಅಂಕಗಣಿತ, ಸಂಸ್ಕೃತ, ಎಕನಾಮಿಕ್ಸ್, ವ್ಯವಹಾರ ಅಧ್ಯಯನದಲ್ಲಿ ತಲಾ 100, ಇಂಗ್ಲೀಷ್‌ನಲ್ಲಿ 92 ಅಂಕಗಳನ್ನು ಗಳಿಸಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ನಿಶಾಂತ್‌ರವರು 549 ಅಂಕಗಳನ್ನು ಗಳಿಸಿ ವಿಭಾಗದಲ್ಲಿ ಪ್ರಥಮರೆನಿಸಿಕೊಂಡಿದ್ದಾರೆ.

ಒಟ್ಟು 532 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 497 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 125 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 301 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ,55 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕಲಾ ವಿಭಾಗದಲ್ಲಿ ಶೇ.93, ವಾಣಿಜ್ಯ ವಿಭಾಗದಲ್ಲಿ ಶೇ.96 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.94ಫಲಿತಾಂಶ ಬಂದಿರುತ್ತದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.