- ಅಧ್ಯಕ್ಷ: ರತ್ನಾಕರ ಭಂಡಾರಿ, ಕಾರ್ಯದರ್ಶಿ: ಮಹಾಲಿಂಗ ಕುಂಬ್ರ,ಕೋಶಾಧಿಕಾರಿ: ಪ್ರವೀಣ್
ಪುತ್ತೂರು: ತಾಲೂಕು ಸವಿತ ಸಮಾಜದ ಕುಂಬ್ರ ವಲಯದ ಸಭೆಯು ಜು.14ರಂದು ತಿಂಗಳಾಡಿ ಆಕಾಶ್ ಹೇರ್ ಡ್ರೆಸ್ಸಸ್ನ ಕೃಷ್ಣ ಭಂಡಾರಿಯವರು ಮನೆಯಲ್ಲಿ ನಡೆಯಿತು. ತಾಲೂಕು ಸವಿತ ಸಮಾಜದ ಗೌರವಧ್ಯಕ್ಷ ಬಾಲಕೃಷ್ಣ ಭಂಡಾರಿ. ಗೌರವ ಸಲಹೆಗಾರ ಕೃಷ್ಣ ಭಂಡಾರಿ ತಿಂಗಳಾಡಿ, ಅಧ್ಯಕ್ಷ ವೆಂಕಟೇಶ್ ಬಲ್ನಾಡ್, ಉಪಾಧ್ಯಕ್ಷ ಜಯಕುಮಾರ್, ಖಜಾಂಜಿ ಪ್ರವೀಣ್ ಭಂಡಾರಿ, ಕಾರ್ಯದರ್ಶಿ ರಾಜೇಶ್, ಬರ್ಬರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಸೇಲ್ವರಾಜ್ ಮುಂತಾದವರು ಉಪಸ್ಧಿತರಿದ್ದರು.
ಇದೇ ಸಂದರ್ಭದಲ್ಲಿ ಕುಂಬ್ರ ವಲಯದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕುಂಬ್ರ ವಲಯದ ಅಧ್ಯಕ್ಷರಾಗಿ ರತ್ನಾಕರ ಭಂಡಾರಿ ಕಲ್ಲಗುಡ್ಡೆ, ಉಪಾಧ್ಯಕ್ಷರಾಗಿ ಜಯಪ್ರಸದ್ ತಿಂಗಳಾಡಿ, ಕಾರ್ಯದರ್ಶಿಯಾಗಿ ಮಹಾಲಿಂಗಂ ಕುಂಬ್ರ, ಉಪ ಕಾರ್ಯದರ್ಶಿಯಾಗಿ ಪ್ರವೀಣ್ ಅಂಕತಡ್ಕ, ಖಜಾಂಜಿಯಾಗಿ ಜಿ.ಕೆ ಪ್ರವೀಣ್ ಪೆರ್ಲಂಪಾಡಿ ಆಯ್ಕೆರವರುಗಳನ್ನು ಆಯ್ಕೆ ಮಾಡಲಾಯಿತು. ಸುಮಾರು 60 ವರ್ಷಗಳಿಂದ ಕ್ಷೌರಿಕ ವೃತ್ತಿ ಮಾಡುತ್ತಿರುವ ಬೊಟ್ಯಾಡಿ ಮಹಾಲಿಂಗ ಭಂಡಾರಿಯವರನ್ನು ಸವಿತಾ ಸಮಾಜದ ವತಿಯಿಂದ ಈ ಸಂದರ್ಭದಲ್ಲಿ ಶಾಲು,ಫಲಪುಷ್ಪ,ಹಾರ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಪ್ರವೀಣ್ ಸ್ವಾಗತಿಸಿದರು. ಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.
