HomePage_Banner
HomePage_Banner
HomePage_Banner
HomePage_Banner

ಕ್ಷಮಿಸಿಬಿಡವ್ವಾ…! ಕವಿತೆಯ ಮೂಲಕ ತನ್ನವ್ವನ ನೆನೆದ ಪುತ್ತೂರು ನಗರ ಠಾಣಾ ಪೊಲೀಸ್

Puttur_Advt_NewsUnder_1
Puttur_Advt_NewsUnder_1

ಒಳ್ಳೋಳ್ಳೆ ಬಟ್ಟೆಗಳ
ಉಡಲಿಲ್ಲ ತೊಡಲಿಲ್ಲ
ಆಭರಣಗಳ ಆಡಂಬರದ
ಗೊಡವೆಯೇ ಇವಳಿಗಿಲ್ಲ..

ಗವ್ವೆನುವ ಕತ್ತಲೆ ಮದ್ಯೆ
ಹರಕಲು ಕಂಬಳಿ ಹೊದ್ದು
ಮುರಕಲು ಮನೆಯ ಸಿಂಗರಿಸಿ,
ನಿತ್ಯ ಬದುಕಿನ ಭವಣೆಗೆ
ಮತ್ತೇ ಅಡಿ ಇಟ್ಟು ಒಪ್ಪತ್ತಿನ ಒಡಲು ತುಂಬಲು ತಪ್ಪದೇ ನಡೆದಳು.

ಶ್ರೀಮಂತರ ಮನೆಯಲ್ಲಿ
ಕಸ ಮುಸುರೆ ಕಾಯಕ ಮಾಡಿ
ಮನೆಯೋಡತಿ ನೀಡಿದ ಹಿಡಿಬೆಲ್ಲವ ಸೆರಗಿನ ತುದಿಯಲ್ಲಿ ಗಂಟಿಕ್ಕಿ ತಂದು,
ಮಗನ ಬಾಯಿ ಸಿಹಿ ಮಾಡಿ
ಅಡಿಗಡಿಗೆ ಬಡಿದಾಡುವ
ಅಪರೂಪದ ಜೀವ.

ಮಕ್ಕಳ ಜೀವನದ
ರೂಪುರೇಷೆಗಳ ನೀಲನಕ್ಷೆಗೆ,
ತನ್ನೊಡಲ ಹಸಿವು ತೃಷೆಗಳ
ಅನವರತ ಮರೆತು,
ಬೇವನ್ನೇ ಬೆಲ್ಲವೆಂದ
ಬಲ್ಲವರ ಗುರು ಇವಳು.

ನನ್ನವ್ವ ಕಪ್ಪು,ಮುಪ್ಪು,
ಹರಕಲು ಸೀರೆ ಸಣಕಲ ದೇಹ,
ಮಾಂಸವಿಲ್ಲ ಮೈಯಲ್ಲಿ
ಬರಿ ಮೂಳೆಗಳ ಹಂದರ,
ಇದ್ಯಾವ ಕೊರತೆ ನನ್ನ ಗಮನಕೆ ತರದೆ,
ನಾ ನಕ್ಕಾಗ ನಕ್ಕುಅತ್ತಾ ಅತ್ತು,
ಹತ್ತೂರ ದೊರೆ ನೀನಾಗು ಮಗನೇ
ಎಂದೂ ಹರಸಿದ ಹಡೆದವ್ವ.

ನೌಕರಿ ಮಾಡುವ ಮಗನಿಗೆ
ಹಣ್ಣಾದ ತಾಯಿಯ ಚಾಕರಿ
ಮಾಡುವ ಹಂಬಲವಿಲ್ಲ,
ಕ್ಷಮಿಸಿಬಿಡು ನನ್ನವ್ವ
ನೀ ಮಾಡಿ ತುತ್ತುಣಿಸಿದ
ರೊಟ್ಟಿಯ ಅಚ್ಚನ್ನು ಮರೆತಿದ್ದೆನೆ‌,
ಮೋಹ ಮಾಯೆಯ ಬಲೆಯಲ್ಲಿ ಬಿದ್ದು
ಎಲುಬಿಲ್ಲದ ನಾಲಿಗೆ ಹಲವು ಮಾತಾಡಿತು…

🖊️ಶ್ರೀಶೈಲ.ಎಂ.ಕೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

3 Comments

  1. Vasanth

    ನೈಜ ಜೀವನವನ್ನು ಕಾಗದಕ್ಕಿಳಿಸಿದ ಶೈಲಿ ತುಂಬಾ ಚೆನ್ನಾಗಿದೆ. ಕವಿ ಹೃದಯದ ಪೊಲೀಸಣ್ಣನಿಗೆ ನಮಸ್ಕಾರಗಳು

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.