ಪುತ್ತೂರು: ಕೋವಿಡ್-19 ಸಾಂಕ್ರಾಮಿಕರೋಗದ ವ್ಯಾಪಕ ಹರಡುವಿಕೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಜುಲೈ 16ರಿಂದ ಒಂದು ವಾರ ಕಾಲ ಲಾಕ್ಡೌನ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ತೀವ್ರತೆಯನ್ನರಿತು, ಜಿಲ್ಲಾಡಳಿತದ ಆದೇಶದ ಅನುಸಾರವಾಗಿ ಕ್ಯಾಂಪ್ಕೊ ಸಂಸ್ಥೆಯು ಜುಲೈ 16ರಿಂದ ವಾರದ ಕಾಲ ಮಂಗಳೂರಿನಲ್ಲಿರುವ ಕೇಂದ್ರ ಕಚೇರಿ ಮತ್ತು ಜಿಲ್ಲೆಯಾದ್ಯಂತವಿರುವ ಶಾಖೆಗಳಲ್ಲಿನ ವ್ಯವಹಾರಗಳನ್ನು ಸ್ಥಗಿತಗೊಳಿಸಲಿದೆ.
ದಕ್ಷಿಣ ಕನ್ನಡ, ಮತ್ತು ಬೆಂಗಳೂರಿನಲ್ಲಿರುವ ಶಾಖೆಗಳಲ್ಲಿನ ವ್ಯವಹಾರಗಳು ಜುಲೈ 16ರಿಂದ 1 ವಾರದ ಕಾಲ, ಧಾರವಾಡಜಿಲ್ಲೆ (ಹುಬ್ಬಳ್ಳಿ ಶಾಖೆ ಜುಲೈ 15ರಿಂದ 24ರ ವರೆಗೆ) ಸ್ಥಗಿತಗೊಳ್ಳಲಿದೆ. ಉಳಿದಂತೆ ಕ್ಯಾಂಪ್ಕೊದ ಶಿವಮೊಗ್ಗ, ಶಿರಸಿ ವಲಯಗಳು, ಉಡುಪಿ ಜಿಲ್ಲೆ ಮತ್ತು ಕೇರಳದ ಎಲ್ಲಶಾಖೆಗಳು ಎಂದಿನಂತೆ ತೆರೆದು ಕಾರ್ಯಾಚರಿಸಲಿವೆ. ಕ್ಯಾಂಪ್ಕೊದ ಸದಸ್ಯ ಬೆಳೆಗಾರರು ಮತ್ತು ಸಂಸ್ಥೆಯೊಂದಿಗೆ ವ್ಯವಹರಿಸುವ ಸಾರ್ವಜನಿಕರು ಸಹಕರಿಸಬೇಕಾಗಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದಾದ್ಯಂತ ಲಾಕ್ ಡೌನ್ ಪಾಲಿಸುವಂತೆ ಪ್ರದಾನಿ ಒಕ್ಕೊರಲ ಮನವಿ ಮಾಡಿದಾಗ ಪುತ್ತೂರಿನ ಕ್ಯಾಂಪ್ಕೋ ಉದ್ಯೋಗಿಗಳನ್ನು ಬಲವಂತದಿಂದ ಕರೆದು ಉತ್ಪಾದನೆ ನಡೆಸುತ್ತಿದ್ದಾಗ ಪುತ್ತೂರು ತಹಶಿಲ್ದಾರ್ ಸೀಲ್ ಮಾಡಿದ ನೆನಪು ಇನ್ನೂ ಮಾಸಿಲ್ಲ. ಇದೀಗ ಇದರ ಔಚಿತ್ಯವೇನು.