ಪುತ್ತೂರು: ಸಾರ್ವಜನಿಕ ವಲಯದಲ್ಲಿ ಚಿರಪರಿಚಿತವಾಗಿದ್ದು, ಸುಮಾರು 78 ವರ್ಷದ ಇತಿಹಾಸ ಇರುವ ಬೊಳುವಾರಿನ ಬಾಬರಾಯ (ವುಡ್ಸೈಡ್) ಹೊಟೇಲ್ ಉದ್ಯಮಿ ವಸಂತ ಮಾಧವ ಪ್ರಭು(81ವ)ರವರು ಜು.14ರಂದು ನಿಧನರಾದರು.
ಬೊಳುವಾರಿನಲ್ಲಿ ವುಡ್ಸೈಡ್ ಹೊಟೇಲ್ ಆರಂಭಿಸಿದ್ದ ದಿ.ಬಾಬರಾಯ ಅವರ ಪುತ್ರರಾಗಿದ್ದ ವಸಂತ ಮಾಧವ ಪ್ರಭು ಅವರು ತಂದೆಯ ಹೊಟೇಲ್ನ್ನು ನಡೆಸಿಕೊಂಡು ಮುಂದುವರಿದ್ದು, ಬಾಬರಾಯರ ಹೊಟೇಲ್ ಎಂದೇ ಖ್ಯಾತಿ ಪಡೆದಿತ್ತು. ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಹಿರಿಯ ಸದಸ್ಯರಾಗಿರುವ ವಸಂತ ಮಾಧವ ಪ್ರಭು ಅವರು ಕಳೆದ ಒಂದು ತಿಂಗಳಿನಿಂದ ವಯೋಸಹಜವಾಗಿ ಪಡೀಲ್ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು ಜು.14ರಂದು ಅವರು ನಿಧನರಾಗಿದ್ದಾರೆ. ಮೃತರು ಪತ್ನಿ ಶಾಂತಾ ಪ್ರಭು, ಪುತ್ರರಾದ ಶಿವಾನಂದ ಪ್ರಭು, ದಾಮೋದರ್ ಪ್ರಭು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.