ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಡ್ನೂರು ಸವಿತಾ ಈಶ್ವರ ಹೆಗ್ಡೆಯವರ ಮನೆಯಲ್ಲಿ ಕೊರೋನಾ ಮಾಹಿತಿ, ಸ್ವಚ್ಛತೆ, ಸೋಲಾರ್ ಮನೆ ನಿರ್ಮಾಣದ ಬಗ್ಗೆ ಅಭಿಪ್ರಾಯ ಮೂಡಿಸಲಾಯಿತು.
ಜನರಕ್ಷಣಾ ಗ್ರಾಮ ಪಂಚಾಯತ್, ಸೆಲ್ಕೊ ಫೌಂಡೇಷನ್, ಮಾದರಿ ಗ್ರಾಮ ವಿಕಾಸ ಕೇಂದ್ರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಕೊರೋನಾ ತಡೆ, ಸ್ವಚ್ಛತೆ ಬಡ ಕುಟುಂಬಗಳಿಗೆ ಜೀವನೋಪಾಯಕ್ಕೆ ವರದಾನವಾಗಿರುವ ನರೇಗಾ ಕೆಲಸದ ಬಗ್ಗೆ ಮಾಹಿತಿ ನೀಡಿದರು. ಸೆಲ್ಕೊ ಸೋಲಾರ್ ವ್ಯವಸ್ಥಾಪಕರಾದ ಸುಧಾಕರ ಶೆಟ್ಟಿಯವರು ಸುಸ್ಥಿರ ಅಭಿವೃದ್ಧಿಗೆ ಸೌರಶಕ್ತಿ ವಿದ್ಯುತ್ ಬಳಕೆ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸವಿತಾ ಈಶ್ವರ ಹೆಗ್ಡೆಯವರ ಮನೆಗೆ ಸೌರಶಕ್ತಿ ವಿದ್ಯುತ್ ದೀಪಕ್ಕೆ ಚಾಲನೆ ನೀಡಲಾಯಿತು. ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಕೃಷ್ಣ ಮೂಲ್ಯ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೆಲ್ಕೊ ಸೋಲಾರ್ ಚಿದಾನಂದ, ಅಂಗನವಾಡಿ ಕಾರ್ಯಕರ್ತೆ ರೇಖಾ ಬೇರಿಕೆ, ಪ್ರೇರಕಿ ಮಮತಾ ಪಡ್ನೂರು ಉಪಸ್ಥಿತರಿದ್ದರು. ಪ್ರೇರಕಿ ಅರುಣಾ ಡಿ ಸ್ವಾಗತಿಸಿ ವಂದಿಸಿದರು.