HomePage_Banner
HomePage_Banner
HomePage_Banner
HomePage_Banner

ಗೇರು ಸಂಶೋಧನಾ ನಿರ್ದೇಶನಾಲಯದ ಹೊಸ ತಳಿ ಹೆಚ್- 130 ಯ ಲೈಸೆನ್ಸ್ ಕೊಡುವಿಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಐ.ಸಿ.ಎ.ಆರ್ – ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಅಭಿವೃಧ್ಧಿಪಡಿಸಿರುವ ಹೊಸ ಗೇರು ತಳಿ ಹೆಚ್-೧೩೦ ಯನ್ನು ಉತ್ಪಾದನೆ ಮಾಡಿ ರೈತರಿಗೆ ತಲುಪಿಸುವ ಸಲುವಾಗಿ ತಮಿಳುನಾಡಿನ ಅಣ್ಣೈ ವೆಲ್ಲಾಂಕಣಿ ನರ್ಸರಿಯ ಜೊತೆಗೆ ಲೈಸೆನ್ಸಿಂಗ್ ಒಪ್ಪಂದವನ್ನು ೧೫.೦೭.೨೦೨೦ರಂದು ಮಾಡಲಾಯಿತು. ಐ.ಸಿ.ಎ.ಆರ್ – ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಇದರ ನಿರ್ದೇಶಕರಾದ ಡಾ. ಎಂ. ಜಿ. ನಾಯಕ್ ಮತ್ತು ನರ್ಸರಿ ಮಾಲೀಕರಾದ ಡಿ. ಕ್ಸೇವಿಯರ್ ಒಪ್ಪಂದಕ್ಕೆ ಸಹಿ ಹಾಕಿದರು.

 

 

 

ಈ ಹೆಚ್-೧೩೦ ತಳಿಯು ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಕಾಯ್ದೆ (PPV&FRA)-೨೦೦೧ರ ಅಡಿಯಲ್ಲಿ ಹಕ್ಕುಸ್ವಾಮ್ಯವನ್ನು ಪಡೆದಿದ್ದು ಕಾನೂನಾತ್ಮಕ ರಕ್ಷಣೆಯನ್ನು ಪಡೆದಿದೆ. ಆದ್ದರಿಂದ ಐ.ಸಿ.ಎ.ಆರ್ – ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರಿನ ಜೊತೆಗೆ ಒಪ್ಪಂದ ಮಾಡಿಕೊಂಡು ಈ ತಳಿಯ ಗಿಡಗಳನ್ನು ಉತ್ಪಾದನೆ ಮಾಡಲು ನಿರ್ದೇಶನಾಲಯದಿಂದ ಅನುಮತಿ ಪಡೆದ ನರ್ಸರಿಗಳು ಮಾತ್ರ ಎಚ್-೧೩೦ ತಳಿಯ ಗಿಡಗಳನ್ನು ಮಾರುವ ಹಕ್ಕನ್ನು ಪಡೆದುಕೊಂಡಿರುತ್ತಾರೆ. ಉಳಿದ ಯಾವುದೇ ನರ್ಸರಿಗಳು ಇದನ್ನು ಒಪ್ಪಂದ ಮಾಡಿಕೊಳ್ಳದೆ ಮಾಡಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.

