ವಿಟ್ಲ: ಇಲ್ಲಿನ ವಿಠಲ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮರ್ಯಮತುಲ್ ಶಮ್ಲಾ 577 ಅಂಕ ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಪಿಸಿಎಂಬಿ ಯಲ್ಲಿ 392 ಅಂಕ ಪಡೆದು 98% ಫಲಿತಾಂಶ ದಾಖಲಿಸಿದ್ದಾರೆ.
ಫಿಸಿಕ್ಸ್ ಮತ್ತು ಮ್ಯಾಥಮೆಟಿಕ್ಸ್ ನಲ್ಲಿ ತಲಾ 100 ಅಂಕ ಪಡೆದಿದ್ದಾರೆ. ಇಂಗ್ಲಿಷ್ ನಲ್ಲಿ 95, ಹಿಂದಿಯಲ್ಲಿ 90, ಕೆಮಿಸ್ಟ್ರಿಯಲ್ಲಿ 96, ಬಯೋಲಜಿಯಲ್ಲಿ 96 ಅಂಕ ಪಡೆದಿದ್ದಾರೆ. ಇವರು ವಿಟ್ಲ ಸೆರಂತಿಮಠ ನಿವಾಸಿ ಉಮರ್ ದಾರಿಮಿ ಪಟ್ಟೋರಿ ಹಾಗೂ ನೆಬಿಸತುಲ್ ಮುನೀರಾ ರವರ ಹಿರಿಯ ಮಗಳಾಗಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಮರ್ಯಮತುಲ್ ಶಮ್ಲಾ 617 ಅಂಕ ದಾಖಲಿಸಿದ್ದರು. ಮುಂದೆ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಮಾಡುವ ಅಭಿಲಾಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.