HomePage_Banner
HomePage_Banner
HomePage_Banner
HomePage_Banner

ದ್ವಿತೀಯ ಪಿಯುಸಿ ಪರೀಕ್ಷೆ: ವಿವೇಕಾನಂದ ಪದವಿ ಪೂರ್ವ ಕಾಲೇಜಿಗೆ ಶೇ.96 ಫಲಿತಾಂಶ | ವಿಜ್ಞಾನ ವಿಭಾಗದಲ್ಲಿ 591 ಅಂಕಗಳನ್ನು ಗಳಿಸಿದ ವಿಜಿತ್ ಕೃಷ್ಣ ಕಾಲೇಜಿಗೆ ಪ್ರಥಮ ಸ್ಥಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು :೨೦೧೯-೨೦ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ಶೇ ೯೬ ಫಲಿತಾಂಶವನ್ನು ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ೫೯೧ ಅಂಕಗಳನ್ನು ಗಳಿಸುವುದರ ಮೂಲಕ ವಿಜಿತ್ ಕೃಷ್ಣ ಇವರು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇವರು ಭೌತ ಶಾಸ್ತ್ರ ದಲ್ಲಿ ೧೦೦, ರಸಾಯನಶಾಸ್ತ್ರದಲ್ಲಿ ೧೦೦, ಗಣಿತಶಾಸ್ತ್ರದಲ್ಲಿ ೯೮, ಜೀವಶಾಸ್ತ್ರದಲ್ಲಿ ೧೦೦, ಇಂಗ್ಲಿಷ್ ೯೪ ಮತ್ತು ಸಂಸ್ಕೃತದಲ್ಲಿ ೯೯ ಅಂಕಗಳನ್ನು ಪಡೆಯುವುದರ ಮೂಲಕ ಒಟ್ಟು ೫೯೧ ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ರಾಮಚಂದ್ರ ರಾವ್ ಮತ್ತು ಗೀತಾ ರಾವ್ ದಂಪತಿಗಳ ಪುತ್ರ. ಹೆತ್ತವರ ಮತ್ತು ಉಪನ್ಯಾಸಕರ ನಿರಂತರವಾದ ಉತ್ಸಾಹಭರಿತ ಮಾರ್ಗದರ್ಶನದಿಂದ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಯಿತು ಎಂದು ವಿಜಿತ್ ಕೃಷ್ಣ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ವಿಜ್ಞಾನ ವಿಭಾಗದಲ್ಲಿ ೫೯೦ ಅಂಕಗಳನ್ನು ಗಳಿಸುವುದರ ಮೂಲಕ ಅಂಕಿತಾ ಸಿ. ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರು ಭೌತಶಾಸ್ತ್ರದಲ್ಲಿ ೧೦೦, ರಸಾಯನಶಾಸ್ತ್ರ ದಲ್ಲಿ ೯೮, ಗಣಿತಶಾಸ್ತ್ರದಲ್ಲಿ ೧೦೦, ಗಣಕಶಾಸ್ತ್ರದಲ್ಲಿ ೧೦೦, ಇಂಗ್ಲಿಷ್ ೯೨ ಮತ್ತು ಸಂಸ್ಕೃತದಲ್ಲಿ ೧೦೦ ಅಂಕಗಳನ್ನು ಪಡೆಯುವುದರ ಮೂಲಕ ಒಟ್ಟು ೫೯೦ ಅಂಕಗಳನ್ನು ಗಳಿಸಿರುತ್ತಾರೆ. ಇವರು ಸುಳ್ಯ ತಾಲೂಕಿನ ಪಂಜ ಗ್ರಾಮದ ಗಂಗಾಧರ ಶಾಸ್ತ್ರಿ ಸಿ ಮತ್ತು ಸಾವಿತ್ರಿ ಇವರ ಸುಪುತ್ರಿ. ಕಾಲೇಜಿನಲ್ಲಿ ಶಿಕ್ಷಣಕ್ಕೆ ಎಲ್ಲಾ ರೀತಿಯ ಸಹಕಾರ ಮತ್ತು ಪ್ರೋತ್ಸಾಹ ಸದಾ ಸಿಗುತ್ತಿತ್ತು. ದೈನಂದಿನ ಪಾಠವನ್ನು ಅಂದಂದೇ ಮನನ ಮಾಡಿದ ಕಾರಣ ಹಾಗೂ ಹೆತ್ತವರಿಂದ ಕಲಿಕೆಗಾಗಿ ದೊರೆತ ಹುರಿದುಂಬಿಸುವ ಮಾತು ಹಾಗೂ ಸಮಯಪ್ರಜ್ಞೆಯಿಂದ ಈ ಸಾಧನೆ ಗೈಯ್ಯಲು ಸಾಧ್ಯವಾಯಿತು ಎಂದು ಅಂಕಿತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಾಣಿಜ್ಯ ವಿಭಾಗದಲ್ಲಿ ವರಲಕ್ಷ್ಮಿ ಪಿ ಎಸ್ ೫೯೦ ಅಂಕಗಳನ್ನು ಪಡೆಯುವುದರ ಮೂಲಕ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಕನ್ಯಾನದ ಪಂಜಾಜೆ ಶ್ಯಾಂಪ್ರಸಾದ್ ಮತ್ತು ಜ್ಯೋತಿ ಲಕ್ಷ್ಮಿ ಇವರ ಪುತ್ರಿ. ಕಾಲೇಜಿನ ವಸತಿನಿಲಯದಲ್ಲಿ ಇದ್ದುಕೊಂಡು ಅಧ್ಯಯನ ಮಾಡಿರುವ ಕಾರಣ ವಿಪುಲವಾದ ಸಮಯಾವಕಾಶ ದೊರಕಿತು ಅಲ್ಲದೆ ಹೆತ್ತವರು ಅಂಕಗಳಿಗಾಗಿ ಯಾವುದೇ ಒತ್ತಡ ಹೇರದೆ ಸದಾ ಮಾರ್ಗದರ್ಶನದಿಂದ ಉತ್ತಮ ಅಂಕಗಳು ಲಭಿಸಿದವು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಾಣಿಜ್ಯ ವಿಭಾಗದಲ್ಲಿ ೫೮೪ ಅಂಕಗಳನ್ನು ಪಡೆಯುವುದರ ಮೂಲಕ ಸಹನ ಎ ಸಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಇವರು ಸುಳ್ಯ ತಾಲೂಕಿನ ಏನೆಕಲ್ಲು ಗ್ರಾಮದ ಅಚ್ಯುತ ಗೌಡ ಮತ್ತು ಚಂದ್ರಾವತಿ ದಂಪತಿಗಳ ಪುತ್ರಿ.

