ನಿಡ್ಪಳ್ಳಿ; ಇತ್ತೀಚೆಗೆ ದೈವಾಧೀನರಾದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳಿಗೆ ಶ್ರದ್ದಾಂಜಲಿ ಸಭೆ ನಿಡ್ಪಳ್ಳಿ ಗುತ್ತು ಮನೆಯಲ್ಲಿ ಜು.15 ರಂದು ನಡೆಯಿತು. ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ಅರಿಗ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾಗೇಶ ಗೌಡ ಮೃತರ ಗುಣಗಾನ ಮಾಡಿ ನಂತರ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.



ನಿಡ್ಪಳ್ಳಿ ಗುತ್ತು ಎನ್. ಪ್ರವೀಣ ಅರಿಗ, ಹಿರಿಯರಾದ ಮುಂಡೂರು ವಾಸುದೇವ ಭಟ್ ಹಾಗೂ ಗ್ರಾಮಸ್ಥರು ಪಾಲ್ಗೊಂಡರು.