HomePage_Banner
HomePage_Banner
HomePage_Banner
HomePage_Banner

ಪಿಯುಸಿ ಫಲಿತಾಂಶ: ರಾಮಕುಂಜ ಪ.ಪೂ.ಕಾಲೇಜಿಗೆ ಶೇ.90 ಫಲಿತಾಂಶ

Puttur_Advt_NewsUnder_1
Puttur_Advt_NewsUnder_1
  • ವಿಜ್ಞಾನ ವಿಭಾಗ ಶೇ. 85.22
  • ವಾಣಿಜ್ಯ ವಿಭಾಗ ಶೇ.92.30
  • ಕಲಾ ವಿಭಾಗ ಶೇ. 87.18

ರಾಮಕುಂಜ: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ 2019-20ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿಗೆ ಒಟ್ಟು ಶೇ.90೦ ತೇರ್ಗಡೆ ಫಲಿತಾಂಶ ಲಭಿಸಿದೆ.

ಸಂಸ್ಥೆಯಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಒಟ್ಟು 257 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಈ ಪೈಕಿ 230 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.90 ಫಲಿತಾಂಶ ಲಭಿಸಿದೆ. ಒಟ್ಟು 42 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. 157 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 24 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 7 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ವಿಜ್ಞಾನ ವಿಭಾಗಕ್ಕೆ ಶೇ. 85.22, ವಾಣಿಜ್ಯ ವಿಭಾಗಕ್ಕೆ ಶೇ.92.20 ಹಾಗೂ ಕಲಾ ವಿಭಾಗಕ್ಕೆ ಶೇ. 87.18 ತೇರ್ಗಡೆ ಫಲಿತಾಂಶ ಬಂದಿದೆ.

ವಿಜ್ಞಾನ ವಿಭಾಗ:
ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ೮೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಈ ಪೈಕಿ ೭೫ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.೮೫.೨೨ ತೇರ್ಗಡೆ ಫಲಿತಾಂಶ ಬಂದಿದೆ. ೧೬ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. ೫೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ೬ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಸಪ್ತಶ್ರೀ ೫೬೪, ಸುಹಾನ್ ರೈ ಕೆ ೫೫೯, ರಶ್ಮಿತ ಕೆ ೫೫೬, ವಿಶ್ರುತ ಕೆ ೫೪೯, ವೀಣಾ ಕುಮಾರಿ ಪಿ ೫೪೮, ರಕ್ಷಿತಾ ಎನ್ ೫೪೪, ಮೈತ್ರಿ ಬಿ ೫೪೨, ನೇಹಾ ರೈ ೫೩೭, ಶ್ರೀನಿಧಿ ಬಿ.ಎಂ., ೫೩೨, ತೇಜಸ್ ಎನ್.ಡಿ. ೫೨೯, ರೇಷ್ಮಾ ಆರ್ ೫೨೬, ವಿನ್ಯಾಸ್ ಎಂ.ಡಿ., ೫೨೪, ದರ್ಶನ್ ಕೆ.ಪಿ. ೫೨೨, ಶಶಾಂಕ ಪಿ ೫೧೭, ನಿತಿನ್ ಎಂ ೫೧೪, ಶ್ರೀರಾಮ ಕೆ.ವಿ. ೫೧೩ ಅಂಕ ಪಡೆದುಕೊಂಡು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

ವಾಣಿಜ್ಯ ವಿಭಾಗ:
ವಾಣಿಜ್ಯ ವಿಭಾಗದಿಂದ ಪರೀಕ್ಷೆಗೆ ಹಾಜರಾದ ೧೩೦ ವಿದ್ಯಾರ್ಥಿಗಳ ಪೈಕಿ ೧೨೦ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.೯೨.೩೦ ಫಲಿತಾಂಶ ಬಂದಿದೆ. ೨೦ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ೮೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೧೩ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ೭ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಪೂಜಾ ಅತಾವಲೆ ೫೮೫, ಸಿಂಧೂರ ಕೆ., ೫೭೫, ದಿಶಾ ಬಿ ೫೫೭, ಭೂಮಿಕಾ ಬಿ.ಎಚ್., ೫೪೭, ಚೇತನ್ ಬಿ ೫೪೩, ದಿವಾಕರ ಭಟ್ ಎಂ., ೫೩೮, ಧನುಶ್ ಕೆ.ಸಿ. ೫೩೭, ಸುನೀತಾ ಜೆ ೫೩೪, ಭವಿಷ್ ಎಂ.ಎಸ್.,೫೩೦, ಚರಣ್ ಕುಮಾರ್ ಡಿ ೫೨೩, ಗಣೇಶ ೫೨೨, ಮಹಮ್ಮದ್ ಸುಹೈಲ್ ೫೧೮, ಗುರುಪ್ರಸಾದ್ ಬಿ ೫೧೭, ಸೊಹೈಬತ್ ೫೧೪, ಜುಬೈದ ೫೧೩, ಚೈತ್ರಾ ೫೧೧, ಪಿ.ಎ.ಮಹಮ್ಮದ್ ಅಶ್ರಫ್ ೫೧೧, ಸುರಕ್ಷಾ ಎಸ್. ೫೧೦, ವಿನಯ್ ಕುಮಾರ್ ಡಿ ೫೧೦ ಅಂಕ ಪಡೆದುಕೊಂಡು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

ಕಲಾವಿಭಾಗ:
ಕಲಾವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ೩೯ ವಿದ್ಯಾರ್ಥಿಗಳ ಪೈಕಿ ೩೫ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.೮೭.೧೮ ಫಲಿತಾಂಶ ಲಭಿಸಿದೆ. ೬ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ೨೪ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೫ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ನಿರೀಕ್ಷಾ ೫೭೧, ಮನೀಷ್ ಬಿ.ಕೆ. ೫೬೭, ಹೃತಿಕಾ ಕೆ. ೫೨೬, ಶೋಭಾದೇವಿ ೫೨೫,ರಶ್ಮಿ ೫೨೦, ಅಯಿಷತ್ ತಬಶೀರ ೫೧೭ ಅಂಕ ಪಡೆದುಕೊಂಡು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.