ಕಲಾ ವಿಭಾಗದಲ್ಲಿ ೫೭೪ ಅಂಕಗಳನ್ನು ಪಡೆಯುವುದರ ಮೂಲಕ ರಾಯಚೂರಿನ ಮಾನ್ವಿಯ ನಾರಾಯಣ ಮತ್ತು ಹನುಮಂತಿ ಇವರ ಪುತ್ರ ವೀರೇಶ ಕಾಲೇಜಿಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಹಾಗೆಯೇ ೫೭೩ ಅಂಕಗಳನ್ನು ಪಡೆಯುವುದರ ಮೂಲಕ ಕೆದಿಲದ ಸತ್ಯನಾರಾಯಣ ಬಿ ಮತ್ತು ವಿನಯಾ ಇವರ ಪುತ್ರಿ ನಯನಾ ಇವರು ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ವಿಜ್ಞಾನ ವಿಭಾಗದ ಅಕ್ಷಯ್ ಪಾಂಗಳ್ ಇವರು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ಈ ಎಲ್ಲಾ ವಿಷಯಗಳಲ್ಲಿ ೧೦೦ ಅಂಕಗಳನ್ನು ಗಳಿಸಿದ್ದಾರೆ. ಇವರು ಪುತ್ತೂರಿನ ದಿನೇಶ್ ಪಾಂಗಳ್ ಮತ್ತು ಸಂಧ್ಯಾ ದಂಪತಿಗಳ ಪುತ್ರ.

ಪರೀಕ್ಷೆಗೆ ಒಟ್ಟು ೮೨೪ ವಿದ್ಯಾರ್ಥಿಗಳು ಹಾಜರಾಗಿದ್ದು ೨೨೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಮತ್ತು ೪೬೦ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ ೯೬.೫, ವಾಣಿಜ್ಯ ವಿಭಾಗದಲ್ಲಿ ಶೇ ೯೬.೪ ಮತ್ತು ಕಲಾ ವಿಭಾಗದಲ್ಲಿ ಶೇ ೯೫ ಫಲಿತಾಂಶ ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.