ಆಲಂಕಾರು: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ೨೦೧೯-೨೦ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಆಲಂಕಾರು ದುರ್ಗಾಂಬಾ ಪ.ಪೂ.ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಶೇ.೧೦೦ ಹಾಗೂ ಕಲಾ ವಿಭಾಗದಲ್ಲಿ ಶೇ.೮೯ ತೇರ್ಗಡೆ ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದ ಓರ್ವ ವಿದ್ಯಾರ್ಥಿನಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ೩೩ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.೧೦೦ ಫಲಿತಾಂಶ ಲಭಿಸಿದೆ. ೧ ಡಿಸ್ಟಿಂಕ್ಷನ್, ೨೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೭ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ದಿಶಾ ಎ.ಪಿ., ೫೧೮ ಅಂಕ ಪಡೆದುಕೊಂಡು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದಾರೆ. ಈಕೆ ಆಲಂಕಾರು ಗ್ರಾಮದ ಪಜ್ಜಡ್ಕ ನಿವಾಸಿ ಆನಂದ ಗೌಡ ಹಾಗೂ ಭಾರತಿ ದಂಪತಿಯ ಪುತ್ರಿ. ಶ್ರೀ ರಕ್ಷಾ ೪೯೫, ಅಖಿಲೇಶ್ ೪೮೭ ಅಂಕ ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೮ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.೮೯ ಫಲಿತಾಂಶ ಲಭಿಸಿದೆ. ಇಬ್ಬರು ಪ್ರಥಮ ಶ್ರೇಣಿಯಲ್ಲಿ ೪ ವಿದ್ಯಾರ್ಥಿಗಳು ದ್ವಿತೀಯ ಹಾಗೂ ಇಬ್ಬರು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಪ್ರೀತಾ 478, ಅನೂಷಾ 477, ವಿಶಾಲ ಡಿ.ಎಸ್.,433 ಅಂಕ ಪಡೆದುಕೊಂಡಿದ್ದಾರೆ.