ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದೇರಿ ಒಕ್ಕೂಟದ ಆಶ್ರಯದಲ್ಲಿ ನೆಲ್ಯಾಡಿ ಕೊಪ್ಪ ಎಂಬಲ್ಲಿ ಹೊಸದಾಗಿ ರಚನೆಗೊಂಡ ‘ಸಮೃದ್ಧಿ ಪ್ರಗತಿ ಬಂಧು ಸ್ವಸಹಾಯ ಸಂಘದ ಉದ್ಘಾಟನೆಯು ಕೊಪ್ಪ ಶಂಕರ ಕುಂಬಾರರವರ ಮನೆಯಲ್ಲಿ ನಡೆಯಿತು.
ಊರಿನ ಹಿರಿಯರೂ, ಒಕ್ಕೂಟದ ಪದಾಧಿಕಾರಿಯೂ ಆದ ವೆಂಕಪ್ಪ ಕುಂಬಾರ ಪೂಜಾರಿಮನೆಯವರು ಉದ್ಘಾಟಿಸಿದರು. ಮಾದೇರಿ ಒಕ್ಕೂಟದ ಅಧ್ಯಕ್ಷೆ ಶ್ರೀಲತಾರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮೃದ್ಧಿ ಪ್ರಗತಿ ಬಂಧು ಸ್ವಸಹಾಯ ಸಂಘದ ಅಧ್ಯಕ್ಷ ಪ್ರಶಾಂತ್ ಕುಮಾರ್ ಎಸ್.ಎ, ಕಾರ್ಯದರ್ಶಿ ರಾಬರ್ಟ್ ಜೊನ್, ಕೋಶಾಧಿಕಾರಿ ಅನೂಪ್, ಸದಸ್ಯರುಗಳಾದ ಸುಭಾಷ್ ಕೊಪ್ಪ, ರಿಧೀಶ್, ಶ್ಯಾಂಡೋರವರು ಉಪಸ್ಥಿತರಿದ್ದರು. ಮಾದೇರಿ ಒಕ್ಕೂಟದ ಸೇವಾ ಪ್ರತಿನಿಧಿ ನಮಿತಾ ಎಸ್.ಶೆಟ್ಟಿಯವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.