ಪುತ್ತೂರು: ತಂಡದೊಳಗೆ ಪರಸ್ಪರ ಹೊಡೆದಾಟ ನಡೆದ ಮತ್ತು ಘಟನೆಯಲ್ಲಿ ಕೋಳಿ ಬಾಲ್ ಇರಿದು ಗಂಭೀರ ಗಾಯಗೊಂಡ ಯುವಕರೊಬ್ಬರು ಮಂಗಳೂರು ಆಸ್ಪತ್ರೆಯಲ್ಲಿ ಹಾಗೂ ಐವರು ಪುತ್ತೂರು ಅಸ್ಪತ್ರೆಯಲ್ಲಿ ನಡೆದ ಘಟನೆ ಬಲ್ನಾಡು ಸಮೀಪ ಜು.13ರಂದು ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಜು.12ರ ಆದಿತ್ಯವಾರ ಲಾಕ್ಡೌನ್ ಸಂದರ್ಭ ಬಲ್ನಾಡು ಆಟದ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಮಾತಿನ ಚಕಮಕಿ ನಡೆದು ಬೆಳವಣಿಗೆಯಲ್ಲಿ ಜು.13ರಂದು ರಾತ್ರಿ ಪರಸ್ಪರ ಹಲ್ಲೆ ನಡೆದಿದೆ ಎನ್ನಲಾಗಿದೆ.
ಕೋಳಿ ಬಾಲ್ ಇರಿದು ಗಾಯಗೊಂಡ ಬಲ್ನಾಡು ಜನತಾ ಕಾಲೋನಿ ನಿವಾಸಿ ಸವಾದ್ ಅವರು ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಉಳಿದಂತೆ ಮನ್ಸೂರ್(೨೩ವ), ಮುಸ್ತಾಫ(೨೨ವ), ಅಬ್ಬಾಸ್ (೩೧ವ), ಸೈಯದ್(೨೧ವ)ರವರು ಪುತ್ತೂರು ಧನ್ವಂತರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬಲ್ನಾಡು ನಿವಾಸಿ ದಿನೇಶ್ (೩೦ವ)ರವರು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಘಟನೆ ವಿವರ:
ಮನ್ಸೂರು, ಮುಸ್ತಾಪ, ಅಬ್ಬಾಸ್, ಸೈಯದ್ ಪುತ್ತೂರು ಧ್ವನಂತರಿ ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಜು.೧೩ರಂದು ರಾತ್ರಿ ಸೈಯದ್ ಮತ್ತು ಸವಾದ್ ಅವರು ಮನೆಯ ಹತ್ತಿರದ ಸುಲ್ತಾನ್ ಸ್ಟೋರ್ಗೆ ಬರುತ್ತಿದ್ದ ವೇಳೆ ಕುಟ್ಟಿ ಗಣೇಶ್ ಎಂಬವರು ಸವಾದ್ಗೆ ಕೋಳಿ ಬಾಲ್ನಿಂದ ತಿವಿದಿದ್ದಾರೆ. ಇದೇ ವೇಳೆ ಸೈಯದ್ ಅವರಿಗೆ ದಿನೇಶ್ ಎಂಬವರು ಹಲ್ಲೆ ನಡೆಸಿದ್ದಾರೆ. ಗಲಾಟೆಯನ್ನು ಬಿಡಿಸಲು ಬಂದ ಅಬ್ಬಾಸ್ ಎಂಬವರಿಗೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಅದೇ ದಾರಿಯಾಗಿ ಹೋಗುತ್ತಿದ್ದ ಮನ್ಸೂರ್ ಮತ್ತು ನಾನು ವಿಚಾರಿಸಲು ಹೋದಾಗ ನಮಗಿಬ್ಬರಿಗೂ ಹಲ್ಲೆ ನಡೆಸಿದ್ದಾರೆ. ಕುಟ್ಟಿಬಾಲ, ಯಕ್ಷಿತ್, ಪಟ್ಟೆ ಬಾಲ, ವಿಜಿತ್, ಮ್ಯಾಕ್ಸಿ, ಮನೀಶ್, ಭರತ್,ರೂಪೇಶ್ ಸೇರಿ ಸುಮಾರು ೨೫ಕ್ಕೂ ಅಧಿಕ ಮಂದಿ ನಮಗೆ ಹಲ್ಲೆ ನಡೆಸಿದ್ದಾರೆ ಎಂದು ಮುಸ್ತಾಫ್ ಅವರು ಆರೋಪಿಸಿದ್ದಾರೆ.
ಪುತ್ತೂರು ಆದರ್ಶ ಅಸ್ಪತ್ರೆಯಲ್ಲಿ ದಾಖಲಾಗಿರುವ ಬಲ್ನಾಡು ನಿವಾಸಿ ದಿದೇಶ್ ಅವರು ನಾನು ಜು.೧೨ರಂದು ಬಲ್ನಾಡು ಆಟದ ಮೈದಾನದಲ್ಲಿ ನಿಂತಿದ್ದ ವೇಳೆ ಕ್ರಿಕೆಟ್ ಆಡುತ್ತಿದ್ದ ಸೈದು ಬಲ್ನಾಡು ಅವರಿಗೆ ನನಗೆ ಮಾತಿಗೆ ಮಾತು ಬೆಳೆದಿದ್ದು, ಅದರೆ ಅದು ಅಲ್ಲಿಯೇ ರಾಜಿಯಲ್ಲಿ ಇತ್ಯರ್ಥಗೊಂಡಿತ್ತು. ಜು.೧೩ರಂದು ನಾನು ಸುಲ್ತಾನ್ ಸೆಂಟರ್ಗೆ ಹೋಗಿದ್ದ ವೇಳೆ ಜಾಬೀರ್ ಅವರು ಯೋಗೀಶ್ ಎಂಬವರಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ ವಿಕೇಟ್, ರಾಡ್ಗಳನ್ನು ಹಿಡಿದು ಕೊಂಡು ಬಂದ ಸುಮಾರು ೩೦ಕ್ಕೂ ಅಧಿಕ ಮಂದಿ ಏಕಾ ಏಕಿ ನನಗೆ ಮತ್ತು ಅಲ್ಲಿದ್ದ ಯೋಗಿಶ್ಗೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.