೨೦೦೧ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಸ್ಯ ತಳಿ ಸಂರಕ್ಷಣೆ ಹಾಗೂ ರೈತ ತಳಿ ಹಕ್ಕುಗಳ ಕಾಯಿದೆ ಪ್ರಕಾರ ಯಾವುದೇ ಹೊಸ ಸಸ್ಯತಳಿಯನ್ನು ಅಭಿವೃದ್ಧಿಪಡಿಸಿ ಅದನ್ನು ಸಸ್ಯ ತಳಿ ಸಂರಕ್ಷಣೆ ಹಾಗೂ ರೈತ ತಳಿ ಹಕ್ಕುಗಳ ಪ್ರಾಧಿಕಾರದಲ್ಲಿ ನೊಂದಣಿ ಮಾಡಿದಲ್ಲಿ ಅದರ ಹಕ್ಕುಸ್ವಾಮ್ಯ ಆ ತಳಿಯನ್ನು ಅಭಿವೃದ್ಧಿಪಡಿಸಿದವರದ್ದೇ ಆಗಿರುತ್ತದೆ. ಇತರರು ಅದನ್ನು ಅನುಮತಿ ಪಡೆಯದೆ ದುರುಪಯೋಗ ಮಾಡುವಂತಿಲ್ಲ ಅಥವಾ ಅದರಿಂದ ಲಾಭ ಪಡೆಯುವಂತಿಲ್ಲ. ಒಂದು ವೇಳೇ ಆ ರೀತಿಯ ದುರುಪಯೋಗ ಕಂಡುಬಂದರೆ ಅದು ಕಾನೂನಿನ ಪ್ರಕಾರ ಅಪರಾಧ. ಆದರೆ ಈಗಾಗಲೇ ಕೆಲವು ನರ್ಸರಿಯವರು ಈ ತಳಿಯ ಸಸಿಗಳನ್ನು ಉತ್ಪಾದಿಸಿ ಬೇರೆ ಹೆಸರಿನಲ್ಲಿ, ಬೇರೆಯವರಿಂದ ಕಸಿಕಡ್ಡಿಗಳನ್ನು ಪಡೆದು ಉತ್ಪಾದಿಸಿ ಹಂಚಿರುವುದು ಸಂಸ್ಥೆಯ ಗಮನಕ್ಕೆ ಬಂದಿರುತ್ತದೆ. ಇದು ಮುಂದುವರಿಯಬಾರದು ಹಾಗೂ ಮುಂದುವರೆದರೆ ಸಂಬಂಧಪಟ್ಟವರು ತೊಂದರೆ ಅನುಭವಿಸುತ್ತಾರೆ. ಅದಕ್ಕೆ ಸಂಸ್ಥೆ ಜವಾಬ್ದಾರಿಯಾಗಿರುವುದಿಲ್ಲ. ಎಂದು ಈ ಸಂದರ್ಭದಲ್ಲಿ ನಿರ್ದೇಶಕರು ವಿವರಿಸಿದರು.

ಸಂಸ್ಥೆ ಯಾವುದೇ ತಳಿಯ ಅಭಿವೃದ್ಧಿಯನ್ನು ಬರೀ ಖಾಸಗೀ ನರ್ಸರಿಗಳ ಉಪಯೋಗಕ್ಕಾಗಿ ಮಾಡುತ್ತಿಲ್ಲ. ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೆಲಸ ಮಾಡುತ್ತಿದೆ. ಇದರ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ಸಂಸ್ಥೆಯ ಆಶಯ ಎಂದರು. ಗೇರು ಕೃಷಿಕರು ಹೆಚ್-೧೩೦ ತಳಿಯ ಕಸಿ ಗಿಡಗಳನ್ನು ಸಂಸ್ಥೆಯಿಂದ ಅಧಿಕೃತ ಮಾನ್ಯತೆ ಪಡೆದಿರುವ ನರ್ಸರಿಗಳಲ್ಲಿ ಮಾತ್ರ ಪಡೆಯುವಂತೆ ಮನವಿ ಮಾಡಿದರು. ಹೆಚ್-೧೩೦ ತಳಿಯ ಕಸಿ ಗಿಡಗಳನ್ನು ಉತ್ಪಾದಿಸುವ ಅನುಮತಿಗಾಗಿ ಆಸಕ್ತ ನರ್ಸರಿಗಳು ನಿರ್ದೇಶಕರು, ಐ.ಸಿ.ಎ.ಆರ್-ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು, ೫೭೪೨೦೨ (ಫೋನ್: ೦೮೨೫೧ ೨೩೦೯೦೨ [email protected]) ಇವರನ್ನು ಸಂಪರ್ಕಿಸಬಹುದು. ಈ ಸಂದರ್ಭದಲ್ಲಿ ಸಂಸ್ಥೆಯ ವಿಜ್ಞಾನಿಗಳಾದ ಡಾ. ಮೋಹನ್ ಜಿ.ಎಸ್., ಡಾ. ಶಂಸುದ್ದೀನ್ ಮಂಗಳಶ್ಯೇರಿ, ಡಾ. ಸಿದ್ದಣ್ಣ ಸವದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.