HomePage_Banner
HomePage_Banner
HomePage_Banner
HomePage_Banner

ಪ್ರಗತಿ ಸ್ಟಡಿ ಸೆಂಟರ್‌ಗೆ ದ್ವಿತೀಯ ಪಿಯುಸಿಯಲ್ಲಿ 92% ದಾಖಲೆಯ ಫಲಿತಾಂಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇದು ಅನುತ್ತೀರ್ಣಗೊಂಡು ನಮ್ಮ ಬಳಿ ಬಂದು ಉತ್ತೀರ್ಣಗೊಂಡ ವಿದ್ಯಾರ್ಥಿಗಳ ಫಲಿತಾಂಶ- ಪಿ.ವಿ ಗೋಕುಲ್‌ನಾಥ್ ಸ್ಥಾಪಕಾಧ್ಯಕ್ಷರು, ಪ್ರಗತಿ ಸ್ಟಡಿ ಸೆಂಟರ್, ಪುತ್ತೂರು

ಪುತ್ತೂರು: ತನ್ನ ವಿವಿಧ ಮಾದರಿಯ ವೈಶಿಷ್ಟ್ಯಗಳ ಮೂಲಕ ಛಾಪನ್ನು ಮೂಡಿಸಿ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ) ಇದರ ಅಧೀನಕ್ಕೆ ಒಳಪಟ್ಟಿರುವ ಧರ್ಮಸ್ಥಳ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಹಾಗೂ ಪ್ರಗತಿ ರೆಸಿಡೆನ್ಸಿಯಲ್ ಸ್ಟಡಿ ಸೆಂಟರ್ ಪೋಳ್ಯ, ಕಬಕ ಕಾಲೇಜಿನ ೨೦೧೯-೨೦ ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆಗೊಂಡಿದ್ದು, ದಾಖಲೆಯ ಫಲಿತಾಂಶ ಹೊರಹೊಮ್ಮಿದೆ.

ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣವಾಗಿ ಭರವಸೆಯನ್ನು ತುಂಬುತ್ತಾ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟು, ಪ್ರತಿಭೆ ಮತ್ತು ಸಾಮರ್ಥ್ಯವನ್ನು ಅರಿತು ಮುನ್ನಡೆಸಿ ಇದೀಗ ಅತ್ಯುತ್ತಮ ಫಲಿತಾಂಶವನ್ನು ತನ್ನದಾಗಿಸಿಕೊಂಡಿದೆ.

೨೦೧೯-೨೦ನೇ ಶೈಕ್ಷಣಿಕ ವರ್ಷದಲ್ಲಿ ಕಲಾ ವಿಭಾಗದಲ್ಲಿ ಪೌರ್ಣಿಕಾ ಜೆ ನಾಯ್ಕ್ ೫೪೬ ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯೊಂದಿಗೆ ತೇರ್ಗಡೆಹೊಂದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಕು. ಇಂದುಶ್ರೀ ೫೦೭, ಗಗನ್ ಬಿ.ಜಿ ೫೦೪, ಹಾಗೂ ಮೇಘನಾ ಪಾಂಡೆ ೫೦೨ ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಶೈಕ್ಷಣಿಕ ವರ್ಷ ೨೦೧೯-೨೦ನೇ ಸಾಲಿನ ೯೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೫೪ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೨೦ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಮತ್ತು ೧೬ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಂದಿದ್ದು, ಪ್ರಥಮ ಪಿಯುಸಿ ಅನುತ್ತೀರ್ಣಗೊಂಡು ನಮ್ಮ ಬಳಿ ಖಾಸಗಿ ಅಭ್ಯರ್ಥಿಯಾಗಿ ದ್ವಿತೀಯ ಪಿಯುಸಿ ವಿದ್ಯಾರ್ಜನೆಗೊಂಡು ಉತ್ತಮ ಫಲಿತಾಂಶವನ್ನು ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಪ್ರಗತಿ ಸಂಸ್ಥೆಯ ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.