HomePage_Banner
HomePage_Banner
HomePage_Banner
HomePage_Banner

ಮರ್ದಾಳ: ಕೈಕುರೆ-ಕುಂಡಡ್ಕದಲ್ಲಿ ನಾಗಪ್ರತಿಷ್ಠೆ

Puttur_Advt_NewsUnder_1
Puttur_Advt_NewsUnder_1

ಮರ್ದಾಳ: ಇತಿಹಾಸ ಪ್ರಸಿದ್ಧ ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಮರ್ದಾಳ ಗ್ರಾಮದ ಕೈಕುರೆ ಕುಂಡಡ್ಕ ಎಂಬಲ್ಲಿ ಜೀರ್ಣೋದ್ಧಾರಗೊಂಡ ನಾಗನ ಕಟ್ಟೆಯಲ್ಲಿ ನಾಗಪ್ರತಿಷ್ಠೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜು.೧೨ ಹಾಗೂ ೧೩ರಂದು ನಡೆಯಿತು.

ಕೈಕುರೆ ಸುಬ್ರಾಯಪಾಲು ಮನೆತನದ ದಿ.ಬಾಬು ಗೌಡರವರ ಪತ್ನಿ ಮೀನಾಕ್ಷಿ ಬಾಬುಗೌಡರವರ ಕೈಕುರೆ ಕುಂಡಡ್ಕದಲ್ಲಿನ ಜಾಗದಲ್ಲಿದ್ದ ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಈ ಪುರಾತನ ನಾಗನ ಸಾನಿಧ್ಯವೂ ಅಜೀರ್ಣವಸ್ಥೆಯಲ್ಲಿದ್ದು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಮಾ.೧೯ರಂದು ಅನುಜ್ಞಾ ಕಲಶ ನೆರವೇರಿಸಿ ಬಾಲಾಲಯದಲ್ಲಿ ನಾಗಪ್ರತಿಷ್ಠೆ ಮಾಡಲಾಗಿತ್ತು. ಇದೀಗ ಕೈಕುರೆ ಸುಬ್ರಾಯಪಾಲು ಮನೆತನದವರ ನೇತೃತ್ವದಲ್ಲಿ ಜೀರ್ಣೋದ್ಧಾರ ಕೆಲಸಗಳು ನಡೆದಿದ್ದು ಜು.೧೨, ೧೩ರಂದು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು.

