ಪುತ್ತೂರು: ೨೦೨೦ ರ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಫಲಿತಾಂಶ ಪ್ರಕಟಗೊಂಡಿದ್ದು,ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜು ಶೇ. ೯೫ ಫಲಿತಾಂಶವನ್ನು ಪಡೆದಿದೆ.
ವಿಜ್ಞಾನ ವಿಭಾಗದಲ್ಲಿ ೫೮೯ ಅಂಕಗಳನ್ನು ಗಳಿಸುವುದರ ಮೂಲಕ ತನ್ಮಯಿ ಎ. ಇವರು ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.ಚೈತ್ರಾ ಬಿ. ೫೭೯ ,ಜಯಪ್ರಭ ೫೬೫,ವಿಂದ್ಯಾಶ್ರೀ ಪಿ. ೫೬೨,ರಕ್ಷಿತಾ ಡಿ. ೫೬೨, ಅನನ್ಯ ಬಿ. ೫೩೩, ಗೌತಮಿ ೫೩೧, ಅನನ್ಯ ಶಾರದ ೫೩೦ , ಶ್ರೀದೇವಿ ೫೨೬,ಲಿಖಿತ್ ೫೨೬, ರಂಜಿತಾ ಜಿ. ೫೨೫,ಸ್ವಸ್ತಿಕ್ ಕೆ ಎಸ್ ೫೨೦,ಗೀತಾ ಕೆ.ಎಮ್. ೫೧೨, ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶೇ.೯೭.೩೭ ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ೫೨೪ ಅಂಕಗಳನ್ನು ಗಳಿಸುವುದರ ಮೂಲಕ ಕವನರಾಣಿ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.ಕಾರ್ತಿಕ್ ೫೧೬,ಸಹನಾ ಬಿ.ವಿ. ೫೧೨,ಶ್ರೀಚರಣ ವೈ. ೫೧೧,ಸಿಂಚನಾ ೫೧೧ ಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೇ.೯೨.೪ ಫಲಿತಾಂಶ ಲಭಿಸಿದೆ.
ದ್ವಿತೀಯ ಪಿಯುಸಿಯ ಒಟ್ಟು ೧೮ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಕಾಲೇಜಿಗೆ ಶೇ. ೯೫ ಫಲಿತಾಂಶ ಲಭಿಸಿರುತ್ತದೆ.ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.