HomePage_Banner
HomePage_Banner
HomePage_Banner
HomePage_Banner

ಕಡಬ: ಎಲ್ಲಾ ಪೊಲೀಸರಿಗೆ ಪೊಲೀಸ್ ಠಾಣೆಯ ಒಳಗಡೆ ಪ್ರವೇಶವಿಲ್ಲ!

Puttur_Advt_NewsUnder_1
Puttur_Advt_NewsUnder_1
  • ಶಿಫ್ಟ್ ಆಧಾರದಲ್ಲಿ ಪೊಲೀಸರಿಂದ ಕರ್ತವ್ಯ ನಿರ್ವಹಣೆ | ಅರ್ಧದಷ್ಟು ಪೊಲೀಸರಿಗೆ ‘ವರ್ಕ್ಸ್ ಫ್ರಮ್ ಹೋಮ್’
  • ಜನತೆ ಲಾಕ್ ಡೌನ್ ನಿಯವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಸ್.ಐ.ರುಕ್ಮ ನಾಯ್ಕ್ ಮನವಿ

ಕಡಬ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಸೊಂಕು ಕೊರೋನಾ ವಾರಿಯರ್ಸ್ ಮೇಲೆಗೆರಗುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಆರೋಗ್ಯ, ಕಂದಾಯ ಇಲಾಖೆಯಂತೆಯೇ ಪೊಲೀಸರು ಕೊರೋನಾ ಸೋಂಕನ್ನು ನಿವಾರಿಸಲು ಹೋರಾಡುತ್ತಿದ್ದಾರೆ. ಆದರೆ ಇತ್ತೀಚ್ಚಿನ ಕೆಲ ದಿನಗಳಲ್ಲಿ ಹೆಚ್ಚು ಹೆಚ್ಚು ಪೋಲಿಸರು ಕೊರೋನಾ ಸೋಂಕಿಗೆ ಭಾಧಿತರಾಗಿದ್ದಾರೆ, ಈ ನಿಟ್ಟಿನಲ್ಲಿ ಪೋಲಿಸ್ ಇಲಾಖೆಯೂ ತಮ್ಮ ಸಿಬ್ಬಂದಿಗಳನ್ನು ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಕೆಲವೊಂದು ನಿಯಮಗಳನ್ನು ಅಳವಡಿಸಿಕೊಂಡಿದ್ದಾರೆ.

ಕಡಬ ಠಾಣೆಯಲ್ಲಿ ಪೋಲಿಸರಿಗೆ ಶಿಫ್ಟ್ ಡ್ಯೂಟಿ
ಈಗಾಗಲೇ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದ್ದು, ಈಗಾಗಲೇ ಕಡಬ ಪೊಲೀಸ್ ಠಾಣೆಯ ಒಳಗಡೆ ಐವರು ಸಿಬ್ಬಂದಿಗಳನ್ನು ಹೊರತುಪಡಿಸಿ ಬೇರೆ ಯಾವ ಸಿಬ್ಬಂದಿಗೂ ಹೋಗಲು ಅವಕಾಶ ಇಲ್ಲ, ಒಳಗಡೆ ಇದ್ದ ಸಿಬ್ಬಂದಿಗಳು ಮುಂದಿನ ಸೂಚನೆ ನೀಡುವವರೆಗೆ ಹೊರಗಡೆ ಇತರ ಡ್ಯೂಟಿ ಮಾಡುವಂತಿಲ್ಲ, ಸಾರ್ವಜನಿಕರು ಬಂದರೆ ಠಾಣೆಯ ಎದುರುಗಡೆ ಕೌಂಟರ್ ಮಾಡಲಾಗಿದ್ದು ಅಲ್ಲಿಯೇ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ವ್ಯವಹರಿಸಬೇಕಾಗುತ್ತದೆ. ಇತ್ತ ಐವರು ಪೊಲೀಸ್ ಸಿಬ್ಬಂದಿಗಳು ಹೊರಗಡೆ ಡ್ಯೂಟಿ ಮಾಡಬೇಕಾಗುತ್ತದೆ. ಈ ಐವರು ಪೊಲೀಸರು 10 ದಿನಗಳ ಕಾಲ ಠಾಣೆಯ ಹೊರಗಡೆ ನಡೆಯುವ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ಇದೇ ವೇಳೆ ಉಳಿದ ಐವರು ಪೊಲೀಸರು ತಮ್ಮ ಮನೆ ಅಥಾವ ಕ್ವಾಟ್ರಾಸ್‌ನಲ್ಲೆ ಇದ್ದುಕೊಂಡು ಠಾಣೆಯ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ೧೦ ದಿನಗಳ ಬಳಿಕ ನಿವಾಸದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಕೋವಿಡ್ ಪರೀಕ್ಷೆ ನಡೆಸಿಕೊಂಡು ಠಾಣೆಯ ಹೊರಗಡೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ, ಇತ್ತ ೧೦ ದಿನಗಳ ಕಾಲ ಹೊರಗಡೆ ಕರ್ತವ್ಯ ನಿರ್ವಹಿಸಿದ ಪೊಲೀಸರು ಕೋವಿಡ್ ಪರೀಕ್ಷೆ ನಡೆಸಿಕೊಂಡು ಅವರು ತಮ್ಮ ನಿವಾಸಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ, ಹೊರಗಡೆ ಕರ್ತವ್ಯ ನಿರ್ವಹಿಸಿದ ಪೋಲಿಸರು ಠಾಣೆಯ ಒಳಗಡೆ ಹೋಗುವಂತಿಲ್ಲ ಈ ರೀತಿಯಾಗಿ ಶಿಫ್ಟ್ ಡ್ಯೂಟಿ ಅಳವಡಿಸಿಕೊಳ್ಳಲಾಗಿದೆ, ಇದರಿಂದ ಠಾಣೆಯ ಹೊರಗಡೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗುವುದರಿಂದ ಸಹಜವಾಗಿಯೇ ಒತ್ತಡಗಳು ಆರಂಭವಾಗಿದೆ, ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಾತ್ರ ದಿನದ ೨೪ ಗಂಟೆಯೂ ಸದಾ ಜಾಗೃತಿಯಲ್ಲಿರಬೇಕಾಗುತ್ತದೆ.