ಜು.೧೨ರಂದು ರಾತ್ರಿ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹಹವನ, ವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತುಪೂಜಾ ಬಲಿ, ಗೋಪೂಜೆ, ಸುದರ್ಶನ ಹೋಮ, ನೂತನ ಬಿಂಬ ಜಲಾಧಿವಾಸ ಪ್ರಾಕಾರ ಬಲಿ, ಪ್ರಸಾದ ವಿತರಣೆ ನಡೆಯಿತು. ಜು.೧೩ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಆಶ್ಲೇಷಬಲಿ, ಪಂಚವಿಶಂಕು ಕಲಶಪೂಜೆ ನಡೆದು ನಾಗಪ್ರತಿಷ್ಠೆ, ಗೋಪೂಜೆ ನಡೆಯಿತು. ಬಳಿಕ ಕುಂಡಡ್ಕದಲ್ಲಿ ಜೀರ್ಣೋದ್ಧಾರಗೊಂಡ ಕಟ್ಟೆಯಲ್ಲಿ ಪಂಜುರ್ಲಿ ಹಾಗೂ ಗುಳಿಗ ದೈವಗಳ ಪ್ರತಿಷ್ಠೆ ನಡೆದು, ಕಲಶಾಭಿಷೇಕ, ತಂಬಿಲ ಸೇವೆ ನಡೆಯಿತು. ನಂತರ ನಾಗನಕಟ್ಟೆಯಲ್ಲಿ ಕಲಶಾಭಿಷೇಕ, ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಅಂಗಡಿಮಜಲುನಲ್ಲಿ ನಾಗಪತ್ರಿಷ್ಠೆ:
ಕೈಕುರೆ ಸುಬ್ರಾಯಪಾಲು ಮನೆತನಕ್ಕೆ ಸಂಬಂಧಿಸಿದ ಮರ್ದಾಳ ಸಮೀಪದ ಅಂಗಡಿಮಜಲು ಎಂಬಲ್ಲಿ ಜೀರ್ಣೋದ್ದಾರಗೊಂಡ ನಾಗನಕಟ್ಟೆಯಲ್ಲಿ ನಾಗಪ್ರತಿಷ್ಠೆಯೂ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪವಿತ್ರಪಾಣಿ ಸುಬ್ರಹ್ಮಣ್ಯ ಬೈಪಾಡಿತ್ತಾಯ, ಅರ್ಚಕ ರಮೇಶ್ ಭಟ್‌ರವರು ಪೂಜಾವಿಧಾನಗಳಲ್ಲಿ ಸಹಕರಿಸಿದರು. ಕೈಕುರೆ ಕುಟುಂಬಸ್ಥರಾದ ಮೀನಾಕ್ಷಿಬಾಬು ಗೌಡ, ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕೈಕುರೆ, ಹರಿಣಾಕ್ಷಿಶಿವಪ್ರಸಾದ್, ತಾ.ಪಂ.ಸದಸ್ಯ ಗಣೇಶ್ ಕೈಕುರೆ, ತುಳಸಿ ಗಣೇಶ್ ಕೈಕುರೆಯವರು ಪೂಜಾವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೈಕುರೆ ಕುಟುಂಬದ ಉಷಾ ವೆಂಕಟ್ರಮಣ ಗೌಡ ಉಜಿರೆ, ಮಂಜುನಾಥ ಗೌಡ ಕೈಕುರೆ, ಸುಬ್ಬಣ್ಣ ಗೌಡ ಕೈಕುರೆ, ಮಧುಸೂದನ ಕೈಕುರೆ, ಪವನ್‌ಕುಮಾರ್ ಕೈಕುರೆ, ಲತಾವಾಸುದೇವ ಮಂಗಳೂರು, ವಾಸ್ತುಶಿಲ್ಪಿ ಪುರಂದರ, ನಡುಮಜಲು ಶ್ರೀ ಮಹಾವಿಷ್ಣುದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಹೆಗ್ಡೆ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಎಂ.ಸುಂದರ ಕರ್ಕೇರ, ಪೂವಪ್ಪ ಗೌಡ ಐತ್ತೂರು, ತಮ್ಮಯ್ಯ ಗೌಡ ಸುಳ್ಯ, ಮನೋಹರ ರೈ ಮರ್ದಾಳ, ರಾಧಾಕೃಷ್ಣ ಭಟ್ ಪಿಲಿಮಜಲು, ನಾರಾಯಣ ರೈ ಹತ್ಯಡ್ಕ, ಪ್ರಶಾಂತ್‌ಕುಮಾರ್ ರೈ ಮರ್ದಾಳ, ಗಣೇಶ್ ಮೇಲಾಂಟ, ಸತೀಶ್ ಕೆ.ಬಸ್ತಿ ಕೊಡೆಂಕಿರಿ, ಸೀತಾರಾಮ ಗೌಡ ಪೊಸವಳಿಕೆ, ಪ್ರಮುಖರಾದ ಪೂವಪ್ಪ ಗೌಡ ಸುಳ್ಯ, ಅಜಿತ್ ಶೆಟ್ಟಿ ಕಡಬ, ರಾಮಕೃಷ್ಣ ಬೈಪಾಡಿತ್ತಾಯ, ವಿದ್ಯಾಧರ ಕೇನ್ಯ, ಬಾಲಕೃಷ್ಣ ಮರ್ದಾಳ ವಿನಾಯಕ ಸ್ಟುಡಿಯೋ, ರಾಧಾಕೃಷ್ಣ ಗೌಡ ಸುಳ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.