ಸವಣೂರು : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಹಾಜರಾದ 50 ವಿದ್ಯಾರ್ಥಿಗಳ ಪೈಕಿ 39 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಂಸ್ಥೆಗೆ ಶೇ.78 ಫಲಿತಾಂಶ ದಾಖಲಾಗಿದೆ.

ವಾಣಿಜ್ಯ ವಿಭಾಗದ 32 ವಿದ್ಯಾರ್ಥಿಗಳ ಪೈಕಿ 27 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಕಲಾ ವಿಭಾಗದಲ್ಲಿ 13 ವಿದ್ಯಾರ್ಥಿಗಳ ಪೈಕಿ 7 ಮಂದಿ,ವಿಜ್ಞಾನ ವಿಭಾಗದ 5 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದ ಹರ್ಷಿತಾ ಕೆ.ಎಸ್ ೫೬೩ ,ಜನನಿ ಬಿ. ೫೩೩ ,ವಿಜ್ಞಾನ ವಿಭಾಗದ ದೀಕ್ಷಾ ಕೆ ೫೧೭ ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ೧೫ ಮಂದಿ,ಕಲಾ ವಿ`ಗದಲ್ಲಿ ೫ ಮಂದಿ,ವಿಜ್ಞಾನ ವಿಭಾಗದಲ್ಲಿ ೪ ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ,ಪ್ರಾಚಾರ್ಯೆ ಪದ್ಮಾವತಿ ಎನ್.ಪಿ ತಿಳಿಸಿದ್ದಾರೆ.