ಕೊರೋನಾ ನಿಯಮಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಿ-ರುಕ್ಮ ನಾಯ್ಕ್
ಈ ಬಗ್ಗೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುವ ಕಡಬ ಎಸ್. ರುಕ್ಮ ನಾಯ್ಕ್ ಅವರು, ಈಗಾಗಲೇ ಕೊರೋನಾ ಲಾಕ್ ಡೌನ್ ರಾತ್ರಿ ೮ರಿಂದ ಬೆಳಿಗ್ಗೆ ೫ ಗಂಟೆಯವರೆಗೆ ಇರುತ್ತದೆ, ಜು.೧೫ ರಾತ್ರಿ ೮ರಿಂದ ದ.ಕ ಜಿಲ್ಲೆ ಲಾಕ್ ಡೌನ್ ಘೋಷನೆ ಆಗಿದೆ, ಈ ಸಂದರ್ಭದಲ್ಲಿ ಸರಕಾರ ಸೂಚಿಸಿದ ನಿಯಮಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು, ಕಾನೂನು ಪಾಲನೆ ಮಾಡದಿರುವವರ ವಿರುದ್ದ ಇನ್ನು ಮುಂದೆ ಸರಕಾರ ಸೂಚಿಸಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ, ಯಾಕೆಂದರೆ ನಮ್ಮಲ್ಲಿ ಸಿಬ್ಬಂದಿಗಳು ಕಡಿಮೆ ಮಂದಿ ಕರ್ತವ್ಯದಲ್ಲಿರುವಾಗ ಕಠಿಣ ಕ್ರಮಗಳು ಕೈಗೊಳ್ಳುವುದು ಅನಿವಾರ್‍ಯವಾಗುತ್ತದೆ, ರಾತ್ರಿ ವೇಳೆ ಸಂಚಾರ ಸಂಪೂರ್ಣವಾಗಿ ನಿಷೇದಿಸಲಾಗಿದೆ ಎಂದ ಅವರು ಕೊರೋನಾ ವೈರಸ್‌ಗೆ ಯಾವುದೇ ವ್ಯಕ್ತಿ ಅಂತ ಇರುವುದಿಲ್ಲ, ಯಾರಿಗೂ ಬರಬಹುದು ಆದುದರಿಂದ ಎಲ್ಲ ಜನತೆ ಸರಕಾರ ಸೂಚಿಸಿದ ನಿಯಮವನ್ನು ಪಾಲಿಸುವಂತೆ ಅವರು ವಿನಂತಿ ಮಾಡಿಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.